ಎಸ್.ಎಂ ಕೃಷ್ಣರಿಗೆ ಪದ್ಮವಿಭೂಷಣ ಪ್ರಶಸ್ತಿ ಪ್ರದಾನ

ನವದೆಹಲಿ: 2023ರ ಸಾಲಿನ ಪ್ರತಿಷ್ಠಿತ ಪದ್ಮಪ್ರಶಸ್ತಿ ಪ್ರದಾನ ಸಮಾರಂಭ ರಾಷ್ಟ್ರಪತಿ ಭವನದಲ್ಲಿ ನಡೀತು. ನಾಡಿನ ಹಿರಿಯ ಧುರೀಣ, 91 ವರ್ಷದ ಎಸ್‍ಎಂ ಕೃಷ್ಣ (S.M Krishna) ಅವರಿಗೆ ದೇಶದ ಎರಡನೇ ಅತ್ಯುನ್ನತ ನಾಗರಿಕ ಗೌರವವಾದ ಪದ್ಮವಿಭೂಷಣ (Padma Vibhushan) ಪ್ರಶಸ್ತಿ ನೀಡಿ ರಾಷ್ಟ್ರಪತಿ ದ್ರೌಪದಿ ಮುರ್ಮು ಸಮ್ಮಾನಿಸಿದ್ರು.

ಖ್ಯಾತ ಕಾದಂಬರಿಕಾರ ಎಸ್‍ಎಲ್ ಬೈರಪ್ಪ (S.L Byrappa) ಮತ್ತು ಇನ್ಫೋಸಿಸ್ ಫೌಂಡೇಶನ್‍ನ ಸುಧಾಮೂರ್ತಿ (Sudhamurthy) ಅವರಿಗೆ ಪದ್ಮಭೂಷಣ ಪುರಸ್ಕಾರ ದೊರೆಯಿತು. ರಾಜ್ಯದ ಡಾ.ಖಾದರ್, ರಾಣಿ ಮಾಚಯ್ಯ, ನಾಡೋಜ ಮುನಿವೆಂಕಟಪ್ಪ, ಶಾ ರಶೀದ್ ಖಾದ್ರಿ, ಎಸ್ ಸುಬ್ರಮಣಿ ಅವರು ಪದ್ಮಶ್ರೀ ಪ್ರಶಸ್ತಿಗೆ ಭಾಜನರಾದ್ರು. ಇದನ್ನೂ ಓದಿ: 7 ಕೋಟಿ ಕನ್ನಡಿಗರಿಗೆ ಪದ್ಮವಿಭೂಷಣ ಅರ್ಪಿಸುತ್ತೇನೆ: ಎಸ್‌ಎಂ ಕೃಷ್ಣ

ವಿವಿಧ ಕ್ಷೇತ್ರಗಳಲ್ಲಿ ಗಮನಾರ್ಹ ಸಾಧನೆ ಮಾಡಿದ ಒಟ್ಟು 106 ಮಂದಿಗೆ ಪದ್ಮಪುರಸ್ಕಾರದ ಗೌರವ ಸಿಕ್ಕಿತು. ಈ ಕ್ಷಣಕ್ಕೆ ಪ್ರಧಾನಿ ಮೋದಿ ಸೇರಿ ಹಲವು ಗಣ್ಯರು ಸಾಕ್ಷಿಯಾದ್ರು. ಇದನ್ನೂ ಓದಿ: ಕಾಶ್ಮೀರದ ಗಡಿಯಲ್ಲಿ ಪುನರ್ ನಿರ್ಮಾಣಗೊಂಡ ಶಾರದಾ ಮಂದಿರ ಅಮಿತ್ ಶಾರಿಂದ ಲೋಕಾರ್ಪಣೆ

Comments

Leave a Reply

Your email address will not be published. Required fields are marked *