ಮಗಳ ಸೇವೆಗೆ ಮಿಲ್ಖಾ ಸಿಂಗ್ ಮೆಚ್ಚುಗೆ

ನವದೆಹಲಿ: ಹೆಮ್ಮಾರಿ ಕೊರೊನಾ ವೈರಸ್‍ಗೆ ಇಡೀ ಜಗತ್ತೇ ತತ್ತರಿಸಿದೆ. ವೈದ್ಯರು ಕೊರೊನಾ ವಿರುದ್ಧ ಹೋರಾಟ ನಡೆಸಿ ಅನೇಕರಿಗೆ ಮರುಜನ್ಮ ನೀಡಿದ್ದಾರೆ. ಭಾರತದ ರನ್ನಿಂಗ್ ದಿಗ್ಗಜ ಮಿಲ್ಖಾ ಸಿಂಗ್ ಅವರ ಪುತ್ರಿ, ವೈದ್ಯೆ ಮೋನಾ ಮಿಲ್ಖಾ ಸಿಂಗ್ ಅವರು ಕೂಡ ಕೊರೊನಾ ವಿರುದ್ಧ ಹೋರಾಟ ನಡೆಸಿದ್ದಾರೆ.

ಪುತ್ರಿಯ ಸೇವೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿರುವ ಮಿಲ್ಖಾ ಸಿಂಗ್, ನನ್ನ ಮಗಳು ಮೋನಾ ಮಿಲ್ಖಾ ಸಿಂಗ್ ನ್ಯೂಯಾರ್ಕ್ ನಲ್ಲಿ ವೈದ್ಯೆಯಾಗಿದ್ದಾಳೆ. ನಾವು ಅವಳ ಬಗ್ಗೆ ತುಂಬಾ ಹೆಮ್ಮೆಪಡುತ್ತೇವೆ. ಅವಳು ಪ್ರತಿದಿನ ನಮ್ಮೊಂದಿಗೆ ಮಾತನಾಡುತ್ತಾಳೆ. ನಿಮ್ಮ ಆರೋಗ್ಯದ ಬಗ್ಗೆ ಕಾಳಜಿ ತೆಗೆದುಕೊಳ್ಳಿ ಎಂದು ನಮಗೆ ಹೇಳುತ್ತಾಳೆ. ನಾವು ಕೂಡ ಅವಳ ಬಗ್ಗೆ ಕಾಳಜಿ ವಹಿಸುತ್ತೇವೆ. ಇಂತಹ ಸಂದರ್ಭದಲ್ಲಿ ಮೋನಾ ತನ್ನ ಕರ್ತವ್ಯವನ್ನು ನಿರ್ವಹಿಸಬೇಕಾಗಿದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಅಮೆರಿಕದಲ್ಲಿ ಮೈಸೂರಿನ ವೈದ್ಯೆಗೆ ವಿಶೇಷ ಗೌರವ

54 ವರ್ಷದ ಮೋನಾ ಸಿಂಗ್ ಪಟಿಯಾಲ ಮೆಡಿಕಲ್ ಕಾಲೇಜಿನಲ್ಲಿ ಎಂಬಿಬಿಎಸ್ ಮುಗಿಸಿ 90ರ ದಶಕದಿಂದ ಅಮೆರಿಕದಲ್ಲಿ ನೆಲೆಸಿದ್ದಾರೆ. ಕಳೆದ 20 ವರ್ಷಗಳಿಂದ ಮೋನಾ ಸಿಂಗ್ ವೈದ್ಯಕೀಯ ಸೇವೆಯನ್ನು ಸಲ್ಲಿಸುತ್ತಿದ್ದಾರೆ. ಈಗ ಅವರು ನ್ಯೂಯಾರ್ಕ್‍ನ ಆಸ್ಪತ್ರೆಯಲ್ಲಿ ಕೊರೊನಾ ವೈರಸ್ ಲಕ್ಷಣಗಳಿಂದ ದಾಖಲಾಗುವ ರೋಗಿಗಳಿಗೆ ಚಿಕಿತ್ಸೆಯನ್ನು ನೀಡುತ್ತಿದ್ದಾರೆ.

ಈ ಹಿಂದೆ ಸಹೋದರಿ ಸೇವೆಯನ್ನು ಮಿಲ್ಖಾ ಸಿಂಗ್ ಪುತ್ರ, ಖ್ಯಾತ ಗಾಲ್ಫರ್ ಜೀವ್ ಮಿಲ್ಖಾ ಸಿಂಗ್ ಅವರು, ”ಮೋನಾ ಸಿಂಗ್ ನ್ಯೂಯಾರ್ಕ್‍ನ ಮೆಟ್ರೋಪಾಲಿಟನ್ ಆಸ್ಪತ್ರೆಯ ತುರ್ತು ವಾರ್ಡ್‍ನಲ್ಲಿ ವೈದ್ಯೆಯಾಗಿ ಕರ್ತವ್ಯದಲ್ಲಿದ್ದಾರೆ. ಅವರು ಕೊರೊನಾ ವೈರಸ್ ಲಕ್ಷಣಗಳನ್ನು ಹೊಂದಿರುವ ರೋಗಿಗಳು ಬಂದಾಗಲೆಲ್ಲಾ ಅವರಿಗೆ ಚಿಕಿತ್ಸೆ ನೀಡಬೇಕಾಗುತ್ತದೆ” ಎಂದು ಹೇಳಿದ್ದರು.

”ಸಹೋದರಿಯ ಸೇವೆಯ ಬಗ್ಗೆ ಹೆಮ್ಮೆಪಡುತ್ತೇನೆ. ಅವಳು ಪ್ರತಿದಿನ ಮ್ಯಾರಥಾನ್ ಓಡುತ್ತಿದ್ದಾಳೆ. ಅವಳು ವಾರದಲ್ಲಿ ಐದು ದಿನರಾತ್ರಿ ಹಗಲೆನ್ನದೆ ಕತ್ರ್ಯ ನಿರ್ವಹಿಸುತ್ತಿದ್ದಾಳೆ. ಜನರಿಗೆ ಚಿಕಿತ್ಸೆ ನೀಡುವಾಗ ಏನು ಬೇಕಾದರೂ ಆಗಬಹುದು. ಹೀಗಾಗಿ ಆಕೆಯ ಆರೋಗ್ಯದ ಬಗ್ಗೆ ಚಿಂತೆಯೂ ಆಗುತ್ತಿದೆ” ಎಂದು ತಿಳಿಸಿದ್ದರು.

Comments

Leave a Reply

Your email address will not be published. Required fields are marked *