ಸಿದ್ದರಾಮಯ್ಯ ಪಾಕಿಸ್ತಾನಿ- ಈಶ್ವರಪ್ಪ ಹೇಳಿಕೆಗೆ ಮಾಜಿ ಸಿಎಂ ಖಡಕ್ ತಿರುಗೇಟು

ಬಾಗಲಕೋಟೆ: ಬಿಜೆಪಿ ನಾಯಕ ಹಾಗೂ ಮಾಜಿ ಉಪಮುಖ್ಯಮಂತ್ರಿ ಈಶ್ವರಪ್ಪಗೆ ಸಂವಿಧಾನ ಗೊತ್ತಿಲ್ಲ. ಈ ದೇಶದ ಸಮಾಜಿಕ ವ್ಯವಸ್ಥೆ ಗೊತ್ತಿಲ್ಲ. ಅಂತವರ ಬಗ್ಗೆ ಏನ್ ಹೇಳಬೇಕು ಅನ್ನೋ ಕನಿಷ್ಠ ಜ್ಞಾನ ಇಲ್ಲದವರಿಗೆ ಕಾನೂನು ಗೊತ್ತಿಲ್ಲದವರಿಗೆ ಹಾಗೂ ಬೆಂಕಿ ಹಚ್ಚುವವರಿಗೆ ಪ್ರಶ್ನೆಗೆ ಉತ್ತರಿಸಬಾರದು ಎಂದು ಸಿದ್ದರಾಮಯ್ಯ ಪಾಕಿಸ್ತಾನಿ ಎಂಬ ಈಶ್ವರಪ್ಪ ಹೇಳಿಕೆಗೆ ಖಡಕ್ ತಿರುಗೇಟು ನೀಡಿದರು.

ಜಿಲ್ಲೆಯ ಗುಳೇದಗುಡ್ಡ ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಳ್ಳಾರಿ ಉಸ್ತುವಾರಿಯನ್ನು ಡಿಕೆಶಿಗೆ ಕೊಟ್ಟಿದ್ದಾರೆ. ಡಿಕೆಶಿಗೂ ಜನಾರ್ದನ ರೆಡ್ಡಿ ಪರಿಸ್ಥಿತಿ ಬರಲಿದೆ ಎಂಬ ಎಸ್.ಆರ್ ಹಿರೆಮಠ ಹೇಳಿಕೆಗೆ ಪ್ರತಿಕ್ರಿಯಿಸಿ, ಅವರು ಸುಮ್ಮನೆ ಹೇಳುತ್ತಾರೆ. ಆದ್ರೆ ಬಳ್ಳಾರಿ ಜಿಲ್ಲೆಗೆ ಸಂಬಂಧಿಸಿದಂತೆ ಸಮರ್ಥವಾಗಿ ಕೆಲಸ ಮಾಡುವವರಿಗೆ ಉಸ್ತುವಾರಿ ಕೊಟ್ಟಿದ್ದಾರೆ ಎಂದು ಸುಮ್ಮನಾದ್ರು.

ಜೆಪಿಯವರು ಹೇಗಾದರೂ ಮಾಡಿ ಹಿಂಬಾಗಿಲಿಂದ ಅಧಿಕಾರಕ್ಕೆ ಬರಬೇಕೆಂದು ಮಾಡ್ತಿದ್ದಾರೆ. ಇದರಲ್ಲಿ ಅವರು ಸಫಲ ಆಗೋದಿಲ್ಲ. ಅವರಿಗೆ ಮೊದಲೇ ಮುಖಭಂಗ ಆಗಿದೆ. ಯಡಿಯೂರಪ್ಪ ಮೂರೇ ದಿನ ಮುಖ್ಯಮಂತ್ರಿ ಆಗಿ ಕೆಳಗಿರೋದೆ ಇದಕ್ಕೆ ಉದಾಹರಣೆ ಎಂದು ವ್ಯಂಗ್ಯವಾಡಿದ್ರಲ್ಲದೇ, ನಮ್ಮ ಕಾಂಗ್ರೆಸ್ ನವರು ಯಾರೂ ಬಿಜೆಪಿ ಸಂಪರ್ಕದಲ್ಲಿಲ್ಲ. ಬಿಜೆಪಿಯವರೇ ನಮ್ಮ ಸಂಪರ್ಕದಲ್ಲಿದ್ದಾರೆ ಎಂದರು. ಇದನ್ನೂ ಓದಿ: ಮೋದಿಯನ್ನು ಈ ಪ್ರಪಂಚದಲ್ಲಿ ಇಬ್ಬರು ಮಾತ್ರ ಒಪ್ಪಲ್ಲ: ಈಶ್ವರಪ್ಪ

ಕುಮಾರಸ್ವಾಮಿಗೆ ಟಾಂಗ್:
ಸ್ಥಳೀಯ ಸಂಸ್ಥೆಯಲ್ಲಿ ಮಹಿಳೆಯರಿಗೆ ಮೀಸಲಾತಿಯಲ್ಲಿ ಕಾಂಗ್ರೆಸ್ ಕೊಡುಗೆ ಅಪಾರವಿದೆ. ಬಿಜೆಪಿಯವರು ಮೀಸಲಾತಿ ವಿರೋಧಿಗಳು, ಬರೀ ಹಿಂದುತ್ವ ಬಗ್ಗೆ ಮಾತನಾಡೋರು ಅವರಿಗೆ ಹಿಂದುಳಿದವರಿಗೆ, ಮಹಿಳೆಯರಿಗೆ ಅಧಿಕಾರ ಕೊಡಬಾರದೆಂಬ ಉದ್ದೇಶವಿದೆ. ಇನ್ನು ಈ ವಿಚಾರದಲ್ಲಿ ಜೆಡಿ.ಎಸ್ ಬಗ್ಗೆ ಮಾತನಾಡೋದಿಲ್ಲ ಅದು ಅನಗತ್ಯ ಎಂದು ಸಿಎಂ ಕುಮಾರಸ್ವಾಮಿಗೆ ಟಾಂಗ್ ನೀಡಿದ್ರು. ಇದನ್ನೂ ಓದಿ: ಕಟುಕನ ಕೈಗೆ ಕುರಿ ಕೊಟ್ಟಂತೆ ಆಗಿದೆ- ಡಿಕೆಶಿ ವಿರುದ್ಧ ಹಿರೇಮಠ್ ಕಿಡಿ

ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಜೆಡಿಎಸ್ ಜೊತೆ ಮೈತ್ರಿಯಿಲ್ಲ. ಜೆಡಿಎಸ್ ಜೊತೆ ಪ್ರೆಂಡ್ಲಿ ಫೈಟ್. ಬಿಜೆಪಿ ಜೊತೆ ಜಿದ್ದಾಜಿದ್ದಿನ ಪೈಟ್. ಹಾಗಾಗಿ ಈ ಬಾರಿ ಬಾದಾಮಿ ಕ್ಷೇತ್ರದ 23 ಸ್ಥಳಿಯ ಸಂಸ್ಥೆಗಳ ಸ್ಥಾನಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳನ್ನ ಬೆಂಬಲಿಸುವಂತೆ ಮನವಿ ಮಾಡಿದ್ರು. ನಮಗೆ ಮೊದಲ ರಾಜಕೀಯ ವೈರಿ ಬಿಜೆಪಿ ಆದರೆ ವೈಯಕ್ತಿಕವಾಗಿ ನಾವು ವಿರೋಧಿಗಳಲ್ಲ, ರಾಜಕೀಯವಾಗಿ ವಿರೋಧಿಗಳು ಎಂದ್ರು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ: www.instagram.com/publictvnews

Comments

Leave a Reply

Your email address will not be published. Required fields are marked *