ಮಹಿಳೆ ಮೇಲೆ 150 ಬಾರಿ ಅತ್ಯಾಚಾರವೆಸಗಿದ ಮಾಜಿ ಕ್ರಿಕೆಟಿಗನಿಗೆ 18 ವರ್ಷ ಜೈಲು!

ಲಂಡನ್: ಮಹಿಳೆಯೊಬ್ಬರ ಮೇಲೆ 10 ವರ್ಷಗಳಲ್ಲಿ 150 ಕ್ಕೂ ಹೆಚ್ಚು ಬಾರಿ ಅತ್ಯಾಚಾರವೆಸಗಿದ ದಕ್ಷಿಣ ಆಫ್ರಿಕಾದ ಮಾಜಿ ಕ್ರಿಕೆಟ್ ಆಟಗಾರನೊಬ್ಬನಿಗೆ ನ್ಯಾಯಾಲಯ 18 ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ.

47 ವರ್ಷದ ಡಿಯೊನ್ ತಾಲ್ಜರ್ಡ್ ಎಂಬ ಬಲಗೈ ವೇಗಿ ಶಿಕ್ಷೆಗೊಳಗಾಗಿರೋ ಕ್ರಿಕೆಟರ್. ಈತ 2002 ರಿಂದ 2012 ರ ವರೆಗೆ ಮಹಿಳೆಗೆ ಬೆದರಿಕೆ ಹಾಕಿ ಅತ್ಯಾಚಾರವೆಸಗಿದ್ದ. ಒಂದು ವೇಳೆ ಅತ್ಯಾಚಾರಕ್ಕೆ ವಿರೋಧ ವ್ಯಕ್ತಪಡಿಸಿದ್ದರೆ ಗಂಭೀರ ಹಲ್ಲೆ ನಡೆಸಿ, ಕತ್ತು ಹಿಸುಕಿ ಮಣಿಕಟ್ಟನ್ನು ಮುರಿದು ಹಾಕುತ್ತಿದ್ದ. ಘಟನೆ ನಡೆದ 3 ವರ್ಷದ ಬಳಿಕ ಸಂತ್ರಸ್ತ ಮಹಿಳೆ ದೂರು ನೀಡಿ ಕಾನೂನು ಹೋರಾಟಕ್ಕಿಳಿದಿದ್ದಳು.

ಮ್ಯಾಂಚೆಸ್ಟರ್ ನಲ್ಲಿರೋ ಕೋರ್ಟ್ ನಲ್ಲಿ ಪ್ರಕರಣದ ಬಗ್ಗೆ ತನಿಖೆ ಮತ್ತು ವಿಚಾರಣೆ ವೇಳೆ ತಾಲ್ಜರ್ಡ್ 19 ಬಾರಿ ಅತ್ಯಾಚಾರ ಎಸಗಿರುವುದು ಧೃಡಪಟ್ಟಿದೆ. ಈ ಹಿನ್ನಲೆಯಲ್ಲಿ ಮ್ಯಾಂಚೆಸ್ಟರ್ ಕ್ರೌನ್ ಕೋರ್ಟ್ 18 ವರ್ಷ ಜೈಲು ಶಿಕ್ಷೆ ವಿಧಿಸಿದೆ.

1993ರಿಂದ 1999ರ ತನಕ ಬಾರ್ಡರ್ ತಂಡದ ಪರ 25 ಪ್ರಥಮ ದರ್ಜೆ ಪಂದ್ಯಗಳನ್ನಾಡಿದ್ದ ತಲ್ಜಾರ್ಡ್, ಬಳಿಕ ಇಂಗ್ಲೆಂಡ್’ನಲ್ಲಿ ನೆಲೆಸಿದ್ದ. ರೇಪ್ ಆರೋಪವನ್ನು ತಲ್ಜಾರ್ಡ್ ಸ್ನೇಹಿತರು ಅಲ್ಲಗಳೆದಿದ್ದಾರೆ.

Comments

Leave a Reply

Your email address will not be published. Required fields are marked *