ಚಾನೆಲ್ ಚೇಂಜ್ ಮಾಡಿ ಎಂದಿದ್ದಕ್ಕೆ ಪತ್ನಿಗೆ ಚಾಕು ಇರಿತ

ಚೆನ್ನೈ: ಚಾನೆಲ್ ಚೇಂಜ್ ಮಾಡಿ ಎಂದು ಹೇಳಿದಕ್ಕೆ ಪತಿ ತನ್ನ ಪತ್ನಿಗೆ ಚಾಕು ಇರಿದ ಘಟನೆ ತಮಿಳುನಾಡಿನ ತ್ರಿಪ್ಲಿಕೇನ್‍ನ ಅಯೋತಿನಗರದಲ್ಲಿ ನಡೆದಿದೆ.

ವೀರನ್ ಪತ್ನಿಗೆ ಚಾಕು ಇರಿದ ಪತಿ. ವೀರನ್ ಹಾಗೂ ಪತ್ನಿ ಉಷಾ(47) ಇಬ್ಬರು ಜೊತೆಯಲ್ಲಿ ಟಿವಿ ನೋಡುತ್ತಿದ್ದರು. ಈ ವೇಳೆ ಉಷಾ ತನ್ನ ಬೇರೆ ಚಾನೆಲ್‍ನಲ್ಲಿ ಬರುವ ಕಾರ್ಯಕ್ರಮವನ್ನು ವೀಕ್ಷಿಸಬೇಕು ಚೇಂಜ್ ಮಾಡಿ ಎಂದು ಪತಿಗೆ ಹೇಳಿದ್ದಾಳೆ. ಆದರೆ ಪತಿ ಇದಕ್ಕೆ ನಿರಾಕರಿಸಿದ್ದಾನೆ.

ಇದೇ ವಿಷಯಕ್ಕಾಗಿ ವೀರನ್ ಹಾಗೂ ಉಷಾ ನಡುವೆ ಜಗಳ ಶುರುವಾಗಿದೆ. ಅಲ್ಲದೇ ವೀರನ್ ತನ್ನ ಪತ್ನಿ ಉಷಾಗೆ ನಿಂದಿಸಿ ಆಕೆಯನ್ನು ನೆಲಕ್ಕೆ ತಳ್ಳಿದ್ದಾನೆ. ಈ ವೇಳೆ ಉಷಾ ಮೊದಲು ಟೇಬಲ್ ಮೇಲೆ ಬಿದ್ದು ಬಳಿಕ ಕೆಳಗೆ ಬಿದ್ದಿದ್ದಾಳೆ. ಟೇಬಲ್ ಮೇಲೆ ಬಿದ್ದಾಗ ಉಷಾಗೆ ಗಂಭೀರ ಗಾಯಗಳಾಗಿದೆ.

ಇದಾದ ಬಳಿಕ ವೀರನ್ ಅಡುಗೆ ಮನೆಗೆ ಹೋಗಿ ಚಾಕು ತಂದು ಪತ್ನಿಗೆ ಬೆದರಿಕೆ ಹಾಕಿದ್ದಾನೆ. ಆದರೂ ಉಷಾ ಸುಮ್ಮನಿರದೇ ವೀರನ್ ಜೊತೆ ವಾದ ಮಾಡಿದ್ದಾಳೆ. ಇದರಿಂದ ಕೋಪಗೊಂಡ ವೀರನ್ ಪತ್ನಿಗೆ ಹಲವು ಬಾರಿ ಚಾಕು ಇರಿದಿದ್ದಾನೆ.

ಸದ್ಯ ಉಷಾಳ ಎದೆ, ಹೊಟ್ಟೆ ಹಾಗೂ ಕುತ್ತಿಗೆ ಭಾಗದಲ್ಲಿ ಗಂಭೀರ ಗಾಯಗಳಾಗಿದ್ದು, ಆಕೆ ಸರ್ಕಾರಿ ಆಸ್ಪತ್ರೆಯಲ್ಲಿ ಸಾವು – ಬದುಕಿನ ಮಧ್ಯೆ ಹೋರಾಟ ನಡೆಸುತ್ತಿದ್ದಾಳೆ. ಈ ಘಟನೆ ಬಗ್ಗೆ ಅಕ್ಕಪಕ್ಕದ ಮನೆಯವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಬಂದ ಪೊಲೀಸರು ವೀರನ್‍ನನ್ನು ಬಂಧಿಸಿ ಆತನ ವಿರುದ್ಧ ಐಪಿಸಿ ಸೆಕ್ಷನ್ ಕೊಲೆ ಪ್ರಯತ್ನ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv

Comments

Leave a Reply

Your email address will not be published. Required fields are marked *