ಉತ್ತರಪ್ರದೇಶದ ಜನ ಜಾತಿ ಮತ ಮೀರಿ ಹೋಗಿದ್ದಾರೆ: ಜಾಫರ್ ಷರೀಫ್

ಬೆಂಗಳೂರು: ಕಾಂಗ್ರೆಸ್‍ನಲ್ಲಿ ಹಲವರು ಜಡ್ಡುಗಟ್ಟಿದವರು ಇದ್ದಾರೆ. ಶ್ರಮಜೀವಿಗಳು ಕಡಿಮೆ ಸಂಖ್ಯೆಯಲ್ಲಿದ್ದಾರೆ. ಉತ್ತರಪ್ರದೇಶ ಹಾಗು ಉತ್ತರಾಖಂಡ್‍ನಲ್ಲಿ ಬಿಜೆಪಿ ಬಹುಮತದ ಗೆಲವು ಅಚ್ಚರಿಯಲ್ಲ ಎಂದು ಕಾಂಗ್ರೆಸ್ ಹಿರಿಯ ಮುಖಂಡ ಜಾಫರ್ ಷರೀಫ್ ಹೇಳಿದ್ದಾರೆ.

ಈ ಪಂಚರಾಜ್ಯದ ಚುನಾವಣಾ ಫಲಿತಾಂಶ ಕರ್ನಾಟಕಕ್ಕೆ ಎಚ್ಚರಿಕೆ ಗಂಟೆಯಾಗಿದೆ. ಜನರು ಬದಲಾವಣೆಯನ್ನು ಬಯಸುತ್ತಿದ್ದಾರೆ. ಮುಸ್ಲಿಂ ಬಾಹುಳ್ಯವುಳ್ಳ ಕ್ಷೇತ್ರಗಳು ಬಿಜೆಪಿ ತೆಕ್ಕೆಗೆ ಬಂದಿರೋದು ನೋಡಿದ್ರೆ ಉತ್ತರಪ್ರದೇಶದ ಜನ ಜಾತಿ ಮತ ಮೀರಿ ಹೋಗಿದ್ದಾರೆ ಅನ್ನೋದಕ್ಕೆ ಸ್ಪಷ್ಟ ಉದಾಹರಣೆ ಆಗಿದೆ ಎಂದು ತಿಳಿಸಿದರು.

ಚುನಾವಣೆಗಳು ಏಕಕಾಲಕ್ಕೆ ನಡೆಯಬೇಕು. ಮೋದಿ ಅವರು ಕೂಡ ಇದನ್ನೇ ಹೇಳ್ತಾರೆ. ಇದರಿಂದ ಚುನಾವಣಾ ಖರ್ಚುಗಳು ಕಡಿಮೆ ಆಗುತ್ತವೆ. ರಾಹುಲ್ ಗಾಂಧಿಗೆ ಆದರ್ಶವಿದೆ. ಜನರು ಕೂಡಲೇ ಅದನ್ನು ಒಪ್ಪಿಕೊಳ್ಳುವುದಿಲ್ಲ. ರಾಹುಲ್ ಬೆಳೆಯಲು ಸಮಯ ಬೇಕು. ಇಂದಿರಾಗಾಂಧಿ ಅಂತಹ ನಾಯಕಿಯೂ ಸೋಲನ್ನು ನೋಡಿರುವಾಗ ರಾಹುಲ್ ನಾಯಕತ್ವ ಬಲಿಷ್ಠವಾಗಿಲ್ಲ ಅನ್ನೋದು ತಪ್ಪಾಗುತ್ತದೆ ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.

 

Comments

Leave a Reply

Your email address will not be published. Required fields are marked *