ಗುಜರಾತ್-ಮುಂಬೈ ನಡುವೆ ವಿಮಾನಯಾನ ಸೇವೆ ಆರಂಭ

FLIGHT

ಗಾಂಧಿನಗರ: ಕೇಂದ್ರದ `ಉದೇ ದೇಶ್ ಕಾ ಅಮ್ ನಾಗರಿಕ್ (ಉಡಾನ್)’ ಕಾರ್ಯಕ್ರಮದ ಅಡಿಯಲ್ಲಿ ಇದೇ ಮೊದಲ ಬಾರಿಗೆ ಗುಜರಾತ್‌ನ ಜುನಾಗಡ ಜಿಲ್ಲೆಯ ಕೇಶೋಡ್ ಮತ್ತು ಮುಂಬೈ ನಡುವೆ ನಾಗರಿಕ ವಿಮಾನಯಾನಕ್ಕೆ ಚಾಲನೆ ನೀಡಲಾಗಿದೆ. ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ವಿಮಾನ ಯಾನಕ್ಕೆ ಚಾಲನೆ ನೀಡಿದ್ದಾರೆ.

Capture

ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಪ್ರವಾಸೋದ್ಯಮದೊಂದಿಗೆ ರಾಜ್ಯದ ಅಭಿವೃದ್ಧಿಯನ್ನು ತ್ವರಿತಗೊಳಿಸಲು ಉದ್ದೇಶಿಸಿ ವಿಮಾನ ಸೇವೆ ಪ್ರಾರಂಭಿಸಲಾಗಿದೆ. ಈ ಸೌಲಭ್ಯವು ಹೆಚ್ಚು ಪ್ರಯಾಣಿಕರನ್ನು ಆಕರ್ಷಿಸಲು ಸಹಕರಿಸುತ್ತದೆ. ಪ್ರವಾಸೋದ್ಯಮವನ್ನು ಉತ್ತೇಜಿಸುವ ಜೊತೆಗೆ ವ್ಯಾಪಾರ ಸಮೃದ್ಧಿಯ ಹೊಸ ಆಯಾಮವನ್ನೂ ನೋಡಬಹುದಾಗಿದೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಕೋವಿಡ್ ಉಲ್ಬಣ – ಉತ್ತರ ಪ್ರದೇಶದಲ್ಲಿ ಹೈ ಅಲರ್ಟ್

FLIGHT

ಇದೇ ವೇಳೆ ಕೇಂದ್ರ ಸಚಿವರು ಹಿರಾಸರ್ ಮತ್ತು ಧೋಲೆರಾದಲ್ಲಿ ಎರಡು ಹೊಸ ಗ್ರೀನ್‌ಫೀಲ್ಡ್ ವಿಮಾನ ನಿಲ್ದಾಣಗಳನ್ನು ಸ್ಥಾಪಿಸುವುದಾಗಿ ಘೋಷಿಸಿದರು. ನಾವು ಗುಜರಾತ್‌ಗೆ 5 ಹೊಸ ವಿಮಾನಗಳನ್ನು ನೀಡಿದ್ದು, ಅಹಮದಾಬಾದ್‌ನಿಂದ ಅಮೃತಸರ, ರಾಂಚಿ, ಆಗ್ರಾ, ಪೋರಬಂದರ್‌ನಿಂದ ಮುಂಬೈ, ರಾಜ್‌ಕೋಟ್‌ನಿಂದ ಮುಂಬೈಗೆ ಅವು ಪ್ರಯಾಣಿಸಲಿವೆ. ಇದರೊಂದಿಗೆ 1,405 ಕೋಟಿ ರೂ. ವೆಚ್ಚದಲ್ಲಿ ಹಿರಾಸರ್‌ನಲ್ಲಿ ಮತ್ತು 1305 ಕೋಟಿ ವೆಚ್ಚದಲ್ಲಿ ಧೋಲೇರಾದಲ್ಲಿ ಎರಡು ಹೊಸ ಗ್ರೀನ್‌ಫೀಲ್ಡ್ ವಿಮಾನ ನಿಲ್ದಾಣಗಳನ್ನು ಸ್ಥಾಪಿಸಲಾಗುವುದು ಎಂದು ಭರವಸೆ ನೀಡಿದರು. ಇದನ್ನೂ ಓದಿ: ಸ್ಥಳೀಯ ಉತ್ಪನ್ನ ಮಾತ್ರ ಖರೀದಿಸಲು ಜನರನ್ನು ಪ್ರೇರೇಪಿಸಿ: ಸ್ವಾಮೀಜಿಗಳಿಗೆ ಮೋದಿ ಮನವಿ

ಗುಜರಾತ್ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ಉಪಸ್ಥಿತರಿದ್ದರು.

Comments

Leave a Reply

Your email address will not be published. Required fields are marked *