ಕಾಡು ಹಂದಿಗಳು ಬೆಳೆ ನಾಶ ಮಾಡಿದ್ದಕ್ಕೆ ಫಾರೆಸ್ಟ್ ವಾಚರ್ ಮೇಲೆ ಮಾರಣಾಂತಿಕ ಹಲ್ಲೆ

ದಾವಣಗೆರೆ: ಕಾಡು ಹಂದಿಗಳು ಜಮೀನಿಗೆ ನುಗ್ಗಿ ಬೆಳೆ ನಾಶ ಮಾಡಿದ್ದಕ್ಕೆ ಆಕ್ರೋಶಗೊಂಡ ರೈತರು ಅರಣ್ಯ ಇಲಾಖೆ ಸಿಬ್ಬಂದಿ ಮೇಲೆ ಮಾರಣಾಂತಿಕವಾಗಿ ಹಲ್ಲೆ ಮಾಡಿದ ಘಟನೆ ಜಗಳೂರು ತಾಲೂಕಿನ ರಂಗಯ್ಯನದುರ್ಗದಲ್ಲಿ ನಡೆದಿದೆ.

ಅರಣ್ಯದ ಅಂಚಿನಲ್ಲಿರುವ ಗೋಡೆ ಗ್ರಾಮದ ಜಮೀನಿನಲ್ಲಿ ಕಾಡು ಹಂದಿಗಳು ಬೆಳೆ ಹಾನಿ ಮಾಡಿವೆ. ಇದರಿಂದ ಸಿಟ್ಟಿಗೆದ್ದ ಗ್ರಾಮದ ರಂಗಪ್ಪ ಮತ್ತು ಆತನ ಪುತ್ರ ಬಸವರಾಜ್ ಸೇರಿ ಫಾರೆಸ್ಟ್ ವಾಚರ್ ತಿಪ್ಪೇಶ್ ಮೇಲೆ ಹೊಲದಲ್ಲಿ ಹಲ್ಲೆ ನಡೆಸಿದ್ದಾರೆ. ಇದನ್ನೂ ಓದಿ: ಕೋಲ್ಕತ್ತಾ | ಬಾಯ್ಸ್‌ ಹಾಸ್ಟೆಲ್‌ನಲ್ಲಿ ಯುವತಿಯ ರೇಪ್‌ ಕೇಸ್ – ಬಾಗಲಕೋಟೆ ಯುವಕ ಅರೆಸ್ಟ್‌

ರಂಗಯ್ಯದುರ್ಗ ಅರಣ್ಯದ ಪ್ರದೇಶಕ್ಕೆ ಹೊಂದಿಕೊಂಡು ಈ ರೈತರ ಜಮೀನುಗಳಿವೆ. ಜಮೀನುಗಳಿಗೆ ಕಾಡು ಹಂದಿ ಸೇರಿದಂತೆ ಹಲವು ಕಾಡು ಪ್ರಾಣಿಗಳು ನುಗ್ಗಿ ಬೆಳೆ ನಾಶ ಮಾಡುತ್ತಿದ್ದವು. ಇದರಿಂದ ಅಕ್ರೋಶಗೊಂಡ ರೈತ ರಂಗಪ್ಪ ಹಾಗೂ ಆತನ ಮಗ ಬಸವರಾಜ್ ಫಾರೆಸ್ಟ್ ವಾಚರ್ ತಿಪ್ಪೇಶ್‍ಗೆ ಅವಾಚ್ಯವಾಗಿ ನಿಂದಿಸಿ, ಕಲ್ಲಿನಿಂದ ಹಲ್ಲೆ ನಡೆಸಿದ್ದಾರೆ. ಅಲ್ಲದೇ ಕೊಲೆಗೆ ಯತ್ನಿಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

ಈ ವೇಳೆ ಸ್ಥಳೀಯರು ಆಗಮಿಸಿ ತಿಪ್ಪೇಶ್ ಅವರನ್ನು ರಕ್ಷಣೆ ಮಾಡಿದ್ದಾರೆ. ಅವರನ್ನು ಜಗಳೂರು ಆಸ್ಪತ್ರೆಗೆ ದಾಖಲಿಸಿದ್ದಾರೆ. ಈ ಸಂಬಂಧ ಪ್ರಕಣರ ದಾಖಲಾಗಿದ್ದು, ಪೊಲೀಸರು ಆರೋಪಿಗಳ ಬಂಧನಕ್ಕೆ ಬಲೆ ಬೀಸಿದ್ದಾರೆ. ಇದನ್ನೂ ಓದಿ: ಬೈಕ್‌ಗೆ ಡಿಕ್ಕಿಯಾಗಿ ಕಾಲುವೆಗೆ ಪಲ್ಟಿಯಾದ ಕಾರು – 7 ಮಂದಿ ದುರ್ಮರಣ