ಈಶ್ವರಪ್ಪ ಕಾಂಗ್ರೆಸ್‍ಗೆ ಆಹಾರ ಆಗೋದು ಬೇಡ: ಹೆಚ್.ಡಿ ಕುಮಾರಸ್ವಾಮಿ

ರಾಮನಗರ: ಸಚಿವ ಕೆ.ಎಸ್ ಈಶ್ವರಪ್ಪ ಅವರು ಕಾಂಗ್ರೆಸ್‍ಗೆ ಆಹಾರ ಆಗೋದು ಬೇಡ. ಈಶ್ವರಪ್ಪ ಸೀನಿಯರ್ ರಾಜಕಾರಣಿ ಇದ್ದಾರೆ. ನೈತಿಕತೆ ಹೊತ್ತು ರಾಜೀನಾಮೆ ಕೊಡಬೇಕು ಎಂದು ಮಾಜಿ ಸಿಎಂ ಕುಮಾರಸ್ವಾಮಿ ಆಗ್ರಹಿಸಿದರು.

ಸಂತೋಷ್ ಆತ್ಮಹತ್ಯೆ ಪ್ರಕರಣ ಸಂಬಂಧ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು, ಒಂದು ವಾರದ ಹಿಂದೆ ಚರ್ಚೆ ನಡೆಯುತ್ತಿತ್ತು. ಈಶ್ವರಪ್ಪ ಮೇಲೆ ವ್ಯಕ್ತಿ ಅನೇಕರಿಗೆ ದೂರು ಕೊಟ್ಟಿದ್ದರು ಅಂತ ನೋಡಿದ್ದೇನೆ. ಈಗ ಸಡನ್ ಆಗಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಇದರ ಹಿಂದಿನ ಬ್ಯಾಗ್ ರೌಂಡ್ ನನಗೆ ಗೊತ್ತಿಲ್ಲ ಎಂದರು.

ಡೆತ್ ನೋಟ್ ವಿಚಾರದಲ್ಲಿ ನೈತಿಕತೆ ವಿಚಾರ ಬಂದಾಗ ಈಶ್ವರಪ್ಪ ತೀರ್ಮಾನ ಮಾಡಬೇಕು. ಬಿಜೆಪಿಯಲ್ಲಿ ಆಂತರಿಕ ಗಲಾಟೆ ನಡೆಯುತ್ತಿದೆ. ಅನೇಕ ಸಚಿವರನ್ನ ತೆಗೆಯುತ್ತಾರೆ ಅಂತ ಚರ್ಚೆ ಆಗ್ತಿದೆ. ಈ ವಿಚಾರಕ್ಕೆ ಏನಾದ್ರು ಇದು ಸಂಬಂಧ ಇದೆಯಾ ಗೊತ್ತಿಲ್ಲ. ಸರ್ಕಾರಕ್ಕೆ ಘಟನೆ ಬಗ್ಗೆ ಸತ್ಯ ಹೊರಗೆ ತೆಗೆಯುವ ಜವಾಬ್ದಾರಿ ಇದೆ ಎಂದು ಹೇಳಿದರು. ಇದನ್ನೂ ಓದಿ: ಈಶ್ವರಪ್ಪನನ್ನು ಸಂಪುಟದಿಂದ ವಜಾಗೊಳಿಸಿ, ಕೂಡಲೇ ಬಂಧಿಸಬೇಕು: ಸಿದ್ದರಾಮಯ್ಯ

ಈಶ್ವರಪ್ಪ ಅವರು ಕಾಂಗ್ರೆಸ್ಸಿಗೆ ಆಹಾರ ಆಗೋದು ಬೇಡ. ಈಶ್ವರಪ್ಪ ಸೀನಿಯರ್ ರಾಜಕಾರಣಿ ಇದ್ದಾರೆ. ನೈತಿಕತೆ ಹೊತ್ತು ರಾಜೀನಾಮೆ ಕೊಡಬೇಕು. ರಾಜೀನಾಮೆ ಕೊಟ್ಟು ನನ್ನದು ತಪ್ಪಿಲ್ಲ ಅಂತ ಸಾಬೀತು ಮಾಡಲಿ. ಆದರೆ ಈಶ್ವರಪ್ಪರನ್ನ ಮಾತ್ರ ಯಾಕೆ ಟಾರ್ಗೆಟ್ ಮಾಡ್ತಿದ್ದಾರೆ. 40% ಆರೋಪ ಎಲ್ಲಾ ಇಲಾಖೆ ಮೇಲೆ ಇದೆ. ಈಗ ಒಂದೇ ಇಲಾಖೆ ಮೇಲೆ ಯಾಕೆ ಆರೋಪ ಬಂದಿದೆ ಎಂದರು.

ಈಶ್ವರಪ್ಪ ಮೇಲೆ ಇಂತಹ ವಿಷಯ ಬಂದಿರೋದಕ್ಕೆ ಸಂಶಯ ಬರುತ್ತಿದೆ. ಈಶ್ವರಪ್ಪ ರಾಜೀನಾಮೆ ಕೊಡೋದು ಉತ್ತಮ. ಮಂತ್ರಿ ಸ್ಥಾನ ಶಾಶ್ವತ ಅಲ್ಲ. ನೀವು ಕಳಂಕರಹಿತರಾಗಿ ಹೊರಗೆ ಬರಬೇಕು. ಹೀಗಾಗಿ ರಾಜೀನಾಮೆ ಕೊಟ್ಟು ನಿರಪರಾಧಿ ಅಂತ ಸಾಬೀತುಪಡಿಸಲಿ. ಸರ್ಕಾರ ಕೂಡಾ ಈ ಬಗ್ಗೆ ತನಿಖೆ ಮಾಡಿ ಸತ್ಯ ಸತ್ಯತೆ ಹೊರಗೆ ತರುವ ಕೆಲಸ ಮಾಡಲಿ ಎಂದು ಹೇಳಿದರು. ಇದನ್ನೂ ಓದಿ: ಸಾರ್ವಜನಿಕರಿಗೆ ಸಂಶಯ ಬಾರದಂತೆ ಬೇಗ ಒಂದು ವಿಚಾರಣೆ ನಡೆಸಿ ಕ್ರಮ ಕೈಗೊಳ್ಳಬೇಕು: ವಿಶ್ವನಾಥ್

Comments

Leave a Reply

Your email address will not be published. Required fields are marked *