ಕಲಬುರಗಿ: ಕಾಂಗ್ರೆಸ್ ತೊರೆದು ಉಮೇಶ್ ಜಾಧವ್ ಅವರು ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ. ಇದು ಫಸ್ಟ್ ವಿಕೆಟ್. ಇನ್ನೂ ವಿಕೆಟ್ ಗಳು ಬೀಳುತ್ತವೆ. ಮುಖ್ಯಮಂತ್ರಿ ಎಚ್‍ಡಿ ಕುಮಾರಸ್ವಾಮಿಯವರು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮನೆ ಬಾಗಿಲಲ್ಲಿ ಭಿಕ್ಷುಕನ ರೀತಿಯಲ್ಲಿ ನಿಂತಿದ್ದಾರೆ ಎಂದು ಮಾಜಿ ಉಪಮುಖ್ಯಮಂತ್ರಿ ಆರ್ ಅಶೋಕ್ ವಾಗ್ದಾಳಿ ನಡೆಸಿದ್ರು.
ನಗರದಲ್ಲಿ ನಡೆದ ಬಿಜೆಪಿ ಸಮಾವೇಶದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಕುಮಾರಸ್ವಾಮಿಯವರನ್ನು ನೋಡಿದಾಗ ಯಾರಿಗಾದರೂ ಅವರು ಮುಖ್ಯಮಂತ್ರಿ ಎಂದು ಅನಿಸುತ್ತಿದೆಯಾ ಎಂದು ಪ್ರಶ್ನಿಸಿದ್ರು.

ನಾಚಿಕೆಯಾಗಬೇಕು ನಿಮಗೆ. ಏರ್ ಸ್ಟ್ರೈಕ್ ಆಗಿದ್ದಕ್ಕೆ ಸಂಭ್ರಮಾಚರಣೆ ಮಾಡುತ್ತಿದ್ರೆ, ಕುಮಾರಸ್ವಾಮಿ ಅವರು ಒಂದು ಸಮುದಾಯಕ್ಕೆ ಅವಮಾನವಾಗುತ್ತೆ ಎಂದು ಹೇಳತ್ತಾರೆ. ದಾಳಿಯಲ್ಲಿ ಸತ್ತ ಉಗ್ರರ ಲೆಕ್ಕ ಕೇಳುವವರು ಪಾಕಿಸ್ತಾನದ ನೆಲೆದಲ್ಲಿ ಬಿಡಬೇಕು ಎಂದು ಸಿಎಂ ವಿರುದ್ಧ ಗರಂ ಆದ್ರು.
ಮೋದಿ ಅವರ ಎರಡನೆಯ ಸಮಾವೇಶ ಕಲಬುರಗಿಯಲ್ಲಿ ನಡೆಯುತ್ತಿದೆ. ಲೋಕೋಪಯೋಗಿ ಸಚಿವ ಎಚ್ ಡಿ ರೇವಣ್ಣವರು ಜನರಿಂದ ನಾವು ಅಧಿಕಾರಕ್ಕೆ ಬಂದಿಲ್ಲ. ಮಾಟ ಮಂತ್ರದಿಂದ ಅಧಿಕಾರಕ್ಕೆ ಬಂದಿದ್ದೀವಿ ಎಂದು ಹೇಳುತ್ತಾರೆ. ಇನ್ನು ಕೆಲವರು ಸರ್ಜಿಕಲ್ ಸ್ಟ್ರೈಕ್ ಬಗ್ಗೆ ಸಾಕ್ಷ್ಯ ಕೇಳ್ತಾರೆ. ಇವರೆಲ್ಲರನ್ನೂ ಪಾಕಿಸ್ತಾನಕ್ಕೆ ಬಿಸಾಡಿ ಬರಬೇಕು ಎಂದು ಅಶೋಕ್ ಕಿಡಿಕಾರಿದ್ರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Leave a Reply