ಉಗ್ರಪ್ಪನಿಗೆ ಬಟನ್ ಒತ್ತಿದ್ರೆ ಟೊಂಯ್ ಅಂತಾ ಸೌಂಡ್ ಬರ್ಬೇಕು, ಅಲ್ಲಿ ಮೋದಿ ಸೊಂಯ್ ಅನ್ನಬೇಕು- ಬಿಜೆಪಿ ವಿರುದ್ಧ ಇಬ್ರಾಹಿಂ ವ್ಯಂಗ್ಯ

ಬಳ್ಳಾರಿ: ಮೊಳಕಾಲ್ಮೂರು ಶಾಸಕ ಶ್ರೀರಾಮುಲುಗೆ ಮೋದಿ ಬಿಟ್ಟರೆ ಬೇರೆ ಯಾರು ಗೊತ್ತಿಲ್ಲ. ಮೋದಿ ಜಪ ಬಿಟ್ರೆ ಅವರಿಗೆ ಬೇರೇನೂ ಗೊತ್ತಿಲ್ಲ. ಶ್ರೀರಾಮುಲು ಅವರು 10 ಜನ ಸಂಸದರು ಹೆಸರು ಹೇಳಲಿ ಎಂದು ಮಾಜಿ ಸಚಿವ, ಕಾಂಗ್ರೆಸ್ ಮುಖಂಡ ಸಿಎಂ ಇಬ್ರಾಹಿಂ ಚಾಲೆಂಜ್ ಹಾಕಿದ್ದಾರೆ.

ಉಪಚುನಾವಣೆಯ ನಿಮಿತ್ತ ಬಳ್ಳಾರಿಗೆ ಆಗಮಿಸಿ ಕುರುಗೋಡ್ ಬಹಿರಂಗ ಸಭೆಯಲ್ಲಿ ಮಾತನಾಡಿದ ಅವರು, ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಉಗ್ರಪ್ಪನಿಗೆ ಬಟನ್ ಒತ್ತಿದ್ರೆ ಟೊಂಯ್ ಅಂತಾ ಸೌಂಡ್ ಬರಬೇಕು. ಆಗ ಅಲ್ಲಿ ಮೋದಿ ಸೊಂಯ್ ಅನ್ನಬೇಕು ಎಂದು ವ್ಯಂಗ್ಯವಾಡಿದ್ದಾರೆ.

ಬಳ್ಳಾರಿಯಲ್ಲಿ ಸುಗುಲಮ್ಮ ದೇವಸ್ಥಾನ ಹೊಡೆದಾಗ ಸಿದ್ದರಾಮಯ್ಯ ಅವರನ್ನ ಆ ದೇವಿ ಕರೆದಿದ್ದಳು ಅಂತ ತೆಲುಗಿನಲ್ಲಿ ಹೇಳುವ ಮೂಲಕ ಸಿ.ಎಂ ಇಬ್ರಾಹಿಂ ಅವರು ರೆಡ್ಡಿಗಳ ವಿರುದ್ಧ ವ್ಯಂಗ್ಯವಾಡಿದ್ರು. ಇದೇ ವೇಳೆ ಕಾಯಿಪಲ್ಯ ಮಾರುವ ತರಕಾರಿಯರು ಕಾರ್ಡ್ ಎಲ್ಲಿ ಇಡ್ಬೇಕು. ಲಕ್ಷ್ಮೀ ಪೂಜೆಯಲ್ಲಿ ವ್ಯಾಪಾರಸ್ಥರಿಗೆ ದುಡ್ಡು ಇಲ್ಲ. ಕಾರ್ಡ್ ಇಟ್ಟು ಪೂಜೆ ಮಾಡ್ತಿದ್ದಾರೆ ಅಂತ ಕ್ಯಾಶ್ ಲೆಸ್ ಮಾಡಿದ ಬಿಜೆಪಿಯವರ ವಿರುದ್ಧವೂ ವ್ಯಂಗ್ಯವಾಡಿದ್ರು.

ಇದೇ ವೇಳೆ ಸಿದ್ದರಾಮಯ್ಯ ಅವರೂ ಕೂಡ ಸಭೆಯಲ್ಲಿ ಭಾಗವಹಿಸಿದ್ದು, ಅವರಿಗೆ ಅಭಿಮಾನಿಗಳು ಹೆಗಲ ಮೇಲೆ ಕಂಬಳಿ ಹಾಕಿ ಕೈಗೆ ಕುರಿಮರಿ ಕೊಡುಗೆ ನೀಡಿದ್ದಾರೆ. ಸಿದ್ದರಾಮಯ್ಯ ಅವರು ಆ ಕುರಿಮರಿ ಕೈಯಲ್ಲಿ ಇಡ್ಕೊಂಡು ಪೋಸ್ ಕೊಟ್ಟರು.

ಬಿಎಸ್‍ವೈ ವಿರುದ್ಧ ಡಿಕೆಶಿ ಕಿಡಿ:
ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರು ಸೈಕಲ್ ಕೊಟ್ಟಿದ್ದು ಬಿಟ್ರೆ ಏನ್ ಅಭಿವೃದ್ಧಿ ಮಾಡಿದ್ದಾರೆ. ಬಡವರ ಪರ ಸರ್ಕಾರ ಅಂದ್ರೆ ಅದು ಕಾಂಗ್ರೆಸ್ ಸರ್ಕಾರವಾಗಿದೆ. ಬಿಜೆಪಿಯವರು ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ಮಾಡಿ ಬಡವರ ಪಾಲಿಗೆ ಸಂಕಷ್ಟ ತಂದಿದ್ದಾರೆ. ಇದು ಡಿಕೆಶಿ-ರಾಮುಲು ಎಲೆಕ್ಷನ್ ಅಲ್ಲ. ಜೆ. ಶಾಂತಾ ಉಗ್ರಪ್ಪ ನಡುವಿನ ಚುನಾವಣೆಯಾಗಿದೆ. ಬಿಎಸ್‍ಸಸಆರ್ ಪಾರ್ಟಿ ಮಾಡಿದ್ದ ಶ್ರೀರಾಮುಲು ಅವರು ಅದರಲ್ಲಿ ಸೋತು ಸುಣ್ಣವಾದ ಮೇಲೆ ಮತ್ತೆ ಬಿಜೆಪಿಗೆ ಬಂದಿದ್ದಾರೆ. ಆಯ್ತು ಜನರು ನಿಮ್ಮನ್ನು ಕೈ ಬಿಟ್ಟಿದ್ದಾರೆ ಒಂದು ಸಲ ಅವಕಾಶ ಕೊಡ್ತಾರೆ ಅದನ್ನು ಶ್ರೀರಾಮುಲು ಕಳೆದುಕೊಂಡಿದ್ದಾರೆ. ನಾವು ನೀತಿ ರಾಜಕಾರಣ ಮಾಡುತ್ತೇವೆ. ನಿಮ್ಮಂತ ಹೊಲಸು ರಾಜಕಾರಣ ಮಾಡೋಲ್ಲ ಅಂತ ವಾಗ್ದಾಳಿ ನಡೆಸಿದ್ರು.

ನೂರಾರು ಜನ ಶಾಸಕರನ್ನ ತಯಾರು ಮಾಡಬಹುದು. ಆದರೆ ಒಬ್ಬ ಉಗ್ರಪ್ಪನನ್ನು ತಯಾರು ಮಾಡಲು ಆಗಲ್ಲ. ಈ ಚುನಾವಣೆಯಲ್ಲಿ ನೀವು ಉಗ್ರಪ್ಪನನ್ನು ಗೆಲ್ಲಿಸ್ತಿರಿ ಎಂಬ ನಂಬಿಕೆ ನಮಗೆ ಇದೆ ಅಂತ ಹೇಳಿದ್ರು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Comments

Leave a Reply

Your email address will not be published. Required fields are marked *