ನವದೆಹಲಿ: ನನಗೆ ರೆಸ್ಟ್ ಬೇಕು ಎಂದು ವಿರಾಟ್ ಕೊಹ್ಲಿ ಈಗಾಗಲೇ ಬಿಸಿಸಿಐಗೆ ಮನವಿ ಮಾಡಿದ್ದಾರೆ. ಇದಕ್ಕೆ ಕಾರಣ ಏನು ಗೊತ್ತಾ? ಟೀಂ ಇಂಡಿಯಾ ಕ್ಯಾಪ್ಟನ್ ಕೊಹ್ಲಿ ಮತ್ತು ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಮದುವೆ ಆಗುತ್ತಿದ್ದಾರಂತೆ.
ತಮ್ಮ ಬಹುಕಾಲದ ಗೆಳತಿಯೊಂದಿಗಿನ ಕಂಕಣಕ್ಕಾಗಿಯೇ ಕೊಹ್ಲಿ ಆಟಕ್ಕೆ ಬ್ರೇಕ್ ಬಯಸಿದ್ದಾರೆ. ಡಿಸೆಂಬರ್ ನಲ್ಲಿ ಈ ಸ್ಟಾರ್ ಜೋಡಿ ಸಪ್ತಪದಿ ತುಳಿಯಲಿದೆ ಎಂದು ಮೂಲಗಳು ತಿಳಿಸಿವೆ.

ನಿನ್ನೆಯಷ್ಟೇ ಶ್ರೀಲಂಕಾ ವಿರುದ್ಧದ ಸರಣಿಗೆ ಬಿಸಿಸಿಐ ಟೀಮ್ ಇಂಡಿಯಾವನ್ನು ಸೆಲೆಕ್ಟ್ ಮಾಡಿದೆ. ನವೆಂಬರ್ 16ರಂದು ಶುರುವಾಗೋ ಮೊದಲೆರಡು ಟೆಸ್ಟ್ ಗೆ ಮಾತ್ರ ಪಾಳಯ ಪ್ರಕಟವಾಗಿದೆ. ಆದರೆ ಕೊನೆಯ ಟೆಸ್ಟ್, ಏಕದಿನ, ಟಿ-ಟ್ವೆಂಟಿಗೆ ನಂತರವಷ್ಟೇ ತಂಡವನ್ನು ಆಯ್ಕೆ ಮಾಡಲಾಗುತ್ತದೆ. ಬಿಸಿಸಿಐ ಕೂಡಾ ವಿರಾಟ್ ಕೊಹ್ಲಿಗೆ ರೆಸ್ಟ್ ನೀಡೋ ಬಗ್ಗೆ ಸುಳಿವು ನೀಡಿದೆ. ಹೀಗಾಗಿ ರೋಹಿತ್ ಶರ್ಮಾ ಕ್ಯಾಪ್ಟನ್ ಆಗಲಿದ್ದಾರೆ ಎನ್ನಲಾಗುತ್ತಿದೆ.
ವೈಯಕ್ತಿಕ ಕಾರಣಗಳಿಂದಾಗಿ ಈ ಸರಣಿಯಲ್ಲಿ ತಮಗೆ ಆಡಲು ಸಾಧ್ಯವಾಗುತ್ತಿಲ್ಲ ಎಂದು ಬಿಸಿಸಿಐಗೆ ಬರೆದ ಮನವಿಯಲ್ಲಿ ತಿಳಿಸಿದ್ದರು. ಜನವರಿಯಿಂದ ಟೀಮ್ ಇಂಡಿಯಾ ದಕ್ಷಿಣ ಆಫ್ರಿಕಾದ ಪ್ರವಾಸ ಕೈಗೊಳ್ಳಲಿದ್ದು, ನಿರಂತರ ಕ್ರಿಕೆಟ್ ಆಡುತ್ತೀರೋ ಕೊಹ್ಲಿ ಅದಕ್ಕೂ ಮೊದಲು ಕೊಂಚ ವಿರಾಮ ಬಯಸಿದ್ದು, ಹಲವು ಅನುಮಾನಗಳು ವ್ಯಕ್ತವಾಗಿದ್ದವು.
ಒಟ್ಟಿನಲ್ಲಿ ಇದೂವರೆಗೆ ಜೋಡಿ ಹಕ್ಕಿಗಳಂತೆ ತಿರುಗಾಡುತ್ತಿದ್ದ ಅನುಷ್ಕಾ ಮತ್ತು ವಿರಾಟ್ ಶೀಘ್ರವೇ ಸತಿಪತಿಗಳಾಗಿದ್ದಾರೆ ಅನ್ನೋದು ಮಾತ್ರ ಕನ್ಫರ್ಮ್ ಆಗಿದೆ.









Leave a Reply