ಗೌಡ್ರ ಕುಟುಂಬದಿಂದ ಬಿಬಿಎಂಪಿಗೆ ಆಸ್ತಿ ತೆರಿಗೆ ಬಾಕಿ: ಸ್ಪಷ್ಟೀಕರಣ ಕೊಟ್ಟ ಅನಿತಾ ಕುಮಾರಸ್ವಾಮಿ

ಬೆಂಗಳೂರು: ಬೃಹತ್ ಬೆಂಗಳೂರು ನಗರ ಪಾಲಿಕೆಗೆ 559 ಕೋಟಿ ರೂಪಾಯಿ ತೆರಿಗೆ 63 ಕಟ್ಟಡಗಳಿಂದ ಬರಬೇಕಿದೆ. ಇದರಲ್ಲಿ ಪ್ರತಿಷ್ಠಿತ ಕಂಪನಿಗಳು ಹಾಗೂ ಪ್ರತಿಷ್ಠಿತ ವ್ಯಕ್ತಿಗಳೇ ಹೆಚ್ಚಾಗಿದ್ದಾರೆ ಎಂದು ಟೋಟಲ್ ಸ್ಟೇಷನ್ ಸಮೀಕ್ಷೆ ಹೇಳಿದೆ.

ಈ ಸಮೀಕ್ಷೆಯ ಪ್ರಕಾರ 2008 ರಿಂದ ಮಾಜಿ ಪ್ರಧಾನಿ ದೇವೇಗೌಡರ ಕುಟುಂಬ ಸುಮಾರು 3 ಕೋಟಿಯಷ್ಟು ತೆರಿಗೆ ಬಾಕಿ ಉಳಿಸಿಕೊಂಡಿದೆ. ಹೊಸೂರು ರಸ್ತೆಯಲ್ಲಿರುವ ಆರ್‍ಎಂಝೆಡ್ ಸೆಂಟಿನಿಯಲ್ ಕಟ್ಟಡದಲ್ಲಿನ ಆಸ್ತಿ ಬಗ್ಗೆ ತಪ್ಪು ಮಾಹಿತಿ ನೀಡಲಾಗಿದೆ. ಇರುವ ಆಸ್ತಿಗಿಂತ ಕಡಿಮೆ ವಿಸ್ತೀರ್ಣ ತೋರಿಸಿ, ಕಡಿಮೆ ತೆರಿಗೆ ಪಾವತಿ ಮಾಡಲಾಗಿದೆ.

ಆದರೆ ಮುಖ್ಯಮಂತ್ರಿ ಕುಮಾರಸ್ವಾಮಿ ಪತ್ನಿ ಅನಿತಾ ಕುಮಾರಸ್ವಾಮಿ ನೀಡಿರುವ ಮಾಹಿತಿಗಳ ಪ್ರಕಾರ, ಈಗಾಗಲೇ ಸಂಪೂರ್ಣ ತೆರಿಗೆ ಪಾವತಿಸಲಾಗಿದೆ. ಇನ್ನೂ ಈ ದಾಖಲೆ ಹೊರಬೀಳುತ್ತಿದ್ದಂತೆ ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್ ಸ್ಪಷ್ಟೀಕರಣ ನೀಡಿದ್ದಾರೆ.

ದೇವೇಗೌಡರ ಕುಟುಂಬ ಸರಿಯಾದ ಸಮಯಕ್ಕೆ ಆಸ್ತಿ ತೆರಿಗೆ ಪಾವತಿಸಿದೆ. ಬಿಬಿಎಂಪಿ ತೆರಿಗೆ ಮತ್ತು ಆರ್ಥಿಕ ಸ್ಥಾಯಿಸಮಿತಿ ನಡೆಸಿದ ಸರ್ವೇಯಲ್ಲಿ ಘೋಷಿತ ಆಸ್ತಿಯಲ್ಲಿ ವ್ಯತ್ಯಾಸ ಕಂಡುಬಂದಿರುವುದೇ ಇಷ್ಟೆಲ್ಲಾ ಗೊಂದಲಗಳಿಗೆ ಕಾರಣ ಅಂತ ತಿಳಿಸಿದ್ದಾರೆ. ಯಾವುದೇ ನೋಟಿಸ್ ಆಗಲೀ ಅಥವಾ ಟೋಟಲ್ ಸ್ಟೇಷನ್ ಸರ್ವೆಯ ವ್ಯತ್ಯಾಸದ ಬಗ್ಗೆ ದೇವೇಗೌಡರ ಕುಟುಂಬಕ್ಕೆ ಯಾವುದೇ ಡಿಮ್ಯಾಂಡ್ ನೋಟಿಸ್ ನೀಡಿಲ್ಲ ಅಂತ ಪಾಲಿಕೆಯನ್ನು ತಪ್ಪನ್ನು ಒಪ್ಪಿಕೊಳ್ಳುವ ಮೂಲಕ ಆಯುಕ್ತ ಮಂಜುನಾಥ್ ಪ್ರಸಾದ್ ಇಡೀ ವಿವಾದಕ್ಕೆ ತೆರೆ ಎಳೆಯಲು ಮುಂದಾಗಿದ್ದಾರೆ.

ಯಾರ್ಯಾರ ತೆರಿಗೆ ಎಷ್ಟೆಷ್ಟು ಬಾಕಿ ಇದೆ?.
* ಬಾಕಿ ಆಸ್ತಿ ತೆರಿಗೆ ಬಾಕಿದಾರರು – (ಟೋಟಲ್ ಸ್ಟೇಷನ್ ಸರ್ವೆ ಮಾಹಿತಿ)
* ಅನಿತಾ ಕುಮಾರಸ್ವಾಮಿ (ಸೊಸೆ) 54,85,521 ಲಕ್ಷ ರೂ.
* ಭವಾನಿ ರೇವಣ್ಣ (ಸೊಸೆ) 41,79,440 ಲಕ್ಷ ರೂ.

* ಎಚ್. ಕವಿತಾ (ಸೊಸೆ) 55,21,479 ಲಕ್ಷ ರೂ.
* ಎಚ್.ಡಿ. ಶೈಲಾ (ಮಗಳು) 55,21,479 ಲಕ್ಷ ರೂ.

* ಎಚ್.ಡಿ ಅನುಸೂಯ (ಮಗಳು) 55,21,479 ಲಕ್ಷ ರೂ.
* ಎಚ್.ಡಿ ರಮೇಶ್ (ಮಗ) 55,21,38 ಲಕ್ಷ ರೂ.

* ಫಿನಿಕ್ಸ್ ಮಾಲ್ (ಮಹದೇವಪುರ) 2,33,11,750 ಕೋಟಿ ರೂ.
* ಟಾಟಾ ಕನ್ಸಲ್ಟೆನ್ಸಿ (ಐಟಿಪಿಎಲ್) 6,09,71,796 ಕೋಟಿ ರೂ.

* ಐಟಿಪಿಎಲ್ (ಐಟಿಪಿಎಲ್ ಮುಖ್ಯರಸ್ತೆ) 1,11,421 ಕೋಟಿ ರೂ.
* ಕೃಪಾನಿಧಿ ಕಾಲೇಜು ಟ್ರಸ್ಟ್ (ಚಿಕ್ಕಬಳ್ಳಾಪುರ) 1,75,000 ಲಕ್ಷ ರೂ.
* ಹಿಂದೂಸ್ಥಾನ್ ಯೂನಿಲಿವರ್ ಲಿ. (ವೈಟ್‍ಫೀಲ್ಡ್) 2,75,64,840 ಕೋಟಿ ರೂ.

Comments

Leave a Reply

Your email address will not be published. Required fields are marked *