ನಾಲಿಗೆಗೆ ರುಚಿ, ಆರೋಗ್ಯಕ್ಕೂ ಹಿತ ಲೆಮನ್ ಗ್ರಾಸ್ ಸೂಪ್!

ಲೆಮೆನ್‌ ಗ್ರಾಸ್‌ನಿಂದ ಆರೋಗ್ಯಕ್ಕೆ ಸಾಕಷ್ಟು ಉಪಯೋಗವಿದೆ. ಇದರಲ್ಲಿ ಆಂಟಿಆಕ್ಸಿಡೆಂಟ್ ಗುಣವಿದೆ. ರೋಗನಿರೋಧಕ ಶಕ್ತಿ ಹೆಚ್ಚಳಕ್ಕೆ ಇದು ಸಹಕಾರಿಯಾಗಿದೆ. ರಕ್ತದೊತ್ತಡ ನಿಯಂತ್ರಣಕ್ಕೆ ಬಹಳ ಉಪಯುಕ್ತ. ಲೆಮೆನ್‌ ಗ್ರಾಸ್‌ನಿಂದ ಕಷಾಯ, ಚಹಾ ಸಹ ಮಾಡಬಹುದು. ಇಂದು ಲೆಮೆನ್‌ ಗ್ರಾಸ್‌ನಿಂದ ಸೂಪ್‌ ಮಾಡೋದು ಹೇಗೆ ಎಂದು ನೋಡೋಣ.

ಸೂಪ್‌ಗೆ ಬೇಕಾಗುವ ಸಾಮಗ್ರಿಗಳು
* ತೆಂಗಿನ ಎಣ್ಣೆ
* ಕೊತ್ತಂಬರಿ ಸೊಪ್ಪು
* ಶುಂಠಿ ಪೇಸ್ಟ್, ಬೆಳ್ಳುಳ್ಳಿ
* ಕತ್ತರಿಸಿದ ಈರುಳ್ಳಿ
* ಬ್ರೊಕೊಲಿ
* ಬೇಯಿಸಿದ ಪಾಲಕ್
* ನಿಂಬೆ ರಸ
* ಲೆಮನ್ ಗ್ರಾಸ್ ಕಾಂಡ
* ಪನೀರ್
* ತೆಂಗಿನ ಹಾಲು
* ಉಪ್ಪು

ಲೆಮನ್ ಗ್ರಾಸ್ ಪನೀರ್ ಸೂಪ್ ಮಾಡುವ ವಿಧಾನ
ಪ್ಯಾನ್ ಬಿಸಿ ಮಾಡಿ. ಅದಕ್ಕೆ ಈರುಳ್ಳಿ, ಶುಂಠಿ, ಬೆಳ್ಳುಳ್ಳಿ, ಬೇಯಿಸಿದ ಕೋಸುಗಡ್ಡೆ ಮತ್ತು ಲೆಮಾನ್‌ ಗ್ರಾಸ್ ಸೇರಿಸಿ, 5 ನಿಮಿಷ ಫ್ರೈ ಮಾಡಿ. ಅದಕ್ಕೆ ಕೊತ್ತಂಬರಿ ಸೊಪ್ಪು ಮತ್ತು ಪಾಲಕ್ ಸೊಪ್ಪು, ಉಪ್ಪು, ನಿಂಬೆ ರಸ, ಹಾಕಿ ಫ್ರೈ ಮಾಡಿ. ನಂತರ ತಣ್ಣಗಾಗಿಸಿ, ನುಣ್ಣಗೆ ರುಬ್ಬಿರಿ. ನಂತರ ಪನೀರ್ ಫ್ರೈ ಮಾಡಿ. ಬಾಣಲೆಗೆ ತೆಂಗಿನ ಹಾಲು ಹಾಕಿ. ಬಿಸಿಯಾದ ನಂತರ ಪೇಸ್ಟ್ ಹಾಕಿ ಬೆರೆಸಿ, ಕುದಿಸಿ. ನಂತರ ಪನೀರ್ ಹಾಕಿ. ಬ್ರೊಕೊಲಿ, ಕೊತ್ತಂಬರಿ ಸೊಪ್ಪು ಹಾಕಿ ಸರ್ವ್ ಮಾಡಿ.