ಬಾಗಲಕೋಟೆ: ಬಿಜೆಪಿಯಲ್ಲಿ ಗುಲಾಮಗಿರಿ ಇದೆ. ಹೀಗಾಗಿ ಬಿಜೆಪಿ ಮುಖಂಡ ಕೆ.ಎಸ್.ಈಶ್ವರಪ್ಪ ಅವರು ಬಾಗಲಕೋಟೆಗೆ ಬಂದು ಏನಾದ್ರೂ ಮಾತನಾಡಿ ಹೋಗುತ್ತಾರೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ವ್ಯಂಗ್ಯವಾಡಿದ್ದಾರೆ.
ಬದಾಮಿಯಲ್ಲಿ ಮಾತನಾಡಿದ ಮಾಜಿ ಸಿಎಂ, ಈಶ್ವರಪ್ಪ ಪೆದ್ದ. ಪಾಪ ಅವರಿಗೆ ರಾಜಕೀಯವೇ ಗೊತ್ತಿಲ್ಲ. ದಲಿತರು, ಹಿಂದುಳಿದ ವರ್ಗಗಳ ಪರವಾಗಿ ಕೆಲಸ ಮಾಡಿದವರು ಕಾಂಗ್ರೆಸ್ಸಿಗರು. ನಮ್ಮ ಸರ್ಕಾರ ಬಗ್ಗೆ ಅಪಪ್ರಚಾರ ಮಾಡುತ್ತಿದ್ದಾರೆ. ಕೆ.ಎಸ್.ಈಶ್ವರಪ್ಪ ಸುಳ್ಳು ಹೇಳುತ್ತಿದ್ದಾರೆ ಎಂದು ತಿರುಗೇಟು ನೀಡಿದರು.

ಕೆ.ಎಸ್.ಈಶ್ವರಪ್ಪ ಅವರಿಗೂ ಬಾಗಲಕೋಟೆಗೂ ಏನು ಸಂಬಂಧ? ನಾನು ಬದಾಮಿ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದೇನೆ ಎಂದ ಮಾಜಿ ಸಿಎಂ, ಬಾಗಲಕೋಟೆಗೆ ಈಶ್ವರಪ್ಪನ ಕೊಡುಗೆ ಏನು? ಅವರಿಗೆ ಚುನಾವಣಾ ಮೇಲುಸ್ತುವಾರಿ ಕೊಟ್ಟಿದ್ದಾರೆ. ಅದಕ್ಕೆ ಇಲ್ಲಿಗೆ ಬಂದು ಮಾತನಾಡಿ ಹೋಗುತ್ತಾರೆ. ಬಿಜೆಪಿಯಲ್ಲಿರುವ ಗುಲಾಮಗಿರಿಯಿಂದಲೇ ಹೀಗೆ ಮಾತಾಡುತ್ತಿರಬೇಕು ಎಂದು ವ್ಯಂಗ್ಯವಾಡಿದರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Leave a Reply