ಉಲ್ಲಾಳ ಕೆರೆಯಂಗಳದಲ್ಲಿ ಎಲ್ಲಿ ನೋಡಿದ್ರೂ ಮಾಂಸ, ಮೆಡಿಕಲ್ ವೇಸ್ಟ್; ಅನಾಹುತದ ಬಗ್ಗೆ ಸ್ಥಳೀಯರ ಆತಂಕ

– ಪವಿತ್ರ ಕಡ್ತಲ
ಬೆಂಗಳೂರು: ಇಲ್ಲಿನ ಬೆಂಗಳೂರಿನ ಉಲ್ಲಾಳ ಕೆರೆಯಂಗಳದಲ್ಲಿ ಜೀವ ಉಳಿಸುವ ಆಸ್ಪತ್ರೆಗಳು ಇಲ್ಲಿನ ಜನ್ರ ಪಾಲಿಗೆ ಜೀವ ತೆಗೆಯಲು ಸಜ್ಜಾಗಿದೆ.

ಹೌದು. ಬೆಂಗಳೂರಿನ ಉಲ್ಲಾಳ ಕೆರೆ ಪಕ್ದಲ್ಲಿರೋ ರಸ್ತೆ ಬದಿ ಎಲ್ಲಿ ನೋಡಿದ್ರೂ ಬರೀ ಇಂಜೆಕ್ಷನ್, ಮೆಡಿಸಿನ್ ಬಾಟಲ್‍ಗಳು, ಮಾತ್ರೆಗಳು, ಕಪ್ಪು ಕವರ್‍ನಲ್ಲಿ ಸುತ್ತಿದ ತ್ಯಾಜ್ಯಗಳೇ ಕಾಣಸಿಗುತ್ತವೆ. ಈ ಏರಿಯಾದ ಸುತ್ತುಮುತ್ತ ಇರುವ ನರ್ಸಿಂಗ್ ಹೋಂಗಳು ರಾತ್ರೋರಾತ್ರಿ ಮೆಡಿಕಲ್ ತ್ಯಾಜ್ಯವನ್ನು ತಂದು ಸುರಿಯುತ್ತಿದ್ದಾರೆ.

ನರ್ಸಿಂಗ್ ಹೋಂಗಳಷ್ಟೇ ಅಲ್ಲ, ಮಾಂಸದಂಗಡಿಗಳು ವೇಸ್ಟೇಜ್‍ಗಳನ್ನು ಎಸೆದು ಹೋಗ್ತಾರೆ. ಈ ಬಗ್ಗೆ ಇಲ್ಲಿನ ಸ್ಥಳೀಯರು ಪಾಲಿಕೆಗೆ ದೂರು ನೀಡಿದ್ರೂ ಯಾವ್ದೆ ಪ್ರಯೋಜನವಾಗಿಲ್ಲ. ಇದ್ರಿಂದ ಎಲ್ಲಿ ಭೂಮಿ ಕಾದ ಕೆಂಡಂತಾಗಿ ಅನಾಹುತ ಸಂಭವಿಸುತ್ತೋ ಅಂತಾ ಇಲ್ಲಿನ ಸ್ಥಳೀಯರು ಆತಂಕಗೊಂಡಿದ್ದಾರೆ. ಅಲ್ಲದೆ ರಸ್ತೆಯಲ್ಲಿ ಓಡಾಡೋಕು ಸಾಧ್ಯವಾಗ್ತಿಲ್ಲ ಅಂತಾ ಸ್ಥಳೀಯರು ಹೇಳುತ್ತಿದ್ದಾರೆ.

ಮೆಡಿಕಲ್ ತ್ಯಾಜ್ಯ ಸಂಸ್ಕರಣೆಗೆ ಅದ್ರದ್ದೇ ಆದ ವಿಧಾನವಿದೆ. ಈ ರೀತಿ ಸಿಕ್ಕಸಿಕ್ಕಲ್ಲಿ ಮೆಡಿಕಲ್ ತ್ಯಾಜ್ಯವನ್ನ ಎಸೆಯುವಂತಿಲ್ಲ. ಆದ್ರೆ ಸಮಾಜದ ಸ್ವಾಸ್ಥ್ಯದ ಬಗ್ಗೆ ಗಮನಹರಿಸಬೇಕಾದ ಆಸ್ಪತ್ರೆಯವರೇ ಈ ರೀತಿ ವರ್ತನೆ ತೋರಿರೋದು ನಿಜಕ್ಕೂ ನಾಚಿಕೆಗೇಡು.

Comments

Leave a Reply

Your email address will not be published. Required fields are marked *