ಭ್ರಷ್ಟಾಚಾರ ಆರೋಪ – ಕಾಂಗ್ರೆಸ್ ನಾಯಕ ಸಾಧು ಸಿಂಗ್ ಧರಂಸೋತ್ ಬಂಧನ

ಚಂಡೀಗಢ: ಕಾಂಗ್ರೆಸ್ ನಾಯಕ ಮತ್ತು ಮಾಜಿ ಸಚಿವ ಸಾಧು ಸಿಂಗ್ ಧರಂಸೋತ್ ಅವರನ್ನು ಭ್ರಷ್ಟಾಚಾರದ ಆರೋಪದಡಿ ವಿಚಕ್ಷಣ ದಳ (ವಿಬಿ) ಬಂಧಿಸಿದೆ. ಸಾಧು ಸಿಂಗ್ ಧರಂಸೋತ್ ಅವರು ಕ್ಯಾಪ್ಟನ್ ಅಮರಿಂದರ್ ಸಿಂಗ್ ಕ್ಯಾಬಿನೆಟ್‍ನಲ್ಲಿ ಪಂಜಾಬ್‍ನ ಅರಣ್ಯ ಮತ್ತು ಸಮಾಜ ಕಲ್ಯಾಣ ಸಚಿವರಾಗಿದ್ದರು.

ಸಾಧು ಸಿಂಗ್ ಧರಂಸೋತ್ ಅವರು ಪಂಜಾಬ್‍ನಲ್ಲಿ ಅರಣ್ಯ ಸಚಿವರಾಗಿದ್ದ ವೇಳೆ ಮರಗಳನ್ನು ಕಡಿಯಲು ಅನುಮತಿ ನೀಡುವುದ್ದಕ್ಕೆ ಲಂಚ ಪಡೆಯುತ್ತಿದ್ದರು ಎಂದು ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಐಎಎಸ್ ಅಧಿಕಾರಿಯೊಬ್ಬರು ಆರೋಪಿಸಿದ್ದರು. ಇದೀಗ ವಿಚಕ್ಷಣ ದಳ, ಸಚಿವರಾಗಿ ದುಷ್ಕೃತ್ಯ ಎಸಗಿದ್ದಕ್ಕಾಗಿ ಸಾಧು ಸಿಂಗ್ ಧರಂಸೋತ್ ವಿರುದ್ಧ ಭ್ರಷ್ಟಾಚಾರ ತಡೆ ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದಾರೆ. ಅಲ್ಲದೇ ದಲಿತ ವಿದ್ಯಾರ್ಥಿವೇತನ ಯೋಜನೆಯಲ್ಲಿ ಬಹುಕೋಟಿ ಹಗರಣದ ಮಾಸ್ಟರ್ ಮೈಂಡ್ ಆರೋಪವೂ ಸಾಧು ಸಿಂಗ್ ಧರಂಸೋತ್ ಅವರ ಮೇಲೆ ಕೇಳಿ ಬಂದಿದೆ. ಇದನ್ನೂ ಓದಿ:  ಕಾಂಗ್ರೆಸ್‍ನಲ್ಲಿ ನಲಪಾಡ್ ರೌಡಿಸಂ ಆರೋಪ – ಡಿಕೆಶಿಗೆ ದೂರು

ಇವರೊಂದಿಗೆ ಸಹಾಯಕರಾಗಿ ಕೆಲಸ ಮಾಡುತ್ತಿದ್ದ ಸ್ಥಳೀಯ ಪತ್ರಕರ್ತ ಕಮಲ್ಜಿತ್ ಸಿಂಗ್ ಅವರನ್ನು ಕೂಡ ಪೊಲೀಸರು ಬಂಧಿಸಿದ್ದಾರೆ. ಅಭಿವೃದ್ಧಿ ಯೋಜನೆಗಳನ್ನು ಕಾರ್ಯಗತಗೊಳಿಸಲು ಒಂದು ಮರವನ್ನು ಕೊಡಲಿಯಿಂದ ಕತ್ತರಿಸಲು ಗುತ್ತಿಗೆದಾರು 500 ರೂ. ದಂಡ ನೀಡಬೇಕಾಗಿತ್ತು ಎಂದು ಆರೋಪಿಸಲಾಗಿದೆ. ಇದನ್ನೂ ಓದಿ: ಕಾಶ್ಮೀರದಲ್ಲಿ ಪಾಕ್ ಭಯೋತ್ಪಾದಕನ ಎನ್‍ಕೌಂಟರ್

Comments

Leave a Reply

Your email address will not be published. Required fields are marked *