ಸಿದ್ದರಾಮಯ್ಯಗೆ ದಿಢೀರ್ ದೆಹಲಿ ಬುಲಾವ್ – ಡಿಕೆಶಿ, ಸಿದ್ದು ಜಿದ್ದಿಗೆ ಬೀಳುತ್ತಾ ಬ್ರೇಕ್..?

ನವದೆಹಲಿ: ದೆಹಲಿಗೆ ಬರುವಂತೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಹೈಕಮಾಂಡ್ ಆಹ್ವಾನಿಸಿದ್ದು, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದು ದಿಢೀರ್ ದೆಹಲಿಗೆ ಭೇಟಿ ನೀಡುತ್ತಿದ್ದಾರೆ. ಈ ಮೂಲಕ ರಾಜ್ಯ ಕಾಂಗ್ರೆಸ್‍ನಲ್ಲಿ ಸಂಚಲನ ಉಂಟಾಗಿದೆ. ಬೆಳಗ್ಗೆ ದೆಹಲಿಗೆ ಪ್ರಯಾಣಿಸಲಿರುವ ಸಿದ್ದರಾಮಯ್ಯ, ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರನ್ನು ಮಧ್ಯಾಹ್ನ ಭೇಟಿ ಆಗಲಿದ್ದಾರೆ.

ಸಿದ್ದರಾಮಯ್ಯ ಮತ್ತು ಡಿಕೆಶಿ ನಡುವಿನ ಮುಸುಕಿನ ಗುದ್ದಾಟ ಇನ್ನೂ ಮುಗಿಯದ ಹಿನ್ನೆಲೆಯಲ್ಲಿ ಸಿದ್ದರಾಮಯ್ಯಗೆ ಹೈಕಮಾಂಡ್ ಬರಲು ಹೇಳಿದೆ. ರಾಜ್ಯ ಕಾಂಗ್ರೆಸ್‍ನ ಪದಾಧಿಕಾರಿಗಳ ನೇಮಕದಲ್ಲಿ ಇಬ್ಬರ ನಡುವೆಯೂ ಒಮ್ಮತ ಮೂಡಿಲ್ಲ. ಇಬ್ಬರ ನಡುವಿನ ಪ್ರತಿಷ್ಠೆಯ ಜಿದ್ದಾಜಿದ್ದಿನಿಂದ ಪದಾಧಿಕಾರಿಗಳ ಪಟ್ಟಿ ಇನ್ನೂ ಅಂತಿಮ ಆಗಿಲ್ಲ. ಈಗಾಗಲೇ 400 ಪದಾಧಿಕಾರಿಗಳ ಪಟ್ಟಿಯನ್ನು ರಾಜ್ಯ ಕಾಂಗ್ರೆಸ್ ಹೈಕಮಾಂಡ್‍ಗೆ ಕಳುಹಿಸಿಕೊಟ್ಟಿದೆ. ಈ ಪಟ್ಟಿಯಲ್ಲಿ ಸಿದ್ದರಾಮಯ್ಯ ಮತ್ತು ಡಿಕೆಶಿ ಬೆಂಬಲಿಗರೇ ತುಂಬಿದ್ದಾರೆ. ಆದರೆ 2 ತಿಂಗಳಿಂದ ಇಬ್ಬರ ನಡುವೆ ಹಗ್ಗಾಜಗ್ಗಾಟ ಮುಗಿದಿಲ್ಲ. ಇದನ್ನೂ ಓದಿ: ರೈತರ ಮೇಲೆ ವಾಹನ ಹತ್ತಿಸಿದ ವೀಡಿಯೋ ಲಭ್ಯ- ಅಜಯ್ ಮಿಶ್ರಾ ಪುತ್ರನ ವಿರುದ್ಧ ಕೊನೆಗೂ FIR

ಮೂಲಗಳ ಪ್ರಕಾರ ಪದಾಧಿಕಾರಿಗಳ ಪಟ್ಟಿಯನ್ನು 400ರಿಂದ 250ಕ್ಕೆ ಇಳಿಸಲು ಹೈಕಮಾಂಡ್ ಸೂಚಿಸಿತ್ತು. ಆದರೆ ಇಬ್ಬರೂ ನಾಯಕರು ತಮ್ಮ ಆಪ್ತರ ಹೆಸರನ್ನು ಕೈಬಿಡಲು ಸಿದ್ಧರಿಲ್ಲ. ಸ್ವತಃ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ ಸಿ ವೇಣುಗೋಪಾಲ್ ಮಧ್ಯಸ್ಥಿಕೆ ವಹಿಸಿದರೂ ಸಂಧಾನ ಸಾಧ್ಯವಾಗಿಲ್ಲ. ಹೀಗಾಗಿ ಈ ಬಿಕ್ಕಟ್ಟಿಗೆ ಅಂತ್ಯ ಹಾಡಲು ಸಿದ್ದರಾಮಯ್ಯರನ್ನ ಹೈಕಮಾಂಡ್‍ಗೆ ದೆಹಲಿಗೆ ಕರೆಸಿಕೊಂಡಿದೆ ಎಂದು ತಿಳಿದುಬಂದಿದೆ. ಇದನ್ನೂ ಓದಿ:  WhatsApp, Facebook, Instagram 9 ಗಂಟೆ ಬಂದ್ – ಜುಕರ್‌ಬರ್ಗ್‌ಗೆ 44 ಸಾವಿರ ಕೋಟಿ ನಷ್ಟ

Comments

Leave a Reply

Your email address will not be published. Required fields are marked *