ಇಸ್ರೇಲಿನ ಜೆರುಸಲೇಂನಲ್ಲಿ ಉಗ್ರರ ದಾಳಿ – ಕನಿಷ್ಠ 5 ಬಲಿ, ಹಲವು ಮಂದಿಗೆ ಗಾಯ

ಟೆಲ್‌ ಅವಿವ್‌: ಇಸ್ರೇಲಿನ (Israel) ಪೂರ್ವ ಜೆರುಸಲೇಂನಲ್ಲಿ (Jerusalem) ಭಯೋತ್ಪಾದನ ದಾಳಿ ನಡೆದಿದ್ದು ಕನಿಷ್ಠ 5 ಮಂದಿ ಮೃತಪಟ್ಟಿದ್ದು, ಹಲವು ಮಂದಿ ಗಾಯಗೊಂಡಿದ್ದಾರೆ.

ಜೆರುಸಲೆಮ್‌ನ ಯಿಗಲ್ ಯಾಡಿನ್ ಸ್ಟ್ರೀಟ್‌ನಲ್ಲಿರುವ ರಾಮೋಟ್ ಜಂಕ್ಷನ್‌ ಈ ದಾಳಿ ನಡೆದಿದೆ. ಉಗ್ರರು ಬಸ್ಸನ್ನು ಹತ್ತಿ ಮನಬಂದಂತೆ ಗುಂಡಿನ ದಾಳಿ ನಡೆಸಿದ್ದರಿಂದ ಸಾವು ನೋವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆಯಿದೆ.

ಉಗ್ರರ ದಾಳಿ ವಿಚಾರ ತಿಳಿದು ಇಸ್ರೇಲ್‌ ಭದ್ರತಾ ಪಡೆ ಸ್ಥಳಕ್ಕೆ ಆಗಮಿಸಿ ಇಬ್ಬರನ್ನು ಹತ್ಯೆಗೈದಿದೆ. ಇಸ್ರೇಲ್‌ ಕಾಲಮಾನ ಬೆಳಗ್ಗೆ 10:13ಕ್ಕೆ ದಾಳಿ ನಡೆದಿದೆ. ಇದನ್ನೂ ಓದಿ: ಕೆಂಪು ಸಮುದ್ರದಲ್ಲಿ ಟಾಟಾ ಫೈಬರ್‌ ಕೇಬಲ್‌ ತುಂಡು ಭಾರತ ಸೇರಿ ಹಲವು ದೇಶಗಳಲ್ಲಿ ಇಂಟರ್‌ನೆಟ್‌ ವ್ಯತ್ಯಯ

ಗುಂಡಿನ ದಾಳಿ ನಡೆದ ಜಾಗ ಜನನಿಬಿಡ ಪ್ರದೇಶವಾಗಿತ್ತು. ಗುಂಡಿನ ಶಬ್ಧ ಕೇಳುತ್ತಿದ್ದಂತೆ ಜನರು ದಿಕ್ಕಾಪಾಲಾಗಿ ಓಡಿದ್ದಾರೆ.

ಉಗ್ರಗಾಮಿ ಸಂಘಟನೆ ಹಮಾಸ್‌ಗೆ ಶಸ್ತ್ರಾಸ್ತ್ರಗಳನ್ನು ಕೈಬಿಟ್ಟು ಶರಣಾಗಬೇಕು ಇಲ್ಲದೇ ಇದ್ದರೆ ಸಂಪೂರ್ಣ ನಾಶಪಡಿಸಲಾಗುವುದು ಎಂದು ಇಸ್ರೇಲ್ ರಕ್ಷಣಾ ಸಚಿವ ಇಸ್ರೇಲ್ ಕಾಟ್ಜ್ ಪ್ಯಾಲೆಸ್ಟೀನಿಯನ್ ಎಚ್ಚರಿಕೆ ನೀಡಿದ ಕೆಲವೇ ಗಂಟೆಗಳಲ್ಲಿ ಈ ಗುಂಡಿನ ದಾಳಿ ನಡೆದಿದೆ.