ದರ್ಶನ್ ಹುಟ್ಟುಹಬ್ಬಕ್ಕೆ ತೆಲುಗು ಅಭಿಮಾನಿಯಿಂದ ಉಚಿತ ಹೇರ್ ಕಟಿಂಗ್, ಶೇವಿಂಗ್!

ಮಂಡ್ಯ: ಉಚಿತವಾಗಿ ಹೇರ್ ಕಟಿಂಗ್ ಮತ್ತು ಶೇವಿಂಗ್ ಮಾಡುವ ಮೂಲಕ ಚಾಲೆಂಜಿಂಗ್ ಸ್ಟಾರ್ ಅಭಿಮಾನಿಯೊಬ್ಬ ಮಂಡ್ಯದಲ್ಲಿ ವಿಭಿನ್ನವಾಗಿ ದರ್ಶನ್ ಹುಟ್ಟುಹಬ್ಬ ಆಚರಿಸಿದ್ದಾರೆ.

ಮೂಲತಃ ಆಂಧ್ರಪ್ರದೇಶದವರಾದ ಓಂಕಾರ್ ಕಳೆದ ಹತ್ತು ವರ್ಷಗಳ ಹಿಂದೆ ಮಂಡ್ಯಕ್ಕೆ ಉದ್ಯೋಗಕ್ಕಾಗಿ ಆಗಮಿಸಿದ್ದರು. ಆರಂಭದಲ್ಲಿ ಬೇರೆಯವರ ಸಲೂನ್‍ನಲ್ಲಿ ಕೆಲಸ ಮಾಡುತ್ತಿದ್ದ ಓಂಕಾರ್ ಇದೀಗ ಮಂಡ್ಯದ ಬನ್ನೂರು ರಸ್ತೆಯಲ್ಲಿ ಓಂಕಾರ್ ಮೆನ್ಸ್ ಪಾರ್ಲರ್ ತೆರೆದಿದ್ದಾರೆ.

ಆರಂಭದಿಂದಲೂ ದರ್ಶನ್ ಸಿನಿಮಾಗಳನ್ನು ರಿಲೀಸ್ ಆದ ದಿನವೇ ನೋಡುವ ಓಂಕಾರ್ ಮನೆ ಭಾಷೆ ತೆಲುಗು ಆಗಿದ್ದರೂ, ಕನ್ನಡದ ದರ್ಶನ್ ಎಂದರೆ ಅಚ್ಚುಮೆಚ್ಚು. ಇಂದಿಗೂ ಓಂಕಾರ್ ತಂದೆ-ತಾಯಿ ಸೇರಿದಂತೆ ಕುಟುಂಬದವರೆಲ್ಲ ಆಂಧ್ರದಲ್ಲಿ ನೆಲೆಸಿದ್ದಾರೆ.

ಕನ್ನಡದವರೇ ತೆಲುಗು ಸಿನಿಮಾಗಳನ್ನು ಮುಗಿಬಿದ್ದು ನೋಡುವಾಗ ಓಂಕಾರ್ ಮಾತ್ರ ದರ್ಶನ್ ಸಿನಿಮಾವನ್ನು ಎಷ್ಟೇ ಕಷ್ಟ ಆದ್ದರೂ ಬಿಡದೇ ಮೊದಲ ದಿನವೇ ನೋಡುತ್ತಾರೆ. ತನ್ನ ಅಭಿಮಾನದ ಸಂಕೇತವಾಗಿ ಸಲೂನ್‍ ಮುಂದೆ ಕೇಕ್ ಕತ್ತರಿಸಿ, ಸಿಹಿ ಹಂಚಿ ಸಂಭ್ರಮಿಸಿದ್ದಾರೆ. ಜೊತೆಗೆ ಹುಟ್ಟು ಹಬ್ಬದ ಪ್ರಯುಕ್ತ ಉಚಿತ ಕಟಿಂಗ್, ಶೇವಿಂಗ್ ಮಾಡಿ ಅಭಿಮಾನ ಮೆರೆದಿದ್ದಾನೆ.

ದರ್ಶನ್ ಭೇಟಿ ಮಾಡಲು ಎಷ್ಟೇ ಪ್ರಯತ್ನ ಪಟ್ಟರು ಸಾಧ್ಯವಾಗಿಲ್ಲ. ಒಂದು ಬಾರಿಯಾದರೂ ನಟನನ್ನು ನೋಡಬೇಕು ಎನ್ನುವ ಆಸೆಯನ್ನು ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಸಾರಥಿಗೆ 41ನೇ ಹುಟ್ಟುಹಬ್ಬದ ಸಂಭ್ರಮ- ಅಭಿಮಾನಿಗಳ ಜೊತೆ ಕೇಕ್ ಕತ್ತರಿಸಿ ದರ್ಶನ್ ಸಂಭ್ರಮ

Comments

Leave a Reply

Your email address will not be published. Required fields are marked *