ಹಲವಾರು ಟೀಕೆಗಳಿಗೆ ಗುರಿಯಾಗಿದ್ದ ಮಾಜಿ ಸಿಎಂ ಇದೀಗ ಫುಲ್ ಅಲರ್ಟ್!

ಮಂಗಳೂರು: ಸ್ಟೇಜ್‍ಗಳಲ್ಲಿ ನಿದ್ದೆಗೆ ಜಾರೋ ಮೂಲಕ ಎದುರಾಳಿಗಳ ಬಾಯಲ್ಲಿ ನಿದ್ದೆರಾಮಯ್ಯ ಎಂಬ ಟೀಕೆಗೆ ತುತ್ತಾಗಿದ್ದ ಮಾಜಿ ಸಿಎಂ ಸಿದ್ದರಾಮಯ್ಯ ಈಗ ಫುಲ್ ಅಲರ್ಟ್ ಆಗಿದ್ದಾರೆ.

ಬೆಳಗ್ಗೆ 6 ಗಂಟೆಗೆ ಎದ್ದು ಯೋಗ, ಪ್ರಾಣಾಯಾಮ ಮಾಡುತ್ತಿದ್ದಾರೆ. ಬಳಿಕ ರಾಗಿ ಗಂಜಿ, ಮಧ್ಯಾಹ್ನ ಹಸಿ ತರಕಾರಿಯೇ ಊಟ. ನಡು ನಡುವೆ, ಜಲಚಿಕಿತ್ಸೆ ಮತ್ತು ಹೈಡ್ರೋ ಥೆರಪಿ ಇರುತ್ತದೆ. ಮಧ್ಯಾಹ್ನ ನಿಗದಿತ ವಿಶ್ರಾಂತಿ ಪಡೆಯಲೇಬೇಕು. ಅಲ್ಲದೆ, ಸಂಜೆ ಒಂದು ಗಂಟೆ ಕಾಲ ವಾಕಿಂಗ್ ಕಡ್ಡಾಯ. ಇದನ್ನೂ ಓದಿ: ನಾಟಿ ಕೋಳಿ, ಮಟನ್‍ನಿಂದ ಸಿದ್ದು ದೂರ – ಉಪ್ಪು ಖಾರ ಇಲ್ಲದ ಆಹಾರ ಸೇವನೆ

ಈ ಜಟಿಲ ದಿನಚರಿಯಿಂದಾಗಿ ಯಾರನ್ನೂ ಭೇಟಿ ಆಗಲ್ಲ ಅಂದ್ರೂ ಜನ ಕೇಳ್ತಿಲ್ಲ. ಮಾಜಿ ಸಿಎಂ ಸಿದ್ದರಾಮಯ್ಯ ಅವರನ್ನು ಮೀಟ್ ಮಾಡಲು ರಾಜಕೀಯ ನಾಯಕರಿಂದ ಹಿಡಿದು ಅಭಿಮಾನಿಗಳು ಬರುತ್ತಲೇ ಇದ್ದಾರೆ. ಸಂಜೆ ವಾಕಿಂಗ್ ಟೈಮಲ್ಲಿ ಮಾತ್ರ ಅವರ ಭೇಟಿಗೆ ಸಮಯಕ್ಕೆ ಕೊಡುತ್ತಿದ್ದಾರೆ. ಹೆಣ್ಮಕ್ಕಳ ಸೆಲ್ಫಿಗೂ ಸಿದ್ದರಾಮಯ್ಯ ನಗುನಗುತ್ತಲೇ ಫೋಸ್ ನೀಡ್ತಿದ್ದಾರೆ. ಇದನ್ನೂ ಓದಿ: ಮಾಜಿ ಸಿಎಂ ಸಿದ್ದರಾಮಯ್ಯನವರನ್ನು ದಿಢೀರ್ ಭೇಟಿಯಾದ ಸಚಿವ ರೇವಣ್ಣ!

ಧರ್ಮಸ್ಥಳದಲ್ಲಿ 10 ದಿನ ಚಿಕಿತ್ಸೆ:
10 ದಿನಗಳವರೆಗೆ ಧರ್ಮಸ್ಥಳದಲ್ಲಿ ಶಾಂತಿವನದ ಪ್ರಕೃತಿ ಚಿಕಿತ್ಸಾಲಯದಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸಿದ್ದರಾಮಯ್ಯ ಅವರು, ಕಳೆದ ಭಾನುವಾರ ಧರ್ಮಸ್ಥಳಕ್ಕೆ ತೆರಳಿದ್ದಾರೆ. ಇದೀಗ ಮಾಜಿ ಸಿಎಂ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಮೊದಲು ಮಾಧ್ಯಮಕ್ಕೆ ಪ್ರತಿಕ್ರಿಯಿಸಿದ ಅವರು, ನನಗೇನು ಆರೋಗ್ಯ ತೊಂದರೆ ಇಲ್ಲ. ಸಾಮಾನ್ಯ ಚಿಕಿತ್ಸೆಗಾಗಿ ಆಗಮಿಸಿದ್ದೇನೆ. 10 ದಿನ ಸಾಮಾನ್ಯ ಚಿಕಿತ್ಸೆ ನಡೆಯಲಿದೆ ಅಂತಾ ಹೇಳಿದ್ದರು.

Comments

Leave a Reply

Your email address will not be published. Required fields are marked *