ಅಕ್ರಮವಾಗಿ ಗಡಿ ಪ್ರವೇಶಿಸುತ್ತಿದ್ದ ನಾಲ್ವರು ಉಗ್ರರನ್ನು ಸದೆಬಡಿದ ಸೇನೆ

ಕಾಶ್ಮೀರ: ಶನಿವಾರ ಬೆಳಗ್ಗೆ ಉತ್ತರ ಕಾಶ್ಮೀರದ ತಂಗ್ದಾರ್ ವಲಯದಲ್ಲಿ ಅಕ್ರಮವಾಗಿ ಗಡಿ ಪ್ರವೇಶ ಮಾಡುತ್ತಿದ್ದ 4 ಮಂದಿ ಉಗ್ರರನ್ನು ಭಾರತೀಯ ಸೈನಿಕರು ಹೊಡೆದುರುಳಿಸಿದ್ದಾರೆ.

ಶನಿವಾರ ಬೆಳಗ್ಗೆ ಉತ್ತರ ಕಾಶ್ಮೀರದ ತಂಗ್ದಾರ್ ವಲಯದಲ್ಲಿ ಅಕ್ರಮವಾಗಿ ಗಡಿ ಪ್ರವೇಶ ಮಾಡುತ್ತಿದ್ದ 4 ಮಂದಿ ಉಗ್ರರನ್ನು ಸದೆಬಡೆಯಲಾಗಿದೆ. ಕಾರ್ಯಾಚರಣೆಯನ್ನು ಮುಂದುವರೆಸುತ್ತಿದ್ದು ಹೆಚ್ಚಿನ ಉಗ್ರರು ಇರಬಹುದೆಂದು ಶಂಕಿಸಲಾಗಿದೆ ಎಂದು ಭಾರತೀಯ ಸೇನಾ ವಕ್ತಾರ ರಾಜೇಶ್ ಕಾಲಿಯಾ ತಿಳಿಸಿದ್ದಾರೆ.

ರಂಜಾನ್ ಹಬ್ಬದ ಪ್ರಯುಕ್ತ ಭಾರತದ ಗಡಿ ಪ್ರದೇಶಗಳಲ್ಲಿ ಭಾರತ ಸೇನೆಯು ಕದನ ವಿರಾಮವನ್ನು ಘೋಷಿಸಿತ್ತು. ಇಂದು ಭಾರತದ ಗಡಿ ನಿಯಂತ್ರಣ ರೇಖೆಯ ಬಳಿ ಉಗ್ರರು ಅಕ್ರಮವಾಗಿ ಪ್ರವೇಶವನ್ನು ಕಂಡು ಬಂದ ಹಿನ್ನೆಲೆಯಲ್ಲಿ ಅವರನ್ನು ಹೊಡೆದುರುಳಿಸಲಾಗಿದೆ. ಕಳೆದೆರಡು ದಿನಗಳಿಂದ ಭಾರೀ ಗುಂಡಿನ ಚಕಮಕಿ ನಡೆಯುತ್ತಿದೆ ಎಂದು ವರದಿಯಾಗಿದೆ.

ವಿಶೇಷವಾಗಿ ಉತ್ತರ ಕಾಶ್ಮೀರದ ಪ್ರದೇಶಗಳಲ್ಲಿ ಹಿಮ ಕರಗುತ್ತಿರುವುದುರಿಂದ ಮುಂದಿನ ದಿನಗಳಲ್ಲಿ ಉಗ್ರರು ಈ ಗಡಿ ಪ್ರದೇಶದ ಮೂಲಕ ಒಳನುಸುಳುವ ಸಾಧ್ಯತೆ ಹೆಚ್ಚಿದೆ ಎಂದು ಸೇನಾ ವಲಯ ತಿಳಿಸಿದೆ.

Comments

Leave a Reply

Your email address will not be published. Required fields are marked *