ನನ್ನಕ್ಳು ಜೆಡಿಎಸ್‍ನವರನ್ನು ಹೆದರಿಸ್ಬೇಕು- ಹೇಳಿಕೆ ಸಮರ್ಥಿಸಿಕೊಂಡ್ರು ಸುರೇಶ್ ಗೌಡ

ತುಮಕೂರು: ಯಾವನ್ ಬರ್ತಾನೋ ಬರ್ಲಿ, ನನ್ಮಕ್ಳು ಜೆಡಿಎಸ್‍ನವರನ್ನ ಹೆದರಿಸ್ಬೇಕು ಎಂಬ ಹೇಳಿಕೆಗೆ ಮಾಜಿ ಶಾಸಕ ಸುರೇಶ್ ಗೌಡ ಸಮರ್ಥಿಸಿಕೊಂಡಿದ್ದಾರೆ.

ಪಬ್ಲಿಕ್ ಟಿವಿಗೆ ಮಾತನಾಡಿದ ಸುರೇಶ್ ಗೌಡ, ನಾನೇ ಮಾತನಾಡಿರುವುದು. ನಾನು ಮಾತನಾಡಿದ್ದು ನಿಜ. ಅವರು ಈಗ ನಮ್ಮ ಕ್ಷೇತ್ರದ ಕೌರವನಾಗಿದ್ದಾನೆ. ಆತ ಚುನಾವಣಾ ಸಮಯದಲ್ಲಿ ಹಣ, ಹೆಂಡ, ಸೀರೆ ಹಂಚುತ್ತಾರೆ. ಚುನಾವಣಾ ಸಮಯದಲ್ಲಿ ಜನರಿಗೆ ಹಣದ ಆಮೀಶವೊಡ್ಡಿ ಕಳೆದ ಚುನಾವಣೆಯಲ್ಲಿ ಗೆದಿದ್ದಾರೆ. ಈ ವಿಷಯ ಈಗ ಕೋರ್ಟ್‍ನಲ್ಲಿ ಇದೆ. ಈ ಚುನಾವಣೆಯಲ್ಲೂ ಹೀಗೆ ಮಾಡುತ್ತಿದ್ದಾರೆ. ಹಾಗಾಗಿ ನಾನು ಊರಿಗೆ ಸೇರಿಸಬೇಡಿ. ಅವರ ಏನು ಕೆಲಸ ಮಾಡಿದ್ದಾರೆ ಎಂದು ಕೇಳಿ ಎಂದು ಹೇಳಿದೆ.

ಹೇಮಾವತಿ ನೀರನ್ನು ನಮ್ಮ ಜೆಲ್ಲೆಗೆ ಒಂದು ಹನಿ ಕೂಡ ಬಿಟ್ಟಿಲ್ಲ. ಕೆರೆ ಪಕ್ಕದಲ್ಲಿದ್ದ ರೈತರು 5 ಕೋಟಿ ರೂ. ಒಟ್ಟು 50 ಕೋಟಿ ರೂ. ಬೋರ್ ವೆಲ್ ಹಾಕಿಸಿದ್ದಾರೆ. ಹಾಗಾಗಿ ದೇವೇಗೌಡ ಅವರನ್ನು ಕರೆದುಕೊಂಡು ಬಂದಾಗ ಪ್ರಶ್ನೆ ಮಾಡಿ. ನೀರು ಬಿಡದ ಶಾಸಕ, ಕೈ ಸಿಗದ ಶಾಸಕ ನೀನು ಊರಿಗೆ ಯಾಕೆ ಬರುತ್ತೀಯಾ. ಯಾವ ನೈತಿಕತೆಯಿಂದ ದೇವೇಗೌಡ ಅವರನ್ನು ಇಲ್ಲಿ ಕರೆದುಕೊಂಡು ಬಂದಿದ್ದೀಯಾ. ನೀನೇ ಕೆಲಸ ಮಾಡಿಲ್ಲ. ನಮ್ಮ ದುಡ್ಡಿನಲ್ಲಿ ಹೆಂಡ, ಸೀರೆ ಕೊಟ್ಟು ರಾಜಕಾರಣ ಮಾಡುತ್ತಿದ್ದೀಯಾ. ಇದನ್ನು ವಿರೋಧಿಸಿ ಎಂದು ರೈತರಿಗೆ ಸಲಹೆ ನೀಡಿದೆ.

ನೇರವಾಗಿ ಜನರಿಗೆ ಹಣ, ಸೀರೆ, ಮೂಗುಬಟ್ಟು, ಕೋಳಿ ಮಾಂಸ, ಎಣ್ಣೆ ಬಾಟಲ್‍ಗಳನ್ನು ನೀಡುತ್ತಾರೆ. ಪ್ರಜಾಪ್ರಭುತ್ವದಲ್ಲಿ ಚುನಾವಣೆಯನ್ನು ನೇರವಾಗಿ ಸ್ಪರ್ಧಿಸಬೇಕು. ಲೋಕಕಲ್ಯಾಣ ಮಾಡಿ ವೋಟ್ ಕೇಳಬೇಕು. ಆಮೀಶವೊಡ್ಡಿ ವೋಟ್ ಕೇಳುವುದು ಸರಿಯಲ್ಲ. ನಾನು ಭಾವನಾತ್ಮಕವಾಗಿ ಮಾತನಾಡಿದ್ದೇನೆ. ರಾಜಕೀಯ ವಿಷಯದಲ್ಲಿ ನಮ್ಮ ಜನರಿಗೆ ಬೇಗ ಅರ್ಥವಾಗುವುದಿಲ್ಲ. ನಮ್ಮ ನೋವುಗಳನ್ನು ವ್ಯಕ್ತಪಡಿಸಿದ್ದಾಗ ಜನರು ಅವರಿಗೆ ತಿರುಗೇಟು ನೀಡುತ್ತಾರೆ ಎಂದು ಸುರೇಶ್ ಗೌಡ ಹೇಳಿದ್ದಾರೆ.

Comments

Leave a Reply

Your email address will not be published. Required fields are marked *