ನವದೆಹಲಿ: ಕಾಂಗ್ರೆಸ್ ಬಿಡುಗಡೆ ಮಾಡಿರುವ ಪಕ್ಷದ ಪ್ರಧಾನ ಮಂತ್ರಿಗಳ ವೀಡಿಯೋದಲ್ಲಿ ಪಿ.ವಿ.ನರಸಿಂಹ ರಾವ್ ಅವರು ಇಲ್ಲದಿರುವುದು ಸಾಮಾಜಿಕ ಮಾಧ್ಯಮದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ.
ವಂಶಾಡಳಿತಕ್ಕೆ ಸೀಮಿತವಾಗಿದ್ದ ಕಾಂಗ್ರೆಸ್ ಪಕ್ಷದಲ್ಲಿ ಕುಟುಂಬದಿಂದ ಹೊರಗಿನ ವ್ಯಕ್ತಿಯಾಗಿ ಬಂದು ಪ್ರಧಾನಿಯಾಗಿ ಛಾಪು ಮೂಡಿಸಿದ್ದ ಪಿ.ವಿ.ನರಸಿಂಹ ರಾವ್ ಅವರ ಚಿತ್ರಣವೇ ವೀಡಿಯೋದಲ್ಲಿ ಏಕಿಲ್ಲ ಎಂದು ನೆಟ್ಟಿಗರು ಪ್ರಶ್ನಿಸಿದ್ದಾರೆ. ಇದನ್ನೂ ಓದಿ: 36 ಸಾವಿರ ಮತದಿಂದ ಸೋತವರು ಮೋದಿ ಬಗ್ಗೆ ಮಾತಾಡ್ತಾರೆ: ಸಿದ್ದು ವಿರುದ್ಧ ವಿಶ್ವನಾಥ್ ಕಿಡಿ

ವೀಡಿಯೋದಲ್ಲಿ ಕಾಂಗ್ರೆಸ್ ಹಾಗೂ ಭಾರತದ ಪ್ರಧಾನಿಗಳಾದ ಪ್ರಧಾನಿ ಜವಾಹರ್‌ಲಾಲ್ ನೆಹರೂ, ಲಾಲ್ ಬಹದ್ದೂರ್ ಶಾಸ್ತ್ರಿ, ಇಂದಿರಾ ಗಾಂಧಿ, ರಾಜೀವ್ ಗಾಂಧಿ ಹಾಗೂ ಮನಮೋಹನ್ ಸಿಂಗ್ ಅವರ ವೀಡಿಯೋ ಇದೆ. ಕಾಂಗ್ರೆಸ್‌ನ ಪ್ರಮುಖರಾದ ಮಹಾತ್ಮ ಗಾಂಧಿ, ಸರ್ದಾರ್ ವಲ್ಲಭಬಾಯ್ ಪಾಟೀಲ್ ಅವರು ಕೂಡ ಇದ್ದಾರೆ. ಆದರೆ ಪಿ.ವಿ.ನರಸಿಂಹ ರಾವ್ ಅವರು ಇಲ್ಲ ಎಂಬುದು ಚರ್ಚೆಯನ್ನು ಹುಟ್ಟುಹಾಕಿದೆ.
https://twitter.com/VikasTexts/status/1503731111729545222
ಸಾಮಾಜಿಕ ಮಾಧ್ಯಮದಲ್ಲಿ 32 ಸೆಕೆಂಡ್ ವೀಡಿಯೋ ಸಿಕ್ಕಾಪಟ್ಟೆ ವೈರಲ್ ಆಗಿದೆ. ಪಿ.ವಿ.ನರಸಿಂಹ ರಾವ್ ಸೇರಿದಂತೆ ಕಾಂಗ್ರೆಸ್ ಏಳ್ಗೆಯಲ್ಲಿ ಪ್ರಮುಖ ಪಾತ್ರ ವಹಿಸಿದವರು ವೀಡಿಯೋದಲ್ಲಿ ಇಲ್ಲ ಎಂದು ಅನೇಕರು ಪ್ರಶ್ನಿಸಿದ್ದಾರೆ. ಇದನ್ನೂ ಓದಿ: ಹಿಜಬ್ ಧರಿಸುವುದು ಇಸ್ಲಾಂ ಧರ್ಮದಲ್ಲಿ ಅತ್ಯಗತ್ಯ: ಹಿರಿಯ ವಕೀಲ ಎ.ಎಂ.ಧಾರ್

ಪಂಚರಾಜ್ಯ ಚುನಾವಣೆಯಲ್ಲಿ ಕಾಂಗ್ರೆಸ್ ಹೀನಾಯ ಸೋಲನುಭವಿಸಿದ ನಂತರ ಈ ವೀಡಿಯೋ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ವೀಡಿಯೋ ಕೊನೆಯಲ್ಲಿ, ʻನಾವು ಸವಾಲುಗಳನ್ನು ಎದುರಿಸುತ್ತಿರುವುದು ಇದೇ ಮೊದಲೇನಲ್ಲʼ ಎಂದು ಬರೆಯಲಾಗಿದೆ.

Leave a Reply