ನವದೆಹಲಿ: ಹಾವು ಮೀನನ್ನು ನುಂಗಲು ಯತ್ನಿಸಿದ್ದು, ಆ ಮೀನು ಭೂಪ್ರದೇಶದ ಮೇಲೂ ಹಾವಿನಿಂದ ಬಚಾವಾಗಲು ಹೋರಾಡುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡ್ತಿದೆ.
ಮೀನು ತನ್ನ ಬಾಯಲ್ಲಿ ಹಾವಿನ ತಲೆಯನ್ನ ಗಟ್ಟಿಯಾಗಿ ಹಿಡಿದುಕೊಂಡಿದ್ದು, ಅದರಿಂದ ಬಿಡಿಸಿಕೊಳ್ಳಲು ಹಾವು ಪ್ರಯತ್ನಿಸುತ್ತಿರುವುದನ್ನು ವಿಡಿಯೋದಲ್ಲಿ ನೋಡಬಹುದು. ವಿಡಿಯೋ ಜೊತೆಗೆ ನೀಡಿರುವ ವಿವರಣೆಯ ಪ್ರಕಾರ ಈಶಾನ್ಯ ಭಾರತದ ಗ್ರಾಮವೊಂದರಲ್ಲಿ ಈ ಘಟನೆ ನಡೆದಿದ್ದು, ಸ್ಥಳೀಯರು ಈ ದೃಶ್ಯವನ್ನ ಸೆರೆಹಿಡಿದಿದ್ದಿದ್ದಾರೆ. ಕೆಲವರು ಮೀನು ಜೀವಂತವಾಗಿರಲಿ ಎಂದು ಅದರ ಮೇಲೆ ನೀರು ಸುರಿಯೋದನ್ನ ನೋಡಬಹುದು.
ಆದ್ರೆ ಈ ಕಾದಾಟದಲ್ಲಿ ಹಾವು ಮೀನು ಎರಡೂ ಸೋತಿವೆ. ಕೊನೆಯಲ್ಲಿ ಎರಡೂ ಸಾವನ್ನಪ್ಪಿವೆ ಎಂದು ವರದಿಯಾಗಿದೆ. ಹಾವು ಮತ್ತು ಮೀನು ಕೊಳವೊಂದರ ನೀರಿನಲ್ಲಿ ಕಾದಾಟ ಶುರು ಮಾಡಿದ್ದು ನಂತರ ಭೂಮಿ ಮೇಲೆ ಬಂದಿವೆ ಎಂದು ಸ್ಥಳೀಯರು ತಿಳಿಸಿರುವುದಾಗಿ ವಿಡಿಯೋದ ವಿವರಣೆಯಲ್ಲಿ ಹೇಳಲಾಗಿದೆ.
4 ದಿನಗಳ ಹಿಂದೆ ಈ ವಿಡಿಯೋ ಯೂಟ್ಯೂಬ್‍ನಲ್ಲಿ ಅಪ್‍ಲೋಡ್ ಆಗಿದ್ದು, ಈವರೆಗೆ 37 ಸಾವಿರಕ್ಕೂ ಹೆಚ್ಚು ಬಾರಿ ವೀಕ್ಷಣೆಯಾಗಿದೆ.
https://www.youtube.com/watch?v=TjYQy0Ph3Zk

Leave a Reply