ಉದ್ಯಮಿ ಬೆದರಿಸಿ 1.5 ಕೋಟಿ ಸುಲಿಗೆ ಆರೋಪ – ನಾಲ್ವರು ಜಿಎಸ್‌ಟಿ ಅಧಿಕಾರಿಗಳು ಅರೆಸ್ಟ್

GST

ಬೆಂಗಳೂರು: ನಗರದಲ್ಲಿ ಉದ್ಯಮಿಯ ಅಪಹರಣ, ಬೆದರಿಕೆ, ಹಣಕ್ಕೆ ಬೇಡಿಕೆ ಆರೋಪದ ಮೇಲೆ ಕೇಂದ್ರದ ನಾಲ್ವರು ಜಿಎಸ್‌ಟಿ ಅಧಿಕಾರಿಗಳನ್ನು ಸಿಸಿಬಿ ಬಂಧಿಸಿದೆ.

ಉದ್ಯಮಿ ಕೇಶವ್ ಎನ್ನುವವರ ಮನೆ ಮೇಲೆ ದಾಳಿ ಮಾಡಿ, ಒಂದೂವರೆ ಕೋಟಿ ಲಂಚ ಪಡೆದಿದ್ದ ಆರೋಪ ನಾಲ್ವರ ವಿರುದ್ಧ ಕೇಳಿಬಂದಿತ್ತು. ಪ್ರಕರಣವೊಂದನ್ನು ಮುಚ್ಚಿ ಹಾಕಲು 1.5 ಕೋಟಿ ಪಡೆದು ಅಧಿಕಾರಿಗಳು ಎಸ್ಕೇಪ್ ಆಗಿದ್ದರು. ಈ ಸಂಬಂಧ ಉದ್ಯಮಿ ಕೇಶವ್ ಬೈಯ್ಯಪ್ಪನಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.

ಈ ಕೇಸ್ ನಂತರ ಸಿಸಿಬಿಗೆ ವರ್ಗವಾಗಿತ್ತು. ಈ ಪ್ರಕರಣದ ತನಿಖೆ ನಡೆಸಿದ ಸಿಸಿಬಿ ಪೊಲೀಸರು, ಜಿಎಸ್‌ಟಿಯ ಕೇಂದ್ರ ಗುಪ್ತದಳದ ಮಹಿಳಾ ಅಧಿಕಾರಿ ಸೊನಾಲಿ ಸಹಾಯ್, ಸೀನಿಯರ್ ಇಂಟಲಿಜೆನ್ಸ್ ಆಫೀಸರ್ ಮನೋಜ್ ಸೈನಿ ಮತ್ತು ನಾಗೇಶ್‌ಬಾಬು ಮತ್ತು ಅಧೀಕ್ಷಕ ಅಭಿಷೇಕ್‌ನನ್ನು ಬಂಧಿಸಿದ್ದಾರೆ.