ಬೆಳಗಾವಿಯಲ್ಲಿ ಗೋವಾ ಮಾಜಿ ಶಾಸಕ, ಕಾಂಗ್ರೆಸ್‌ ನಾಯಕನ ಬರ್ಬರ ಹತ್ಯೆ, ಆರೋಪಿ ಅರೆಸ್ಟ್‌

ಬೆಳಗಾವಿ: ಗೋವಾದ (Goa)  ಪೋಂಡಾ ಕ್ಷೇತ್ರದ ಮಾಜಿ ಶಾಸಕ ಲಾವೋ ಮಾಮಲೇದಾರ್‌ (68) ಅವರನ್ನು ಕೊಲೆ ಮಾಡಲಾಗಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಅಟೋ ಚಾಲಕ ಆರೋಪಿ ಸುಭಾಶ್‌ ನಗರ ನಿವಾಸಿ ಮುಜಾಹಿನ್‌ನನ್ನು ಮಾರ್ಕೆಟ್ ಪೊಲೀಸರು ಬಂಧಿಸಿದ್ದಾರೆ. ಸ್ಥಳಕ್ಕೆ ನಗರ ಪೊಲೀಸ್‌ ಆಯುಕ್ತರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.

ಆರೋಪಿ ಸುಭಾಶ್‌ ನಗರ ನಿವಾಸಿ ಮುಜಾಹಿನ್‌
ಆರೋಪಿ ಸುಭಾಶ್‌ ನಗರ ನಿವಾಸಿ ಮುಜಾಹಿನ್‌

ಆಗಿದ್ದೇನು?
ಮಧ್ಯಾಹ್ನ ಸುಮಾರು 1 ಗಂಟೆಯ ಹೊತ್ತಿಗೆ ಖಡಬಝರ್ ಲಾಡ್ಜ್‌ ಬಳಿ ಆಟೋಗೆ ಲಾವೋ ಮಾಮಲೇದಾರ್‌ (Lavoo Mamledar) ಕಾರು ಟಚ್ ಆಗಿದೆ. ಈ ವಿಚಾರಕ್ಕೆ ಆಟೋ ಚಾಲಕ ಜಗಳಕ್ಕೆ ಇಳಿದಿದ್ದಾನೆ. ನಂತರ ಆಟೋ ಚಾಲಕ ಕಾರನ್ನು ಹಿಂಬಾಲಿಸಿಕೊಂಡು ಹೋಗಿದ್ದಾನೆ.  ಬಳಿಕ ಲಾವೋ ಮಾಮಲೇದಾರ್ ಅವರು ಶ್ರೀನಿವಾಸ ಲಾಡ್ಜ್ ಬಳಿ ಬಂದು ನಿಂತಿದ್ದಾಗ ಆಟೋ ಚಾಲಕ ಅಲ್ಲೂ ಜಗಳ ಆರಂಭಿಸಿದ್ದಾನೆ. ಆಗ ಮಾತಿಗೆ ಮಾತು ಬೆಳೆದು ಆಟೋ ಚಾಲಕ ಲಾವೋ ಮಾಮಲೇದಾರ್ ಮೇಲೆ ಮಾರಾಣಾಂತಿಕ ಹಲ್ಲೆ ಮಾಡಿದ್ದಾನೆ.


ಈ ವೇಳೆ ಅಲ್ಲಿದ್ದ ಜನ ಮತ್ತು ಲಾಡ್ಜ್‌ ಸಿಬ್ಬಂದಿ ಸೇರಿ ಜಗಳವನ್ನು ನಿಲ್ಲಿಸಿದ್ದಾರೆ. ಗಂಭೀರವಾಗಿ ಪೆಟ್ಟು ತಿಂದಿದ್ದ ಲಾವೋ ಮಾಮಲೇದಾರ್‌ ಲಾಡ್ಜ್‌ನ ಮೆಟ್ಟಿಲು ಹತ್ತುವಾಗ ಕುಸಿದು ಬಿದ್ದು ಮೃತಪಟ್ಟಿದ್ದಾರೆ. ಈಗ ಲಾವೋ ಮಾಮಲೇದಾರ್ ಮೃತ ದೇಹವನ್ನು ಬೆಳಗಾವಿ ಬೀಮ್ಸ್‌ಗೆ ರವಾನೆ ಮಾಡಲಾಗಿದೆ.

ಗೋಮಾಂತಕ ಪಕ್ಷದಿಂದ 2012 ರಲ್ಲಿ ಚುನಾಯಿತರಾಗಿದ್ದ ಲಾವೋ ಜಯಗಳಿಸಿದ್ದರು.  ಮಾಮಲೇದಾರ್‌ ಸಾವಿಗೆ ಗೋವಾ ಕಾಂಗ್ರೆಸ್‌ ಸಾಮಾಜಿಕ ಜಾಲತಾಣದಲ್ಲಿ  ಕಂಬನಿ ಮಿಡಿದಿದೆ.