ಮಹಿಳೆಯರ ಉಚಿತ ಬಸ್ ಪ್ರಯಾಣ- ಪುರುಷರಿಗೆ ಟೆನ್ಶನ್ ಶುರು!

ಬೆಂಗಳೂರು: ರಾಜ್ಯದಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣ (Free Bus Ticket For Women) ವಿಚಾರ ಚರ್ಚೆಯಲ್ಲಿರುವಾಗಲೇ ಪುರುಷರಿಗೆ ಟೆನ್ಶನ್ ಶುರುವಾಗಿದೆ.

ಹೌದು. ಮಹಿಳೆಯರಿಗೆ ಉಚಿತ ಪ್ರಯಾಣದ ಆಫರ್ ನಿಂದಾಗಿ ಪುರುಷರಿಗೆ ಬಸ್ ನಲ್ಲಿ ಸೀಟ್ ಸಿಗುತ್ತೋ ಇಲ್ವೋ ಅನ್ನೋ ಆತಂಕ ಆರಂಭವಾಗಿದೆ. ಮಹಿಳೆಯರಿಗೆ ಮೀಸಲಾಗಿರುವ ಸೀಟಿನಲ್ಲಷ್ಟೇ ಮಹಿಳೆಯರು ಕೂರಲಿ, ಹಿಂದೆ ಸೀಟಿನಲ್ಲಿ ಕೂತ್ರೆ ದಂಡ ಹಾಕಲಿ ಅಂತಾ ನಯಾ ಬೇಡಿಕೆಯೊಂದು ಎದ್ದಿದೆ.

 

ಪುರುಷರ ಆಸನದಲ್ಲಿಯೂ ಉಚಿತ ಪ್ರಯಾಣ ಅಂತಾ ಮಹಿಳೆಯರು ಕೂತರೆ ನಾವೆಲ್ಲಿ ಹೋಗೋಣ ಅಂತಾ ಪುರುಷ ಪ್ರಯಾಣಿಕರು ಹೇಳುತ್ತಿದ್ದಾರೆ. ಕೆಲವು ಮಹಿಳೆಯರು ಉಚಿತ ಪ್ರಯಾಣದ ಯೋಜನೆಯನ್ನು ಸ್ವಾಗತಿಸಿದರೆ, ಇನ್ನೂ ಕೆಲವರು ನಮ್ಮ ಸೀಟು ನಮಗೇ ಇರಲಿ ಅಂತಾ ಬೇಡಿಕೆ ಇಟ್ಟಿದ್ದಾರೆ. ಒಟ್ಟಿನಲ್ಲಿ ಮಹಿಳೆಯರ ಫ್ರೀ ಬಸ್ ಪ್ರಯಾಣದಿಂದ ಪುರುಷರಿಗೆ ಸೀಟ್ ಟೆನ್ಶನ್ (Men Seat Tension) ಎದುರಾಗಿರುವುದು ಸುಳ್ಳಲ್ಲ.

ರಾಜ್ಯದ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣದ ಗ್ಯಾರಂಟಿಯಾಗಿದ್ದು, ಈ ಗ್ಯಾರಂಟಿ ಜಾರಿಗೆ ಸರ್ಕಾರಕ್ಕೆ `ಮನಿ’ ಟೆನ್ಷನ್ ಕೂಡ ಶುರುವಾಗಿದೆ. ನಾಳಿನ ಕ್ಯಾಬಿನೆಟ್‍ (Cabinet) ಗೂ ಮುನ್ನ ಆದಾಯ ಕ್ರೂಢೀಕರಣದ ಟೆನ್ಶನ್ ಎದುರಾಗಿದ್ದು, ಈ ಹಿನ್ನೆಲೆಯಲ್ಲಿ ಸಾರಿಗೆ ಸಚಿವ ರಾಮಲಿಂಗರೆಡ್ಡಿ (Ramalinga Reddy) ನೇತೃತ್ವದಲ್ಲಿ ಸರಣಿ ಸಭೆ ನಡೆಸಲಾಗಿದೆ. ನಿಗಮಗಳ ಕಚೇರಿಯಲ್ಲಿ ಬ್ಯಾಕ್ ಟು ಬ್ಯಾಕ್ ಹೈವೋಲ್ಟೇಜ್ ಸಭೆ ನಡೆಯುತ್ತಿದೆ. ಮೊನ್ನೆ 4 ನಿಗಮಗಳ ಎಂಡಿಗಳನ್ನ ಕರೆದು ಸಭೆ ನಡೆಸಿದ್ದ ಸಚಿವರು, ಇಂದು ಮತ್ತೆ ಪ್ರತ್ಯೇಕವಾಗಿ ನಿಗಮಗಳಿಗೆ ಭೇಟಿ ನೀಡಿ ಸಭೆ ನಡೆಸಿದ್ದಾರೆ.