ಪ್ಲಾಸ್ಟಿಕ್ ಆಹಾರದ ವಿರುದ್ಧ ಅಧಿಕಾರಿಗಳ ಸಮರ – ಫೀಲ್ಡ್ ಗೆ ಇಳಿದು ದಾಳಿಗೆ ಸಜ್ಜು

– ಅಕ್ಷಯಪಾತ್ರೆ, ಅನ್ನಭಾಗ್ಯ ಅಕ್ಕಿ ಮೇಲೂ ಕಣ್ಣು

ಬೆಂಗಳೂರು: ಪ್ಲಾಸ್ಟಿಕ್ ಅಕ್ಕಿ, ಸಕ್ಕರೆ, ಮೊಟ್ಟೆಯ ಸುದ್ದಿಗೆ ಇಡೀ ರಾಜ್ಯ ಬೆಚ್ಚಿಬಿದ್ದಿದೆ. ರಾಜ್ಯದ ಮೂಲೆ ಮೂಲೆಯಿಂದಲೂ ಪ್ಲಾಸ್ಟಿಕ್ ಫುಡ್ ಬಗ್ಗೆ ಆಹಾರ ಸುರಕ್ಷತಾ ಇಲಾಖೆಗೆ ದೂರುಗಳ ಸುರಿಮಳೆ ಬಂದಿದೆ. ಇದ್ರಿಂದ ಅಲರ್ಟ್ ಆಗಿರುವ ಇಲಾಖೆ ಈಗ ರಾಜ್ಯದ ಮಾರ್ಟ್ ಗಳು, ಎಪಿಎಂಸಿ ,ರೈಸ್ ಮಿಲ್‍ಗಳು, ಅಂಗಡಿಗಳ ಮೇಲೆ ರೇಡ್ ಮಾಡಿ ಪ್ಲಾಸ್ಟಿಕ್ ಕಳ್ಳರ ಹುಡುಕಾಟದಲ್ಲಿದೆ.

ಅಧಿಕಾರಿಗಳು ಸುಮಾರು ಇನ್ನೂರು ಕಡೆಯಿಂದ ಅಕ್ಕಿ ಸಕ್ಕರೆ ಯ ಸ್ಯಾಂಪಲ್ ಸಂಗ್ರಹಿಸಿದ್ದಾರೆ. ಇಂದು ಕೂಡ ರಾಜ್ಯದ ಮಾರ್ಟ್ ಗಳು ರೈಸ್ ಮಿಲ್, ಎಪಿಎಂಸಿ, ದಿನಸಿ ಅಂಗಡಿಯಿಂದ ಸ್ಯಾಂಪಲ್ ಕಲೆಕ್ಟ್ ಮಾಡಿ ಲ್ಯಾಬ್ ಗೆ ಕಳಿಸಲಿದ್ದಾರೆ.

ಅಕ್ಷಯಪಾತ್ರೆ, ಅನ್ನಭಾಗ್ಯದ ಅಕ್ಕಿ ಮೇಲೂ ಕಣ್ಣು: ಮಧ್ಯಾಹ್ನದ ಬಿಸಿಯೂಟದ ಅಕ್ಷಯಪಾತ್ರೆ ಅಕ್ಕಿಯ ಸ್ಯಾಂಪಲ್ ಕೂಡ ಕಲೆಕ್ಟ್ ಮಾಡೋದಕ್ಕೆ ಇಲಾಖೆ ಅಧಿಕಾರಿಗಳು ಮುಂದಾಗಿದ್ದಾರೆ. ಸರ್ಕಾರದ ಜೊತೆ ಮಾತುಕತೆ ನಡೆಸಿ ಅನ್ನಭಾಗ್ಯದ ಅಕ್ಕಿಯನ್ನು ಲ್ಯಾಬ್ ಗೆ ಕಳಿಸುವ ಚಿಂತನೆ ಮಾಡಲಾಗಿದೆ.

ಇದನ್ನೂ ಓದಿ: ಅಕ್ಕಿ, ಮೊಟ್ಟೆ ಆಯ್ತು ಈಗ ಮಾರುಕಟ್ಟೆಗೆ ಲಗ್ಗೆ ಇಟ್ಟಿದೆ ಪ್ಲಾಸ್ಟಿಕ್ ಕ್ಯಾಬೇಜ್ – ವಿಡಿಯೋ ನೋಡಿ

ಇದನ್ನೂ ಓದಿ: ನೀವು ಓದ್ಲೇಬೇಕು, ಖರೀದಿಸಿದ ಅಕ್ಕಿ ಪ್ಲಾಸ್ಟಿಕ್ ಅಕ್ಕಿನಾ ಎಂದು ಕಂಡುಹಿಡಿಯೋಕೆ ಇಲ್ಲಿದೆ 5 ವಿಧಾನಗಳು

ಸ್ಯಾಂಪಲ್ ರಿಪೋರ್ಟ್‍ನಲ್ಲಿ ಕಲಬೆರೆಕೆ, ಪ್ಲಾಸ್ಟಿಕ್‍ನ ಸೂಚನೆ ಸಿಕ್ಕರೆ ಆಯಾ ಮಾಲೀಕರ ಮೇಲೆ ಕ್ರಿಮಿನಲ್ ಕೇಸ್ ದಾಖಲಿಸಲಾಗುವುದು. ಅಲ್ಲದೆ, ಒಂದು ಲಕ್ಷದಿಂದ 25 ಲಕ್ಷದವರೆಗೆ ದಂಡ ವಿಧಿಸಲಾಗುತ್ತೆ. ಕಲಬೆರಕೆ ಪ್ರಮಾಣ ಹೆಚ್ಚಿದ್ರೆ ಮಾರಾಟ ಮಾಡುವವರನ್ನ ಜೈಲಿಗೂ ಅಟ್ಟಬಹುದು. ಶಾಶ್ವತ ವಾಗಿ ಆಹಾರ ಪದಾರ್ಥ ಮಾರಾಟ ಮಾಡುವ ಲೈಸೆನ್ಸ್ ರದ್ದು ಮಾಡಬಹುದು.

ಕಲಬೆರಕೆ ಕಳ್ಳರ ಪತ್ತೆಗಾಗಿ ಅಧಿಕಾರಿಗಳ ಸಭೆ ಕೂಡ ಕರೆಯಲಾಗಿದೆ.

ಇದನ್ನೂ ಓದಿ: ಮೊಟ್ಟೆ ತಿನ್ನೋ ಬೆಂಗಳೂರಿಗರೇ ಎಚ್ಚರವಾಗಿರಿ!

Comments

Leave a Reply

Your email address will not be published. Required fields are marked *