ಬೆಂಗಳೂರು: ವಿದೇಶದಿಂದ ಬಂದವರ ಮೇಲೆ ಮೊದಲೇ ಈ ಕ್ರಮ ಕೈಗೊಂಡಿದ್ದರೆ ಇಷ್ಟೊಂದು ವೈರಸ್ ಎಫೆಕ್ಟ್ ಆಗುತ್ತಿರಲಿಲ್ಲವೇನೋ ಎಂಬ ಮಾತು ಕೇಳಿ ಬರುತ್ತಿದೆ. ಯಾಕೆಂದರೆ ಇದೀಗ ಕರ್ನಾಟಕ ಆರೋಗ್ಯ ಇಲಾಖೆ ವಿದೇಶದಿಂದ ಬಂದವರ ಕೈ ಮೇಲೆ ಸೀಲ್ ಹಾಕುತ್ತಿದೆ.
ಕರ್ನಾಟಕ ಆರೋಗ್ಯ ಇಲಾಖೆಯಿಂದ ಸೀಲ್ ಹಾಕಲಾಗುತ್ತಿದೆ. ವಿದೇಶದಿಂದ ಬಂದ ಪ್ರತಿಯೊಬ್ಬರ ಮೇಲೂ 15 ದಿನಗಳ ಕಾಲ ಹೋಮ್ ಕ್ವಾರೆಂಟೈಲ್ ಆದೇಶವಿರುವ ಸೀಲ್ ಹಾಕಲಾಗುತ್ತಿದೆ. ಗುರುವಾರ ಏರ್ಪೋರ್ಟ್ಗೆ ಬಂದವರ ಕೈಗಳ ಮೇಲೆ ಸೀಲ್ ಹಾಕಲಾಗಿದೆ.
https://twitter.com/DHFWKA/status/1240525028703125504
ಸೀಲ್ ಹಾಕಿಸಿಕೊಂಡವರು ಏಪ್ರಿಲ್ 3 ವರೆಗೆ ಹೋಮ್ ಕ್ವಾರೆಂಟೈನ್ನಲ್ಲಿರಬೇಕು. ಅಂದರೆ ನಿಗಾದಲ್ಲಿರಬೇಕು. ಈ ವೇಳೆ ಹೊರಗೆ ಸುತ್ತುವುದು ಯಾವುದನ್ನೂ ಮಾಡುವಂತಿಲ್ಲ. ವಿಮಾನದಿಂದ ಬಂದಿಳಿದ ಎಲ್ಲರ ಎಡಗೈಗೆ ಸೀಲ್ ಹಾಕಲಾಗಿದೆ. ಹೋಮ್ ಕ್ವಾರೆಂಟೈನ್ನಲ್ಲಿದ್ದ ದಿನದಲ್ಲಿ ಕೊರೊನಾ ವೈರಸ್ ಲಕ್ಷಣಗಳೇನೂ ಕಂಡುಬರದಿದ್ದರೆ ಮನೆಗೆ ಕಳಿಸಲಾಗುತ್ತದೆ.

Leave a Reply