ಮೊಟ್ಟ ಮೊದಲ ಬಾರಿಗೆ ವಿಶೇಷ ವ್ಯಕ್ತಿ ಜೊತೆ ಕ್ರೇಜಿ ಸ್ಟಾರ್ ಸೆಲ್ಫಿ!

ಬೆಂಗಳೂರು: ಕ್ರೇಜಿ ಸ್ಟಾರ್ ರವಿಚಂದ್ರನ್ ಅವರು ಮೊಟ್ಟ ಮೊದಲ ಬಾರಿಗೆ ವಿಶೇಷ ವ್ಯಕ್ತಿಯೊಬ್ಬರ ಜೊತೆ ಸೆಲ್ಫಿ ತೆಗೆದುಕೊಂಡಿದ್ದಾರೆ.

ರವಿಚಂದ್ರನ್ ಅವರು ಸೆಲ್ಫಿಯಿಂದ ದೂರ ಇರುತ್ತಿದ್ದರು. ಈಗ ಮೊದಲ ಬಾರಿಗೆ ತಮ್ಮ ಪತ್ನಿ ಸುಮತಿ ಜೊತೆ ಸೆಲ್ಫಿ ತೆಗೆದುಕೊಂಡಿದ್ದಾರೆ. ಆ ಸೆಲ್ಫಿ ಫೋಟೋವನ್ನು ಅವರ ಮಗ ಮನೋರಂಜನ್ ರವಿಚಂದ್ರನ್ ತಮ್ಮ ಇನ್‍ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದಾರೆ.

ತನ್ನ ತಂದೆ ಹಾಗೂ ತಾಯಿಯ ಸೆಲ್ಫಿ ಫೋಟೋವನ್ನು ಪುತ್ರ ಮನೋರಂಜನ್ ಇನ್‍ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ಆ ಫೋಟೋ ಪೋಸ್ಟ್ ಮಾಡಿ ಅದಕ್ಕೆ, “ಎಂದಿಗೂ ಸೆಲ್ಫಿ ತೆಗೆದುಕೊಳ್ಳದ ಅಪ್ಪ ಇಂದು ಮೊದಲ ಬಾರಿಗೆ ಅಮ್ಮನಿಗಾಗಿ ಅವರೊಂದಿಗೆ ಸೆಲ್ಫಿ ತೆಗೆದುಕೊಂಡಿದ್ದಾರೆ” ಎಂದು ಮನೋರಂಜನ್ ಪೋಸ್ಟ್ ನಲ್ಲಿ ಬರೆದುಕೊಂಡಿದ್ದಾರೆ.

Someone who never takes a selfie has finally taken for his wife! #powerofawoman

A post shared by Manoranjan Ravichandran (@mano_ravichandran) on

ರವಿಚಂದ್ರನ್ ಅವರ ಜೊತೆ ಒಂದೇ ಒಂದು ಸೆಲ್ಫಿ ತೆಗೆದುಕೊಳ್ಳಲು ಸಾಕಷ್ಟು ಅಭಿಮಾನಿಗಳು ಕಾಯುತ್ತಿರುತ್ತಾರೆ. ಹೀಗಿರುವಾಗ ರವಿಚಂದ್ರನ್ ತಮ್ಮ ಪತ್ನಿ ಸುಮತಿ ಜೊತೆ ಮೊದಲ ಬಾರಿಗೆ ಸೆಲ್ಫಿ ತೆಗೆದುಕೊಂಡಿದ್ದಾರೆ.

ಸದ್ಯ ರವಿಚಂದ್ರನ್ ಈಗ ‘ರಾಜೇಂದ್ರ ಪೊನ್ನಪ್ಪ’ ಸಿನಿಮಾದ ನಿರ್ಮಾಣದಲ್ಲಿ ಬ್ಯೂಸಿಯಾಗಿದ್ದರೆ. ಇನ್ನೂ ಅವರ ಪುತ್ರ ಮನೋರಂಜನ್ ‘ಚಿಲ್ಲಂ’ ಚಿತ್ರದಲ್ಲಿ ನಟಿಸುತ್ತಿದ್ದಾರೆ.

Comments

Leave a Reply

Your email address will not be published. Required fields are marked *