ಕಾರ್ಯಕ್ರಮದಲ್ಲಿ ಮಾಜಿ ಶಾಸಕಿ ಪರ್ಸ್‌ಗೆ ಕನ್ನ!

ಶಿವಮೊಗ್ಗ: ರಾಜ್ಯದಲ್ಲಿ ನದಿ ನೀರಿನ ಸದ್ಬಳಕೆ ಹಾಗೂ ವಿವಿಧ ನೀರಾವರಿ ಯೋಜನೆಗಳ ಸಮಗ್ರ ಅನುಷ್ಠಾನದ ಸಂಕಲ್ಪದೊಂದಿಗೆ ಜೆಡಿಎಸ್ ಆರಂಭಿಸಿರುವ `ಜನತಾ ಜಲಧಾರೆ’ ಕಾರ್ಯಕ್ರಮದಲ್ಲಿ ಖದೀಮರು ತಮ್ಮ ಕೈಚಳಕ ತೋರಿದ್ದು, ಮಾಜಿ ಶಾಸಕಿಯೊಬ್ಬರ ಪರ್ಸ್‌ಗೆ  ಕನ್ನ ಹಾಕಿದ್ದಾರೆ.

ಶಿವಮೊಗ್ಗದಲ್ಲಿ ನಡೆಯುತ್ತಿದ್ದ ಜನತಾ ಜಲಧಾರೆ ಕಾರ್ಯಕ್ರಮದಲ್ಲಿ ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದ ಮಾಜಿ ಶಾಸಕಿ ಶಾರದಾ ಪೂರ್ಯಾ ನಾಯಕ್ ಅವರ ಪರ್ಸ್‌ಗೆ ಕನ್ನ ಹಾಕಿದ್ದು, 50 ಸಾವಿರ ರೂ. ಕದ್ದು ಪರಾರಿಯಾಗಿರುವ ಘಟನೆ ಬೆಳಕಿಗೆ ಬಂದಿದೆ.ಇದನ್ನೂ ಓದಿ; ಚಿನ್ನ, ಬೆಳ್ಳಿಯಲ್ಲ ಈಗ ನಿಂಬೆಹಣ್ಣಿನ ಮೇಲೆ ಕಳ್ಳರ ಕಣ್ಣು- 12 ಮೂಟೆ ನಿಂಬೆಹಣ್ಣು ಕಳವಾಗಿದ್ದೇಗೆ?

CRIME 2

ಶಾರದಾ ಪೂರ್ಯಾ ನಾಯಕ್, ತಮ್ಮ ಅಂಗರಕ್ಷಕನ ಬಳಿ ಪರ್ಸ್ ಕೊಟ್ಟು ವೇದಿಕೆ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಕೆಲವೇ ಕ್ಷಣಗಳಲ್ಲಿ ಖದೀಮರು ಅಂಗರಕ್ಷಕನಿಂದ ಪರ್ಸ್ ಕದ್ದು ಪರಾರಿಯಾಗಿದ್ದಾರೆ.

Comments

Leave a Reply

Your email address will not be published. Required fields are marked *