ನಾಳೆ ಸೂರ್ಯೋದಯದೊಂದಿಗೆ ಬರಲಿದ್ದಾಳೆ ಪದ್ಮಾವತಿ!

ಮುಂಬೈ: ಬಾಲಿವುಡ್‍ನ ಬಹುನಿರೀಕ್ಷಿತ ಪದ್ಮಾವತಿ ಚಿತ್ರದ ಫಸ್ಟ್ ಲುಕ್ ಗುರುವಾರ ಬಿಡುಗಡೆಯಾಗಲಿದೆ ಎಂದು ಚಿತ್ರತಂಡ ಅಧಿಕೃತವಾಗಿ ಘೋಷಿಸಿದೆ.

ಕೊನೆಗೂ ಚಿತ್ರದ ಮೊದಲ ಲುಕ್ ನ್ನು ನೋಡಲು ಅಭಿಮಾನಿಗಳು ತುಂಬಾ ಕುತೂಹಲದಿಂದ ಕಾಯುತ್ತಿದ್ದಾರೆ. ದೀಪಿಕಾ ಪಡುಕೋಣೆ ಕೂಡ ತಮ್ಮ ಸಂತೋಷವನ್ನು ಟ್ವಿಟ್ಟರ್ ಮೂಲಕ ಹಂಚಿಕೊಂಡಿದ್ದಾರೆ. ಪದ್ಮಾವತಿ ಚಿತ್ರದ ಲೋಗೋವನ್ನು ಹಾಕಿ, ನಾಳೆ ಸೂರ್ಯೋದಯದ ಜೊತೆ ಪದ್ಮಾವತಿ ಬರುತ್ತಿದ್ದಾಳೆ ಎಂದು ಬರೆದು ಪೋಸ್ಟ್ ಮಾಡಿದ್ದಾರೆ.

ಪೋಸ್ಟ್ ಮಾಡಿ ಒಂದು ಗಂಟೆಯೊಳಗೆ 159 ರಿಪ್ಲೈ, 338 ರೀ-ಟ್ವೀಟ್ ಮತ್ತು 1,500 ಲೈಕ್‍ಗಳು ಬಂದಿವೆ. ಪದ್ಮಾವತಿ ಚಿತ್ರದಲ್ಲಿ ದೀಪಿಕಾ ಪಡುಕೋಣೆ ರಾಣಿ ಪದ್ಮಾವತಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಶಾಹಿದ್ ಕಪೂರ್ ರಾಣಿ ಪದ್ಮಾವತಿಯ ಪತಿಯಾಗಿ ಕಾಣಿಸಿಕೊಳ್ಳಲಿದ್ದು, ಅಲ್ಲಾವುದ್ದಿನ್ ಖಿಲ್ಜಿಯಾಗಿ ರಣ್‍ವೀರ್ ಸಿಂಗ್ ಕಾಣಿಸಿಕೊಳ್ಳಲಿದ್ದಾರೆ. ಈ ಚಿತ್ರವು ಇದೇ ನವೆಂಬರ್ ತಿಂಗಳಲ್ಲಿ ಬಿಡುಗಡೆಯಾಗಲಿದೆ.

https://twitter.com/deepikapadukone/status/910436613272072192

https://twitter.com/deepikapadukone/status/910427579575758848

Comments

Leave a Reply

Your email address will not be published. Required fields are marked *