ನವದೆಹಲಿ: ಇಲ್ಲಿನ ಓಕ್ಲಾ ಫೇಸ್ 1ರ ಸಮೀಪದಲ್ಲಿರೋ ಟೀ ಸ್ಟಾಲ್ ನಲ್ಲಿ ಸಿಲಿಂಡರ್ ಸ್ಫೋಟಗೊಂಡು ಐವರು ಮೃತಪಟ್ಟು, ಹಲವು ಮಂದಿ ಗಾಯಗೊಂಡ ಘಟನೆ ನಡೆದಿದೆ.
ಈ ಘಟನೆ ಸೋಮವಾರ ರಾತ್ರಿ ನಡೆದಿದ್ದು, ರಾತ್ರಿ 10 ಗಂಟೆಗೆ ಮಾಲೀಕ ಸ್ಟಾಲ್ ಗೆ ಬೀಗ ಹಾಕಿ ಹೋದ ಬಳಿಕ ಸಿಲಿಂಡರ್ ರೆಗ್ಯುಲೇಟರ್ ನಿಂದ ಗ್ಯಾಸ್ ಲೀಕ್ ಆಗಿ ಸ್ಫೋಟವಾಗಿದೆ ಅಂತಾ ಪೊಲೀಸರು ತಿಳಿಸಿದ್ದಾರೆ.
ಘಟನೆ ನಡೆದ ಮಾಹಿತಿ ತಿಳಿದ ತಕ್ಷಣವೇ 4 ಅಗ್ನಿಶಾಮಕ ದಳದ ವಾಹನಗಳು ಸ್ಥಳಕ್ಕೆ ದೌಡಾಯಿಸಿ ಬೆಂಕಿ ನಂದಿಸಲು ಹರಸಾಹಸಪಟ್ಟರು. ಸ್ಟಾಲ್ ಹಿಂಬದಿಯೇ ಮಾಲೀಕ ತನ್ನ ಕುಟುಂಬದೊಂದಿಗೆ ವಾಸಿಸುತ್ತಿದ್ದರು. ಇನ್ನು ಸ್ಫೋಟದ ಪರಿಣಾಮ ಇತರ ಕಟ್ಟಡಗಳಿಗೂ ಹಾನಿಯಾಗಿದೆ ಎಂಬುವುದಾಗಿ ವರದಿಯಾಗಿದೆ.
ಘಟನೆ ಬಗ್ಗೆ ಡಿಸಿಪಿ ರೋಮಿಲ್ ಬಾನಿಯಾ ಪತ್ರಿಕೆಯೊಂದಕ್ಕೆ ಪ್ರತಿಕ್ರಿಯಿಸಿದ್ದು, ಘಟನೆಯಲ್ಲಿ ಗಾಯಗೊಂಡಿದ್ದ 8 ಮಂದಿಯನ್ನು ಆಸ್ಪತ್ರೆಗೆ ಕೊಂಡೊಯ್ಯಲಾಗಿತ್ತು. ಆದ್ರೆ ನಾಲ್ವರು ಅದಾಗಲೇ ಸಾವನ್ನಪ್ಪಿರುವುದಾಗಿ ವೈದ್ಯರು ಹೇಳಿದ್ರು ಎಂದು ತಿಳಿಸಿದ್ದಾರೆ
ನಿರ್ಲಕ್ಷ್ಯ ಆರೋಪದ ಮೇಲೆ ಟೀ ಸ್ಟಾಲ್ ಮಾಲೀಕನ ವಿರುದ್ಧ ಪೊಲೀಸರು ದೂರು ದಾಖಲಿಸಿಕೊಂಡಿದ್ದಾರೆ. ಘಟನೆಯಲ್ಲಿ ಟೀ ಸ್ಟಾಲ್ ಮಾಲೀಕ ಕೂಡ ಗಾಯಗೊಂಡಿದ್ದು ಜೀವನ್ಮರಣ ಹೋರಾಟ ನಡೆಸುತ್ತಿದ್ದಾರೆ ಎಂದು ವರದಿಯಾಗಿದೆ.

Leave a Reply