ಮಂಡ್ಯದಲ್ಲಿ ಸಿಲಿಂಡರ್ ಬದಲಿಸುವಾಗ ಗ್ಯಾಸ್ ಲೀಕ್..!

ಮಂಡ್ಯ: ಖಾಲಿಯಾದ ಸಿಲಿಂಡರ್ ಬದಲಿಸಿ ಹೊಸ ಸಿಲಿಂಡರ್ ಅಳವಡಿಸುವಾಗ ಇದ್ದಕ್ಕಿದ್ದಂತೆ ಗ್ಯಾಸ್ ಲೀಕ್ ಆಗಿದ್ದು, ನಾಲ್ವರಿಗೆ ಸುಟ್ಟ ಗಾಯಗಳಾಗಿ ಮನೆಯವರೆಲ್ಲ ಅಪಾಯದಿಂದ ಪಾರಾದ ಘಟನೆ ಜಿಲ್ಲೆಯ ಮದ್ದೂರು ಪಟ್ಟಣದ ಚನ್ನೇಗೌಡ ಬಡಾವಣೆಯಲ್ಲಿ ನಡೆದಿದೆ.

ಮಂಜು, ರಶ್ಮಿ, ಮಂಗಳ ಹಾಗೂ ಸುಶೀಲಮ್ಮ ಗಾಯಗೊಂಡವರು. ಸುಶೀಲಮ್ಮ ಮನೆಯಲ್ಲಿ ಅಡುಗೆ ಸಿಲಿಂಡರ್ ಖಾಲಿಯಾಗಿದ್ದರಿಂದ ಹೊಸ ಸಿಲಿಂಡರ್ ಅಳವಡಿಸಲು ಕ್ಯಾಪ್ ತೆಗೆದಿದ್ದಾರೆ. ಆದರೆ ಇದ್ದಕ್ಕಿದ್ದಂತೆ ಹೊಸ ಸಿಲಿಂಡರ್‍ನಿಂದ ಗ್ಯಾಸ್ ಲೀಕಾಗಲು ಆರಂಭಿಸಿದೆ.

ಸುಶೀಲಮ್ಮ ಭಯಗೊಂಡು ಗ್ಯಾಸ್ ಲೀಕಾಗದಂತೆ ಅದುಮಿಟ್ಟುಕೊಂಡು ಮನೆಯವರನ್ನೆಲ್ಲ ಹೊರಗೆ ಹೋಗುವಂತೆ ಕೂಗಿಕೊಂಡಿದ್ದಾರೆ. ತಕ್ಷಣ ಮನೆಯವರೆಲ್ಲ ಹೊರಗೆ ಹೋಗಿದ್ದಾರೆ. ಆದರೆ ಈ ವೇಳೆ ಮನೆಯಲ್ಲಿ ಹರಡಿದ್ದ ಗ್ಯಾಸ್‍ಗೆ ಒಂದು ಕ್ಷಣ ಬೆಂಕಿ ತಗುಲಿದ್ದರಿಂದ ನಾಲ್ವರಿಗೆ ಸಣ್ಣಪುಟ್ಟ ಸುಟ್ಟಗಾಯಗಳಾಗಿದ್ದು, ಅದೃಷ್ಟವಶಾತ್ ಎಲ್ಲರೂ ಪ್ರಣಾಪಾಯದಿಂದ ಪಾರಾಗಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv

Comments

Leave a Reply

Your email address will not be published. Required fields are marked *