ಅರಣ್ಯ ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷ ಆತ್ಮಹತ್ಯೆಗೆ ಯತ್ನ – ಸ್ಥಿತಿ ಗಂಭೀರ

ಭೋಪಾಲ್: ಮಧ್ಯಪ್ರದೇಶದ ಅರಣ್ಯ ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷ ಶಿವಶಂಕರ್ ಪಟೇರಿಯಾ ಮಂಗಳವಾರ ರಾತ್ರಿ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ.

61 ವರ್ಷದ ಶಿವಶಂಕರ್ ಮಂಗಳವಾರ ರಾತ್ರಿ ವಿಷ ಸೇವಿಸುವ ಮೊದಲು ತಮ್ಮ ಕುಟುಂಬಕ್ಕೆ ಸಂದೇಶ ಕಳುಹಿಸಿದ್ದರು. ಸಂದೇಶವನ್ನು ಓದಿದ ಕುಟುಂಬದವರು ಭೀತಿಗೊಂಡು ಶಿವಶಂಕರ್ ಅವರನ್ನು ಹುಡುಕಲು ಮುಂದಾಗಿದ್ದಾರೆ. ಬಳಿಕ ಶಿವಶಂಕರ್ ಬಿಹಾರಿ ದೇವಸ್ಥಾನದ ಹಿಂಭಾಗದ ತೋಟದಲ್ಲಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಇದನ್ನೂ ಓದಿ: ಹಿಜಬ್ ವಿವಾದದಲ್ಲಿ ತಪ್ಪು ಮಾಡಿದವರನ್ನು ಬಂಧಿಸಲಿ: ತಂಗಡಗಿ

ತಕ್ಷಣ ಅವರನ್ನು ಸರ್ಕಾರಿ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಹೆಚ್ಚಿನ ಚಿಕಿತ್ಸೆಗೆ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಶಿವಶಂಕರ್ ಅವರ ಸದ್ಯದ ಸ್ಥಿತಿ ಚಿಂತಾಜನಕವಾಗಿದೆ. ಅವರನ್ನು ವೆಂಟಿಲೇಟರ್‍ನಲ್ಲಿ ಇರಿಸಲಾಗಿದೆ ಎಂದು ಮೂಲಗಳು ತಿಳಿಸಿವೆ. ಘಟನೆಯ ಬಗ್ಗೆ ಪೊಲೀಸರು ತನಿಖೆ ಪ್ರಾರಂಭಿಸಿದ್ದಾರೆ. ಇದನ್ನೂ ಓದಿ: ಅಧಿಕಾರಕ್ಕೆ ಬಂದ್ರೆ ಟ್ರಿಪಲ್‌ ರೈಡಿಂಗ್‌ಗೆ ಅವಕಾಶ: SBSP ಭರವಸೆ

ಈ ಹಿಂದೆ ಮಧ್ಯಪ್ರದೇಶದ ಮಾಜಿ ಹಣಕಾಸು ಸಚಿವ ರಾಘವ್‍ಜಿ ಅವರ ಸಿಡಿ ಹಗರಣ ಪ್ರಕರಣದಲ್ಲಿ ಶಿವಶಂಕರ್ ಪಟೇರಿಯಾ ಬೆಳಕಿಗೆ ಬಂದಿದ್ದರು.

Comments

Leave a Reply

Your email address will not be published. Required fields are marked *