ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಸಾಮಾನ್ಯವಾಗಿ ಜನರ ಓಡಾಟಕ್ಕೆ ಓಲಾ, ಉಬರ್, ಕ್ಯಾಬ್ ನೋಡಿರಬಹುದು. ಆದರೆ ಬೆಂಗಳೂರಿನಲ್ಲಿ ನಾಯಿಗಳಿಗೆ ಕ್ಯಾಬ್ ಓಪನ್ ಆಗತ್ತಿದೆ.
ಹೌದು ಶ್ವಾನಗಳಿಗೂ ಕ್ಯಾಬ್ ಸೌಲಭ್ಯ ಸಿಕ್ಕಿದೆ. ಡೊಗ್ಗೂರು ಅಮೃತ್ ಸಂಸ್ಥೆ ಅವರು ಶ್ವಾನ ಮತ್ತು ಇತರೆ ಸಾಕು ಪ್ರಾಣಿಗಳಿಗಾಗಿ ಈ ವ್ಯವಸ್ಥೆಯನ್ನು ಮಾಡಿದೆ. ಓಡಾಡುವುದಕ್ಕೆ ಮಾತ್ರವಲ್ಲದೇ ಶ್ವಾನಗಳಲ್ಲಿ ಆರೋಗ್ಯ ಸಮಸ್ಯೆಯಾದಾಗ ಹತ್ತಿರದ ಆಸ್ಪತ್ರೆಗೆ ಸಾಗಿಸಲು ಈ ವ್ಯವಸ್ಥೆ ಮಾಡಲಾಗಿದೆ.

ದೇಶದಲ್ಲೇ ಮೊದಲ ಬಾರಿಗೆ ಆಪ್ ಆಧಾರಿತ ಶ್ವಾನಗಳ ಕ್ಯಾಬ್ ಬೆಂಗಳೂರಿನಲ್ಲಿ ಶುರುವಾಗಿದೆ. Pawcab ಹೆಸರಿನಲ್ಲಿ ಶ್ವಾನ ಕ್ಯಾಬ್ ಆರಂಭವಾಗಿದ್ದು, ನೀವು ಇದನ್ನ ಡೌನ್ಲೋಡ್ ಮಾಡಿಕೊಂಡರೆ ಸಾಕು. ನಿಮ್ಮ ಶ್ವಾನಕ್ಕೆ ಆರೋಗ್ಯ ಸಮಸ್ಯೆ ಕಂಡು ಬಂದಾಗ ನಿಮಗೆ ಹತ್ತಿರದಲ್ಲಿರೋ ಡಾಗ್ ಕೇರ್ ಸೆಂಟರ್ ಯಾವುದು ಎಂಬ ಮಾಹಿತಿ ನೀಡುವುದರ ಜೊತೆಗೆ ಹತ್ತಿರದ ಆಸ್ಪತ್ರೆಗೆ ತಲುಪಿಸಲು ಸಹಾಯ ಮಾಡುತ್ತದೆ. ಜೊತೆಗೆ ಬೀದಿ ನಾಯಿಗಳಿಗೆ ಅಪಾಯವಾದ ಸಂದರ್ಭ ಉಚಿತ ಚಿಕಿತ್ಸೆ ಮಾಡುವುದರ ಜೊತೆಗೆ ಅವುಗಳು ಮರಣ ಹೊಂದಿದ ಸಂದರ್ಭದಲ್ಲಿ ಸಿಬ್ಬಂದಿಯೇ ಸಂಸ್ಕಾರ ಸ್ಥಳಕ್ಕೆ ಸಾಗಿಸಲು ಸಹಾಯ ಮಾಡುತ್ತಾರೆ ಎಂದು ಸಂಸ್ಥೆಯ ಮುಖ್ಯಸ್ಥ ಅಮೃತ್ ಅವರು ಹೇಳಿದರು.

ಬೀದಿ ನಾಯಿಗಳು ಎಲ್ಲೆಂದರಲ್ಲಿ ಸಾವನ್ನಪ್ಪಿ ಕೊಳೆಯುತ್ತಾ ಇರುವುದನ್ನು ನೋಡಿದಾಗ ಇದು ಒಂದೊಳ್ಳೆ ಯೋಜನೆ ಎನ್ನುವ ಅಭಿಪ್ರಾಯ ಈಗ ವ್ಯಕ್ತವಾಗಿದೆ.
ಆಂಡ್ರಯ್ಡ್ ಆಪ್ ಡೌನ್ಲೋಡ್ ಮಾಡಲು ಕ್ಲಿಕ್ ಮಾಡಿ: Pawcab
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Leave a Reply