ಗೊಣ್ಣೆ ಸುರಿಸಿಕೊಂಡಿದ್ದವನು ಪ್ರಧಾನಿ ಆಗಲಿಲ್ವೆ- ಹಾಸನದಲ್ಲಿ ಎಚ್‍ಡಿಡಿ ನಗೆಚಟಾಕಿ

ಹಾಸನ: ಮೊಮ್ಮಗ ಪ್ರಜ್ವಲ್ ನನ್ನು ಹಾಸನದಲ್ಲಿಯೇ ಪ್ರಚಾರ ಮಾಡುವಂತೆ ಹೇಳಿದ್ದೇನೆ. ಅವನ ಕುರಿತು ಯಾರೂ ನಿರ್ಲಕ್ಷ್ಯ ಮಾಡಬೇಡಿ. ನಾನು ಕೂಡ ಹರದನಹಳ್ಳಿಯಲ್ಲಿ ಗೊಣ್ಣೆ ಸುರಿಸಿಕೊಂಡು ಇದ್ದವನು. ಬಳಿಕ ಪ್ರಧಾನಿ ಆಗಲಿಲ್ವೆ ಎಂದು ನಗೆ ಚಟಾಕಿ ಹಾರಿಸಿದರು.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿಎಂ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ದೇವೇಗೌಡರ ಮಕ್ಕಳ ಕುರಿತು ಮುಖ್ಯಮಂತ್ರಿಗೆ ಯಾಕಿಷ್ಟು ದ್ವೇಷ. ನನ್ನ ಮೊಮ್ಮಗನ ಕುರಿತು ಇಲ್ಲದ ಆರೋಪ ಮಾಡ್ತಾರೆ. ಕಾಂಗ್ರೆಸ್ ನವರು ಇಷ್ಟೊಂದು ಕೆಳಮಟ್ಟಕ್ಕೆ ಇಳಿದಿದ್ದಾರೆ. ಹಾಗಾದ್ರೆ ಕಾಂಗ್ರೆಸ್ ಮುಸ್ಲಿಂರನ್ನು ದತ್ತು ತೆಗೆದುಕೊಂಡಿದಿಯಾ?. ಉತ್ತರ ಪ್ರದೇಶದಲ್ಲಿ ಕಾಂಗ್ರೆಸ್ ಎಲ್ಲಿದೆ? ಪ್ರಜ್ವಲ್ ಹಾಸನದಲ್ಲಿಯೇ ಪ್ರಚಾರ ಮಾಡುತ್ತಾನೆ. ಅವನ ಬಗ್ಗೆ ಯಾರೂ ನಿರ್ಲಕ್ಷ್ಯ ಮಾಡಬೇಡಿ ಅಂತ ಕಾಂಗ್ರೆಸ್ ವಿರುದ್ಧ ಕಿಡಿಕಾರಿದ್ರು.

ಗೌರಿಬಿದನೂರು ಘಟನೆ ಕಾಂಗ್ರೆಸ್ ನ ಹೇಯ ಕೃತ್ಯ. 40 ಕಡೆ ಕಾರ್ಯಕ್ರಮ ನಿಗಧಿ ಆಗಿದೆ. ಎಲ್ಲ ಕಡೆ ಪ್ರಚಾರಕ್ಕೆ ಹೋಗ್ತೇನೆ. ನಮ್ಮಲ್ಲಿರುವ ಎಲ್ಲ ನಾಯಕರು ಚುನಾವಣೆಯಲ್ಲಿ ಸ್ಪರ್ಧಿಸಿರೋದ್ರಿಂದ ಪ್ರಚಾರ ಕಾರ್ಯದಲ್ಲಿ ನಾನು ಮತ್ತು ಕುಮಾರಸ್ವಾಮಿ ಓಡಾಡಲೇಬೇಕು. ನಮ್ಮಲ್ಲಿ ಯಾರೂ ಸ್ಟಾರ್ ಕ್ಯಾಂಪೆನರ್ ಇಲ್ಲ. ಚಂದ್ರಶೇಖರ್ ರಾವ್ ಮತ್ತು ಮಾಯಾವತಿ ಮತ್ತೆ ಪ್ರಚಾರಕ್ಕೆ ಬರುತ್ತಾರೆ. ಓವೈಸಿ ಸಹ ರಾಜ್ಯದಲ್ಲಿ ಪ್ರವಾಸ ನಡೆಸಲಿದ್ದಾರೆ ಅಂತ ಹೇಳಿದ್ರು.

ಕಾಂಗ್ರೆಸ್ ಪ್ರಣಾಳಿಕೆ ಕುರಿತು ಪ್ರತಿಕ್ರಿಯಿಸಿ, ಲೋಕಾಯುಕ್ತ ತಂದಿದ್ದು ನಾವು. ಅದನ್ನು ನಾಶ ಮಾಡಿದ್ದು ಕಾಂಗ್ರೆಸ್. ಜೈಲ್ ಗೆ ಹೋಗೋದನ್ನು ತಪ್ಪಿಸಿಕೊಳ್ಳಲು ಎಸಿಬಿ ಮಾಡಿಕೊಂಡ್ರು. ಅಧಿಕಾರದಲ್ಲಿ ಇದ್ದಾಗ ಮಾಡಬಾರದ್ದನ್ನು ಮಾಡಿ ಈಗ ಲೋಕಾಯುಕ್ತ ಮಾಡುತ್ತೀವಿ ಎನ್ನುತ್ತಾರೆ. ರಿಟೈರ್ಡ್ ಮುಸ್ಲಿಂ ಐಎಎಸ್ ಆಫಿಸರ್‍ಗಳನ್ನು ಕಳಿಸಿ ಜೆಡಿಎಸ್‍ಗೆ ಓಟು ನೀಡಬೇಡಿ ಎಂದು ಪ್ರಚಾರ ಮಾಡಿಸ್ತಿದ್ದಾರೆ. ಇಂತಹ ನೀಚ ಕೃತ್ಯಕ್ಕೆ ಇಳಿದಿದ್ದಾರೆ ಅಂತ ಕಾಂಗ್ರೆಸ್ ವಿರುದ್ಧ ಪರೋಕ್ಷವಾಗಿ ಟೀಕೆ ಮಾಡಿದ್ರು.

ಮೋದಿ ಅಧಿಕಾರ ವಹಿಸಿಕೊಂಡಾಗ ಇದ್ದಾಗ ಇದ್ದ ವರ್ಚಸ್ಸು ಈಗಿಲ್ಲ. ರಾಜ್ಯದಲ್ಲಿ ಅವರ ಪ್ರವಾಸದಿಂದ ನಮ್ಮ ಪಕ್ಷಕ್ಕೆ ಅಪಾಯ ಇಲ್ಲ. ಮುಂದೆ ರಾಜ್ಯದ ಮಹಾಜನತೆ ಕೊಡುವ ತೀರ್ಪಿಗೆ ಎಲ್ಲರೂ ತಲೆ ಬಾಗಲೇಬೇಕು ಅಂದ್ರು.

ಬದಾಮಿ ಮತ್ತು ಚಾಮುಂಡೇಶ್ವರಿ ಚುನಾವಣೆ ಕುರಿತು ಮಾತನಾಡಿದ ಅವರು, ಮುಖ್ಯಮಂತ್ರಿ ಬಳಿ ಇಂಟಲಿಜೆನ್ಸ್ ಇದೆ. ಅವರು ಹೇಳಿರುವ ಪ್ರಕಾರ ಬದಾಮಿಯಲ್ಲಿ ಚುನಾವಣೆಗೆ ಸ್ಪರ್ಧಿಸಿದ್ದಾರೆ. ಬಾಂಬೆ ಕರ್ನಾಟಕದಲ್ಲಿ ಹಲವು ಮಂದಿ ಪಕ್ಷಕ್ಕೆ ಬಂದಿದ್ದಾರೆ ಅಂದ್ರೆ ಇದರ ಅರ್ಥ ಏನು ಅಂತ ಪ್ರಶ್ನಿಸಿದ ಅವರು, ಅಂಬರೀಶ್ ಬಗ್ಗೆ ಅಭಿಮಾನ ಇದೆ. ಅವರಿಗೂ ನನ್ನ ಬಗ್ಗೆ ಅಭಿಮಾನ ಇದೆ ಅಂದ್ರು.

Comments

Leave a Reply

Your email address will not be published. Required fields are marked *