ಅಪ್ಪು ಸಮಾಧಿ ಭೇಟಿಗೆ ಸೈಕಲ್‍ನಲ್ಲಿ ಹೊರಟ ಅಭಿಮಾನಿ

ಬಾಗಲಕೋಟೆ: ಇತ್ತೀಚೆಗೆ ನಮ್ಮನ್ನೆಲ್ಲ ಅಗಲಿದ ಪುನೀತ್ ರಾಜ್ ಕುಮಾರ್ ಅವರು ಸಮಾಧಿಗೆ ಭೇಟಿ ನೀಡಲು ಬಾಗಲಕೋಟೆ ಅಭಿಮಾನಿಯೊಬ್ಬ ಸೈಕಲ್ ಮೇಲೆ ಸವಾರಿ ಬೆಳೆಸಿದ್ದಾನೆ. ಅಪ್ಪು ಸಮಾಧಿ ಭೇಟಿ ನೀಡಿ ಶ್ರದ್ಧಾಂಜಲಿ ಸಲ್ಲಿಸಲು ಮುಂದಾಗಿರುವ ಅಭಿಮಾನಿ, ಸೈಕಲ್ ಯಾತ್ರೆ ಹಮ್ಮಿಕೊಂಡಿದ್ದಾನೆ.

ಮೂಲತಃ ಬೀಳಗಿ ತಾಲೂಕಿನ ಬಾದರದಿನ್ನಿ ಗ್ರಾಮದ ರಾಘವೇಂದ್ರ ಗಾಣಿಗೇರ್ ಎಂಬ ವ್ಯಕ್ತಿಯೇ, ಯುವರತ್ನನ ಅಭಿಮಾನಿಯಾಗಿದ್ದು, ನಿನ್ನೆ ಬೀಳಗಿ ತಾಲೂಕಿನ ಬಾದರದಿನ್ನಿ ಗ್ರಾಮದಿಂದ ಆರಂಭಿಸಿದ್ದ ಸೈಕಲ್ ಯಾತ್ರೆ ಆರಂಭಿಸಿದ್ದಾನೆ. ನಿನ್ನೆ ರಾತ್ರಿ ಹುನಗುಂದ ತಲುಪಿ ಅಲ್ಲಿ ವಾಸ್ತವ್ಯ ಹೂಡಿದ್ದ ರಾಘವೇಂದ್ರ, ಇಂದು ಬೆಳಗ್ಗೆ ಹುನಗುಂದ ಪಟ್ಟಣದಿಂದ ಸೈಕಲ್ ಯಾತ್ರೆ ಶುರುವಿಟ್ಟುಕೊಂಡಿದ್ದಾನೆ. ಇದನ್ನೂ ಓದಿ: ಪವರ್ ಸ್ಟಾರ್ ಮನೆಗೆ ಮುರುಘಾ ಶ್ರೀ ಭೇಟಿ – ಬಸವ ಶ್ರೀ ಪ್ರಶಸ್ತಿ ಪ್ರದಾನಕ್ಕೆ ಅಶ್ವಿನಿಗೆ ಆಹ್ವಾನ

ರಾಘವೇಂದ್ರ ಹುನಗುಂದ ತಲುಪುತ್ತಿದ್ದಂತೆ ಪಟ್ಡಣದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು, ಅಪ್ಪು ಅಭಿಮಾನಿಗಳು ರಾಘವೇಂದ್ರಗೆ ಸನ್ಮಾನ ಮಾಡಿ ಕಳುಹಿಸಿಕೊಟ್ಟಿದ್ದಾರೆ. ಬಾದರದಿನ್ನಿ ಗ್ರಾಮದಿಂದ ಬೆಂಗಳೂರುವರೆಗೆ 600 ಕಿಮೀ ಸೈಕಲ್ ಯಾತ್ರೆ ಮಾಡಲು ನಿರ್ಧರಿಸಿರುವ ರಾಘವೇಂದ್ರ, ಕನ್ನಡಧ್ವಜ, ಸೈಕಲ್ ಹಿಂದೆ ಮುಂದೆ ಅಪ್ಪು ಭಾವಚಿತ್ರ ಕಟ್ಟಿಕೊಂಡು ಸೈಕಲ್ ಯಾತ್ರೆ ಹೊರಟಿದ್ದಾನೆ.

ಅಪ್ಪು ಸಮಾದಿಗೆ ತೆರಳಿ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಿ ವಾಪಸ್ ಆಗಲಿದ್ದಾನೆ. ಅಪ್ಪು ಮೃತಪಟ್ಟ ದಿನವೇ ಹೋಗಬೇಕೆಂದುಕೊಂಡಿದ್ದ ಅಭಿಮಾನಿ, ಆರೋಗ್ಯ ಸರಿ ಇಲ್ಲದ ಕಾರಣ ಈಗ ಸೈಕಲ್ ಯಾತ್ರೆ ಹೊರಟಿರುವುದಾಗಿ ತಿಳಿಸಿದ್ದಾನೆ. ಹುನಗುಂದ, ಇಳಕಲ್, ಚಿತ್ರದುರ್ಗ ಮಾರ್ಗವಾಗಿ ಬೆಂಗಳೂರಿನ ಅಪ್ಪು ಸಮಾಧಿವರೆಗೆ ರಾಘವೇಂದ್ರ ಸೈಕಲ್ ಯಾತ್ರೆ ಚಲಿಸಲಿದೆ. ಇದನ್ನೂ ಓದಿ: ಅಪ್ಪು ನಟನೆಯ ಚಿತ್ರದ ಶೀರ್ಷಿಕೆಗಳಲ್ಲೇ ಗೀತೆ ರಚನೆ ಮಾಡಿದ ತಂದೆ, ಜೀವ ತುಂಬಿದ ಮಗಳು

Comments

Leave a Reply

Your email address will not be published. Required fields are marked *