ಮಗಳಿಗಾಗಿ 36 ವರ್ಷ ಪುರುಷನ ವೇಷದಲ್ಲಿದ್ದ ತಾಯಿ

TAMILNADU WOMEN

ಚೆನ್ನೈ: ಮಹಿಳೆಯರಿಂದು ಎಲ್ಲ ಕ್ಷೇತ್ರಗಳಲ್ಲೂ ಪುರುಷರಿಗೆ ಸರಿಸಮನಾಗಿ ನಿಲ್ಲುತ್ತಿದ್ದಾರೆ. ಆದರೆ, ಲೈಂಗಿಕ ಕಿರುಕುಳದಿಂದ ಬೇಸತ್ತಿದ್ದ 57 ವರ್ಷದ ಮಹಿಳೆಯೊಬ್ಬರು ತನ್ನ ಮಗಳಿಗಾಗಿ ಕಳೆದ 36 ವರ್ಷಗಳಿಂದ ಪುರುಷನ ಸೋಗಿನಲ್ಲೇ ಜೀವಿಸುತ್ತಿದ್ದ ಮನಕಲಕುವ ಘಟನೆ ಇದೀಗ ಬೆಳಕಿಗೆ ಬಂದಿದೆ.

ತಮಿಳುನಾಡಿನ ಕಾಟುನಾಯಕನಹಟ್ಟಿ ನಿವಾಸಿಯಾದ ಎಸ್.ಪಚ್ಚಿಯಮ್ಹಾಳ್ ಎಂಬವರೇ ಈ ಘಟನೆಗೆ ಸಾಕ್ಷಿಯಾಗಿರುವುದು. ಇದನ್ನೂ ಓದಿ: ಯುವತಿಯರೊಂದಿಗೆ ಕುಣಿದು ಕುಪ್ಪಳಿಸಿದ MLA ಗೋಪಾಲ್ ಮಂಡಲ್ – ವೀಡಿಯೋ ವೈರಲ್ 

02

ಈಕೆ ತನ್ನ 20ನೇ ವಯಸ್ಸಿನಲ್ಲಿ ಮದುವೆಯಾಗಿ, 15 ದಿನಗಳಲ್ಲೇ ಪತಿಯನ್ನು ಕಳೆದುಕೊಂಡಿದ್ದರು. ಘಟನೆ ನಡೆದ ಕೆಲ ತಿಂಗಳಲ್ಲೇ ಹೆಣ್ಣುಮಗುವಿಗೆ ಜನ್ಮ ನೀಡಿದ ಪಚ್ಚಿಯಮ್ಹಾಳ್ ತನ್ನ ಕುಟುಂಬದ ನಿರ್ವಹಣೆಗಾಗಿ ಕೆಲಸ ಮಾಡುವುದು ಅನಿವಾರ್ಯವಾಗಿತ್ತು. ಈ ನಡುವೆ ಗ್ರಾಮಸ್ಥರ ಲೈಂಗಿಕ ಕಿರುಕುಳದಿಂದ ಬೇಸತ್ತ ಈಕೆ ಪಾರಾಗಲು ಪುರುಷನ ವೇಷ ಧರಿಸುವ ದೃಢ ನಿರ್ಧಾರ ಮಾಡಿದರು.

ಪುರುಷರಂತೆ ತಮ್ಮ ಕೂದಲು ಕತ್ತರಿಸಿಕೊಂಡು, ಸೀರೆ ಬಿಟ್ಟು ಶರ್ಟ್, ಲುಂಗಿ ಧರಿಸಲು ಮುಂದಾದರು. ತಮ್ಮ ಹೆಸರನ್ನು ಮುತ್ತು ಎಂದು ಬದಲಾಯಿಸಿಕೊಂಡು ಪುರುಷನಂತೆಯೇ ಜೀವಿಸಲು ಆರಂಭಿಸಿದರು. ಹೋಟೆಲ್‌ಗಳಲ್ಲಿ, ಚಹಾ ಅಂಗಡಿಗಳಲ್ಲಿ ಕೆಲಸ ಮಾಡಿದ ಪಚ್ಚಿಯಮ್ಹಾಳ್ ಅಲಿಯಾಸ್ ಮುತ್ತು ತಮ್ಮ ಆಧಾರ್ ಕಾರ್ಡ್, ಮತದಾರರ ಗುರುತಿನ ಚೀಟಿ ಹಾಗೂ ಬ್ಯಾಂಕ್ ಖಾತೆಯನ್ನು ಅದೇ ಹೆಸರಿನಲ್ಲೇ ಪಡೆದಿದ್ದಾರೆ.

TAMILNADU WOMEN (1)

ಸತತ 36 ವರ್ಷಗಳ ಕಾಲ ಪುರುಷನಂತೆ ವೇಷ ಧರಿಸಿ ಬದುಕಿದ್ದ ಈಕೆ ತನ್ನ ಮಗಳಿಗೆ ಮಾತ್ರ ಮಹಿಳೆ ಎಂಬುದು ತಿಳಿದಿತ್ತು ಎಂದು ಹೇಳಿಕೊಂಡಿದ್ದಾರೆ. ಇದನ್ನೂ ಓದಿ: ಅಲ್ಪಸಂಖ್ಯಾತರ ಮೀಸಲಾತಿ ನಿಲ್ಲಿಸುತ್ತೇವೆ – ತೆಲಂಗಾಣ ಸರ್ಕಾರದ ವಿರುದ್ಧ ಶಾ ಗುಡುಗು

ಮಗಳು ಷಣ್ಮುಗಸುಂದರಿ ಈಗ ಮದುವೆಯಾಗಿದ್ದು, ಕುಟುಂಬ ಆರ್ಥಿಕವಾಗಿ ಉತ್ತಮ ಸ್ಥಿತಿಯಲ್ಲಿದೆ. ಆದರೆ, ಪೆಚ್ಚಿಯಮ್ಮಾಳ್ ತನ್ನ ಉಡುಪನ್ನು ಅಥವಾ ಗುರುತನ್ನು ಬದಲಾಯಿಸಲು ಇನ್ನೂ ಸಿದ್ಧವಾಗಿಲ್ಲ. ಏಕೆಂದರೆ ತನ್ನ ಗುರುತಿನ ಬದಲಾವಣೆ ಮಗಳಿಗೆ ಸುರಕ್ಷಿತ ಜೀವನ ಕಲ್ಪಿಸಿದೆ ಎಂಬುದನ್ನು ಆಕೆ ದೃಢವಾಗಿ ನಂಬಿದ್ದಾಳೆ.

Comments

Leave a Reply

Your email address will not be published. Required fields are marked *