ಆತ ಪಾಕಿಸ್ತಾನಕ್ಕೆ ಹೋಗಲಿ, ಭಾರತ ಆತನ ತಾತನ ಆಸ್ತಿಯಲ್ಲ: ಜಮೀರ್ ವಿರುದ್ಧ ಸೊಗಡು ಶಿವಣ್ಣ ಕಿಡಿ

ತುಮಕೂರು: ಆತ ಪಾಕಿಸ್ತಾನಕ್ಕೆ ಹೋಗಲಿ. ಭಾರತ ಆತನ ತಾತನ ಆಸ್ತಿಯಲ್ಲ ಎಂದು ಸಚಿವ ಜಮೀರ್ ಅಹಮದ್ ವಿರುದ್ಧ ಮಾಜಿ ಸಚಿವ ಸೊಗಡು ಶಿವಣ್ಣ ವಾಗ್ದಾಳಿ ನಡೆಸಿದ್ದಾರೆ.

ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಬಿಜೆಪಿಗೆ ಮತ ಹಾಕೋರು ಮುಸಲ್ಮಾನರೇ ಅಲ್ಲ ಎಂದ ಜಮೀರ್ ಅಹಮ್ಮದ್ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿ ಇಷ್ಟೊತ್ತಿಗೆ ಸರ್ಕಾರ ಅವರ ಮೇಲೆ ಕ್ರಮ ಕೈಗೊಂಡಿರುತ್ತದೆ ಎಂದು ನಾನು ತಿಳಿದುಕೊಂಡಿದ್ದೆ. ಏಕೆಂದರೆ ದೇಶದ ಸಂಸ್ಕೃತಿ ಬಗ್ಗೆ, ಜನಗಳ ಬಗ್ಗೆ ಜಿನ್ನಾ ಅವನ ಅನುಯಾಯಿಯಾಗಿರುವ ಜಮೀರ್ ಈ ರೀತಿಯ ನಡವಳಿಕೆ ದೇಶದ ಸೌಹಾರ್ದತೆಗೆ ಧಕ್ಕೆ ತರುತ್ತದೆ ಎಂದು ಕಿಡಿಕಾರಿದರು.

ದೇಶ ವಿಭಜನೆಯಾದಾಗ ಮುಸ್ಲಿಂ ಬಾಂಧವರು 3 ಕೋಟಿ ಇದ್ದರು. ಇದೀಗ 20 ಕೋಟಿ ಆಗಿದ್ದಾರೆ. ನಾವು ಅವರನ್ನ ಅಣ್ಣ ತಮ್ಮಂದಿರೆಂದು ಸಹಿಸಿಕೊಂಡಿದ್ದೇವೆ. ಮೊಘಲರು, ಬ್ರಿಟಿಷರು ಆಳ್ವಿಕೆ ನಡೆಸಿದ್ದರೂ ನಮ್ಮ ಸಂಸ್ಕೃತಿ ಹಾಳಾಗಿರಲಿಲ್ಲ. ಆದರೆ ನಮ್ಮಲ್ಲಿರುವ ಕಿಡಿಗೇಡಿಗಳು, ಪಾಪಿಗಳಿಂದ ನಮ್ಮ ಹಿಂದೂ ಸಮಾಜವನ್ನು ಒಡೆಯುತ್ತಿದ್ದಾರೆ. ನಮ್ಮ ಬಂಧು, ನಮ್ಮ ಸಂಸ್ಕೃತಿಯನ್ನು ಹಾಳು ಮಾಡುವ ಯಾವನೇ ವ್ಯಕ್ತಿ ಇದ್ದರೂ ಅವರನ್ನು ತಕ್ಷಣ ಬಂಧಿಸಿ ಕಾನೂನು ಕ್ರಮ ತೆಗೆದುಕೊಳ್ಳಬೇಕು ಎಂದು ಮನವಿ ಮಾಡಿದರು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Comments

Leave a Reply

Your email address will not be published. Required fields are marked *