ಶಾರ್ಟ್ ಸರ್ಕ್ಯೂಟ್‍ನಿಂದಾಗಿ ಹೊತ್ತಿ ಉರಿದ ಫ್ಲವರ್ ಡೆಕೊರೇಷನ್ ಗೋದಾಮು

fire

ಆನೇಕಲ್: ಶಾರ್ಟ್ ಸರ್ಕ್ಯೂಟ್‍ನಿಂದಾಗಿ ಫ್ಲವರ್ ಡೆಕೊರೇಷನ್ ಗೋದಾಮಿಗೆ ಬೆಂಕಿ ಹೊತ್ತಿಕೊಂಡು 20 ಲಕ್ಷಕ್ಕೂ ಹೆಚ್ಚು ಮೌಲ್ಯದ ವಸ್ತುಗಳು ಸುಟ್ಟು ಕರಕಲಾಗಿರುವ ಘಟನೆ ಬೆಂಗಳೂರು ಹೊರವಲಯ ಆನೇಕಲ್ ಪಟ್ಟಣದ ಬಳಿ ನಡೆದಿದೆ.

ಕುಮಾರ್ ಎಂಬವರಿಗೆ ಸೇರಿದ ಫ್ಲವರ್ ಡೆಕೊರೇಷನ್ ಗೋದಾಮಿಗೆ ಶನಿವಾರ ತಡರಾತ್ರಿ ಬೆಂಕಿ ಬಿದ್ದಿದೆ. ಫೈಬರ್ ಹಾಗೂ ಪ್ಲಾಸ್ಟಿಕ್ ವಸ್ತುಗಳು ಹೆಚ್ಚಾಗಿದ್ದರಿಂದ ಬೆಂಕಿಯ ಕೆನ್ನಾಲಿಗೆ ಕ್ಷಣಾರ್ಧದಲ್ಲಿ ಇಡೀ ಗೋದಾಮಿಗೆ ಆವರಿಸಿಕೊಂಡಿದೆ. ಇದೇ ಗೋದಾಮಿನ ಪಕ್ಕದಲ್ಲಿ ಸ್ಕ್ರಾಪ್ ಗೋದಾಮು ಇದ್ದವು.

ಘಟನೆ ನಡೆಯುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಆನೇಕಲ್ ಪಟ್ಟಣದ ಅಗ್ನಿಶಾಮಕ ಠಾಣೆಯ ಎರಡು ವಾಹನಗಳು ಹಾಗೂ ಸಿಬ್ಬಂದಿ 3 ಗಂಟೆಗೂ ಹೆಚ್ಚು ಕಾಲ ನಿರಂತರ ಕಾರ್ಯಾಚರಣೆ ನಡೆಸಿ ಬೆಂಕಿಯ ಕೆನ್ನಾಲಿಗೆ ಹತೋಟಿಗೆ ತಂದಿದ್ದಾರೆ. ಇದನ್ನೂ ಓದಿ: ರಾಜ್ಯದಲ್ಲಿ ಕೋವಿಡ್ 4ನೇ ಅಲೆ ಆರಂಭ – ಡಾ. ಸಿ.ಎನ್.ಮಂಜುನಾಥ್ ಎಚ್ಚರಿಕೆ

ತಿಮ್ಮರಾಯಸ್ವಾಮಿ ದೇವಾಲಯಕ್ಕೆ ಹೋಗುವ ಮುಖ್ಯರಸ್ತೆಯಲ್ಲಿ ಘಟನೆ ನಡೆದಿದ್ದರಿಂದ ರಾತ್ರಿ ಸಮಯದಲ್ಲಿ ಯಾರಾದರೂ ಕಿಡಿಗೇಡಿಗಳು ಬೆಂಕಿ ಇಟ್ಟಿದ್ದಾರಾ ಅಥವಾ ಶಾರ್ಟ್ ಸರ್ಕ್ಯೂಟ್‌ನಿಂದ ಬೆಂಕಿ ಹತ್ತಿಕೊಂಡಿದೆಯಾ ಎನ್ನುವ ಬಗ್ಗೆ ಅನುಮಾನವಿದ್ದು, ಬೆಂಕಿ ಹೊತ್ತಿಕೊಳ್ಳುತ್ತಿದ್ದರೂ ಅಕ್ಕಪಕ್ಕದ ನಿವಾಸಿಗಳಿಗೆ ಕೆಲಹೊತ್ತು ಏನಾಯ್ತು ಎಂದು ಗೊತ್ತಾಗದೇ ಸ್ಥಳದಲ್ಲಿ  ಜಮಾಯಿಸಿದ್ದರು.

ಬೆಂಕಿಯನ್ನು ನಂದಿಸಲು ಅಗ್ನಿಶಾಮಕ ಠಾಣೆಯ ಸಿಬ್ಬಂದಿಗೆ ಸ್ಥಳೀಯರು ಕೂಡ ಸಹಕಾರ ನೀಡಿದರು. ಘಟನೆ ಸಂಬಂಧ ಆನೇಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ರಾಜೀನಾಮೆ ಪತ್ರವನ್ನು ಸೋನಿಯಾ ಗಾಂಧಿ ಬಳಿ ಶಾಶ್ವತವಾಗಿ ಇರಿಸಲಾಗಿದೆ: ರಾಜಸ್ಥಾನ ಸಿಎಂ

Comments

Leave a Reply

Your email address will not be published. Required fields are marked *