ಮದುವೆಯಾಗದೇ ನಾಲ್ಕನೇ ಮಗುವಿಗೆ ತಂದೆಯಾದ ರೋನಾಲ್ಡೋ

ವಾಷಿಂಗ್ಟನ್: ಫುಟ್‍ಬಾಲ್ ಆಟಗಾರ ಕ್ರಿಸ್ಟಿಯಾನೋ ರೋನಾಲ್ಡೋ ಮದುವೆಯಾಗದೇ ನಾಲ್ಕನೇ ಮಗುವಿಗೆ ತಂದೆಯಾಗಿದ್ದಾರೆ. ಟ್ವಿಟ್ಟರ್ ನಲ್ಲಿ ಆಸ್ಪತ್ರೆಯಲ್ಲಿರುವ ಗರ್ಲ್ ಫ್ರೆಂಡ್ ಜೊತೆಗಿರುವ ಫೋಟೋ ಹಾಕಿ ತಮ್ಮ ಸಂತೋಷದ ಕ್ಷಣಗಳನ್ನು ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ.

ಫೋಟೋದಲ್ಲಿ ಗೆಳತಿ ಜಾರ್ಜಿನಾ ರೊಡ್ರಿಗಜ್, ನವಜಾತ ಹೆಣ್ಣು ಮಗು, ರೋನಾಲ್ಡೊ ಮತ್ತು ಹಿರಿಯ ಮಗ ಜೂನಿಯರ್ ರೋನಾಲ್ಡೋರನ್ನು ನೋಡಬಹುದು. ಈಗಾಗಲೇ ಮಗುವಿಗೆ ಅಲಾನಾ ಮಾರ್ಟಿನ್ ಎಂದು ಹೆಸರಿಡಲಾಗಿದ್ದು, ತಾಯಿ ಮತ್ತು ಮಗು ಆರೋಗ್ಯವಾಗಿದ್ದಾರೆ ಎಂದು ಬರೆದುಕೊಂಡಿದ್ದಾರೆ.

ರೋನಾಲ್ಡೋ ಇದೇ ವರ್ಷ ಜೂನ್ ತಿಂಗಳಲ್ಲಿ ಇವಾ ಮತ್ತು ಮೆಥ್ಯೂ ಎಂಬ ಅವಳಿ ಮಕ್ಕಳಿಗೆ ತಂದೆಯಾಗಿದ್ದರು. ರೋನಾಲ್ಡೋ ಈ ಅವಳಿ ಮಕ್ಕಳನ್ನು ಬಾಡಿಗೆ ತಾಯಿಯ ಮೂಲಕ ಪಡೆದುಕೊಂಡಿದ್ದರು. ಜಾರ್ಜಿನಾ ಮತ್ತು ರೋನಾಲ್ಡೋ ತಮಗೆ ಹುಟ್ಟುವ ಮಗುವಿಗಿಂತ ಮೊದಲೇ ದತ್ತು ಮಕ್ಕಳನ್ನು ಪಡೆಯಲು ನಿರ್ಧರಿಸಿದ್ದು ವಿಶೇಷವಾಗಿತ್ತು. ಈ ದತ್ತು ಮಕ್ಕಳು ಹುಟ್ಟುವ ಮೊದಲೇ ಹೆಸರನ್ನು ಇಟ್ಟಿದ್ದರು.

ಜೂನಿಯರ್ ರೋನಾಲ್ಡೋ ತಾಯಿ ಯಾರು?:
ಫೋಟೋದಲ್ಲಿ ಕಾಣುವ ಜೂ.ರೋನಾಲ್ಡೋ ತಾಯಿ ಮೂಲತಃ ಬಾರ್ ಡ್ಯಾನ್ಸರ್ ಆಗಿದ್ದರು ಎಂದು ಹೇಳಲಾಗುತ್ತದೆ. ಆದರೆ ಇದೂವರೆಗೂ ಜೂ.ರೋನಾಲ್ಡೋ ತಾಯಿಯ ಬಗ್ಗೆ ಹೇಳಿಕೊಂಡಿಲ್ಲ. 2009ರಲ್ಲಿ ಬಾರ್ ನಲ್ಲಿ ಡ್ಯಾನ್ಸರ್ ಒಬ್ಬರನ್ನು ಭೇಟಿಯಾಗುವ ರೋನಾಲ್ಡೋ ಆಕೆಯನ್ನು ಇಷ್ಟಪಡುತ್ತಾರೆ. ನಂತರದ ದಿನಗಳಲ್ಲಿ ಒಬ್ಬರನೊಬ್ಬರನ್ನು ಇಷ್ಟಪಟ್ಟು ವಿವಾಹ ಪೂರ್ವ ದೈಹಿಕ ಸಂಪರ್ಕ ಬೆಳಸಿದ್ದಾರೆ.

ಡ್ಯಾನ್ಸರ್ ಗರ್ಭಿಣಿ ಎಂದು ತಿಳಿದಾಗ ರೋನಾಲ್ಡೋ ಡಿಎನ್‍ಎ ಪರೀಕ್ಷೆ ಬಳಿಕ ಅದು ತನ್ನ ಮಗು ಎಂದು ಒಪ್ಪಿಕೊಂಡಿದ್ದರು. ಮಗುವಿನ ಜನ್ಮ ನೀಡಿದ ಬಳಿಕ ರೋನಾಲ್ಡೋ ತಮ್ಮ ಮೊದಲ ಮಗುವಿಗೆ ಜೂ.ರೋನಾಲ್ಡೋ ಎಂದು ಹೆಸರಿಟ್ಟಿದ್ದರು. ಸದ್ಯ ರೋನಾಲ್ಡೋ ತಮ್ಮ ಗೆಳತಿಯೊಂದಿಗಿನ ಮೊದಲ ಮಗುವಿಗೆ ತಂದೆಯಾದ ಖುಷಿಯಲ್ಲಿದ್ದಾರೆ.

Comments

Leave a Reply

Your email address will not be published. Required fields are marked *