ಅನಾರೋಗ್ಯಕ್ಕೀಡಾದ ಮುಸ್ಲಿಂ ಚಾಲಕನ ಪರವಾಗಿ ಅರಣ್ಯಾಧಿಕಾರಿ ಉಪವಾಸ

ಮುಂಬೈ: ಅನಾರೋಗ್ಯಕ್ಕೀಡಾದ ಮುಸ್ಲಿಂ ಡ್ರೈವರ್ ಪರವಾಗಿ ಅರಣ್ಯ ಅಧಿಕಾರಿ ಉಪವಾಸ ಮಾಡಿದ್ದಾರೆ.

ಅರಣ್ಯ ಅಧಿಕಾರಿ ಸಂಜಯ್ ಎನ್ ಮಾಲಿ ಅವರು ಮೇ 6ರಂದು ತಮ್ಮ ಡ್ರೈವರ್ ಬಳಿ ನೀನು ಉಪವಾಸ ಮಾಡುತ್ತೀಯಾ ಎಂದು ಕೇಳಿದ್ದಾರೆ. ಆಗ ಡ್ರೈವರ್ ನಾನು ಅನಾರೋಗ್ಯದಿಂದ ಬಳಲುತ್ತಿದ್ದೇನೆ. ನನಗೆ ಉಪವಾಸ ಇರಲು ಆಗುವುದಿಲ್ಲ. ಹಾಗಾಗಿ ನಾನು ಉಪವಾಸ ಇರಲ್ಲ ಎಂದು ಹೇಳಿದ್ದರು.

ಡ್ರೈವರ್ ಮಾತು ಕೇಳಿದ ಸಂಜಯ್ ಅವರು, ನಿನ್ನ ಪರವಾಗಿ ನಾನು ಉಪವಾಸ ಮಾಡುತ್ತೇನೆ ಎಂದು ಹೇಳಿದ್ದಾರೆ. ಮೇ 6ರಂದು ನಾನು ಉಪವಾಸ ಮಾಡಿದೆ. ಬೆಳಗ್ಗೆ 4 ಗಂಟೆಗೆ ಎದ್ದು ಸ್ವಲ್ಪ ಆಹಾರವನ್ನು ಸೇವಿಸಿದೆ. ಬಳಿಕ ಸಂಜೆ 7 ಗಂಟೆಗೆ ಊಟ ಮಾಡುವ ಮೂಲಕ ನನ್ನ ಉಪವಾಸವನ್ನು ಆರಂಭಿಸಿದ್ದಾರೆ. ನನಗೆ ರಂಜಾನ್ ಬಗ್ಗೆ ಇದ್ದ ಮಾಹಿತಿಯನ್ನು ಅನುಸರಿಸಿ ಈ ಉಪವಾಸವನ್ನು ಮಾಡಿದೆ ಎಂದು ಹೇಳಿದ್ದಾರೆ.

ನನಗೆ ಎಲ್ಲಾ ಧರ್ಮದ ಮೇಲೆ ವಿಶ್ವಾಸ ಇದೆ. ಪ್ರತಿಯೊಂದು ಧರ್ಮ ನಮಗೆ ಒಳ್ಳೆಯದನ್ನು ಕಲಿಸಿಕೊಡುತ್ತದೆ. ನಾವು ಮನುಷ್ಯರನ್ನು ಗೌರವಿಸಬೇಕು. ಬಳಿಕ ಧರ್ಮಗಳನ್ನು ಗೌರವಿಸಬೇಕು. ಉಪವಾಸ ಮಾಡಿದ ನಂತರ ನನಗೆ ಒಳ್ಳೆಯ ಅನುಭವ ಆಯಿತು. ಒಂದು ತಿಂಗಳು ಉಪವಾಸ ಮಾಡಿದ ನಂತರ ಜೂನ್ ಮೊದಲ ವಾರದಲ್ಲಿ ರಂಜಾನ್ ಹಬ್ಬ ಆಚರಿಸುತ್ತಾರೆ ಎಂಬ ವಿಷಯವನ್ನು ತಿಳಿದುಕೊಂಡೆ ಎಂದು ಅಧಿಕಾರಿ ಸಂಜಯ್ ತಿಳಿಸಿದ್ದಾರೆ.

Comments

Leave a Reply

Your email address will not be published. Required fields are marked *