ಮಡಿಕೇರಿ: ಕೊಡಗಿನ ಜೋಡುಪಾಲದಲ್ಲಿ ಸಂತ್ರಸ್ತ ಜನರ ಸ್ಥಿತಿ ಮನಕಲವಂತಿದ್ದರೆ ಮತ್ತೊಂದೆಡೆ ಮೂಕಪ್ರಾಣಿಗಳ ಸ್ಥಿತಿ ಶೋಚನೀಯವಾಗಿದ್ದು, ಜಾನುವಾರುಗಳು ಸಾವಿನ ದಾರಿ ಹಿಡಿದಿದೆ.
ಮಹಾಮಳೆಗೆ ತತ್ತರಿಸಿದ್ದ ಮಡಿಕೇರಿಯ ನಿವಾಸಿಗಳು ಪರಿಹಾರ ಕೇಂದ್ರದಲ್ಲಿ ಆಶ್ರಯ ಪಡೆದಿದ್ದು, ಮಳೆ ಪ್ರಮಾಣ ಕಡಿಮೆಯಾದ ಕಾರಣ ತಾವು ವಾಸವಿದ್ದ ಪ್ರದೇಶದ ಕಡೆ ತೆರಳಿದ್ದರು. ಆದರೆ ತಾವು ವಾಸವಿದ್ದ ಮನೆಗಳ ಸ್ಥಿತಿ ಕಂಡು ಕಾಂಗಾಲಾದ ಅವರು, ಜಾನುವಾರುಗಳ ಸಾವಿನ ದಾರಿ ಹಿಡಿದಿರುವುದನ್ನು ಕಂಡು ಕಣ್ಣೀರು ಹಾಕಿದ್ದಾರೆ.

ಜೋಡುಪಾಲ ಜಂಕ್ಷನ್ ಬಳಿಯಿಂದ ಬೆಟ್ಟಗಳ ಮಧ್ಯೆ ಮೂರು ಕಿಲೋಮೀಟರ್ ಕ್ರಮಿಸಿದಾಗ ಸಿಕ್ಕ ದೃಶ್ಯ ಮನಕಲಕುವಂತಿತ್ತು. ಕಾಲುದಾರಿಯಲ್ಲೇ ಎರಡು ದನಗಳು ಅಂಗಾತ ಬಿದ್ದು ಸಾವನ್ನಪ್ಪಿದ್ದವು. ಹಲವು ದಿನಗಳ ಹಿಂದೆಯೇ ಮೃತಪಟ್ಟ ಕಾರಣ ಸತ್ತು ಕೊಳೆತು ದುರ್ನಾತ ಇಡೀ ಪ್ರದೇಶದಲ್ಲಿ ಹರಡಿತ್ತು. ಸಾವನ್ನಪ್ಪಿರುವ ಜಾನುವಾರ ಮಣ್ಣು ಮಾಡಲು ಯಾವುದೇ ವ್ಯವಸ್ಥೆ ಇಲ್ಲದೇ ಸ್ವಯಂ ಸೇವಕರು ಇವುಗಳ ಮಣ್ಣು ಮಾಡಲು ಮುಂದಾಗಿದ್ದಾರೆ. ಹಲವು ಮನೆಗಳಲ್ಲಿ ಕುಸಿದು ಬಿದ್ದಿದ್ದರೂ ಕೂಡ ಅವಶೇಷಗಳ ಮೇಲೆ ನಿಂತ ಪ್ರಾಣಿಗಳು ಮಾಲೀಕರ ದಾರಿ ಕಾಯುತ್ತಾ ಕುಳಿತಿತ್ತು. ಇದನ್ನು ಓದಿ: ಜೋಡುಪಾಲ ದುರಂತ: ಶೋಚನೀಯ ಸ್ಥಿತಿಯಲ್ಲಿ ಮೂಕಪ್ರಾಣಿಗಳು-ಸಾವಿನ ದಾರಿ ಹಿಡಿದ ಜಾನುವಾರುಗಳು
ಈ ಪ್ರದೇಶದ ಹಲವು ಮನೆಗಳು ಗುಡ್ಡ ಕುಸಿದ ಕಾರಣ ಸಂಪೂರ್ಣ ನೆಲ ಸಮವಾಗಿದ್ದನ್ನು ಕಂಡ ಮನೆ ಮಾಲೀಕರು ಕಣ್ಣೀರು ಹಾಕಿದ್ದರು. ಅವರೊಂದಿಗೆ ರಕ್ಷಣಾ ಕಾರ್ಯಕ್ಕೆ ಬಂದಿದ್ದ ಸ್ವಯಂ ಸೇವಕರು ಏನು ಮಾಡುವುದೆಂದು ತೋಚದೆ ಸುಮ್ಮನಾಗಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv


Leave a Reply