ಡ್ರೈವಿಂಗ್ ಲೈಸನ್ಸ್ ಪಡೆದ ದೇಶದ ಮೊದಲ ಕುಬ್ಜ ವ್ಯಕ್ತಿ

ಹೈದರಾಬಾದ್: 3 ಅಡಿ ಎತ್ತರದ ವ್ಯಕ್ತಿ ಡ್ರೈವಿಂಗ್ ಲೈಸನ್ಸ್ ಪಡೆದಿದ್ದು, ಈ ಮೂಲಕ ದೇಶದ ಮೊದಲ ಕುಬ್ಜವ್ಯಕ್ತಿ ಎನ್ನುವ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಹೈದರಾಬಾದ್ ಮೂಲದ 42 ವರ್ಷದ ಗಟ್ಟಿಪಲ್ಲಿ ಶಿವಪಾಲ್ ಎಂಬಾತ ಕೇವಲ 3 ಅಡಿ ಎತ್ತರವಿದ್ದರೂ ಚಾಲನಾ ಪರವಾನಿಗೆ ಪಡೆದಿದ್ದಾರೆ. ಚಾಲನಾ ಪರವಾನಿಗೆ ಪಡೆಯಲು ಎಷ್ಟೆಲ್ಲಾ ನಿಮಯಗಳಿವೆ. ಇಷ್ಟು ಎತ್ತರ, ಇಷ್ಟು ವಯಸ್ಸು ಈ ಎಲ್ಲಾ ನಿಯಮಗಳನ್ನು ಪಾಲಿಸಿದರೂ ಪರವಾನಿಗೆ ಸಿಗುವುದು ಕಷ್ಟವಿರುವಾಗ ಇವರು ಪಡೆದುಕೊಳ್ಳುವ ಮೂಲಕವಾಗಿ ಲೈಸನ್ಸ್ ಪಡೆದ ದೇಶದ ಮೊದಲ ಕುಬ್ಜ ಎನ್ನುವ ಹೆಗ್ಗಳಿಕೆ ಮತ್ತು ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

ಈ ವಿಚಾರವಾಗಿ ಮಾತನಾಡಿದ ಶಿವಪಾಲ್, 2004ರಲ್ಲಿ ಪದವಿ ಶಿಕ್ಷಣವನ್ನು ಮುಗಿಸಿದೆ. ಜನರು ನನ್ನ ಎತ್ತರದ ಬಗ್ಗೆ ವ್ಯಂಗ್ಯವಾಡುತ್ತಿದ್ದರು. ನನ್ನ ಹೆಂಡತಿ ಜೊತೆ ಹೊರಗೆ ಹೋದಾಗ ಕೆಟ್ಟದಾಗಿ ಮಾತನಾಡುತ್ತಿದ್ದರು. ಇದರಿಂದ ನೋವಾಗಿ ಸ್ವತಃ ಕಾರು ತೆಗೆದುಕೊಳ್ಳಲು ನಿರ್ಧರಿಸಿದೆ. ಕುಬ್ಜರು ಕಾರು ಚಲಾಯಿಸುವುದು ಹೇಗೆಂದು ಸೋಶಿಯಲ್ ಮೀಯಾದಲ್ಲಿ ಕೆಲವು ವೀಡಿಯೋಗಳನ್ನು ನೋಡಿದೆ. ನನ್ನ ಎತ್ತರಕ್ಕೆ ತಕ್ಕಂತೆ ಕಾರಿನ ಭಾಗಗಳನ್ನು ಮಾರ್ಪಡಿಸಿಕೊಂಡೆ. ಬಳಿಕ ಸ್ನೇಹಿತನ ಸಹಾಯದಿಂದ ಕಾರು ಚಲಾಯಿಸಲು ಕಲಿತುಕೊಂಡೆ ಎಂದು ಹೇಳಿದ್ದಾರೆ.  ಇದನ್ನೂ ಓದಿ:  ರಾಜ್‌ ಕುಟುಂಬದಿಂದ ಗಂಧದಗುಡಿ‌ಯ 3ನೇ ಪ್ರಯೋಗ

ಚಾಲನಾ ಪರವಾನಿಗೆಗಾಗಿ ಸಾರಿಗೆ ಇಲಾಖೆಗೆ ಅರ್ಜಿ ಹಾಕಿ, ಅಧಿಕಾರಿಗಳ ಸಮ್ಮುಖದಲ್ಲೇ ಕಾರು ಚಲಾಯಿಸಿದೆ. ಬಳಿಕ 3 ತಿಂಗಳ ಕಲಿಕಾ ಪರವಾನಿಗೆ ಪಡೆದುಕೊಂಡೆ. ಈಗ ಚಾಲನಾ ಪರವಾನಿಗೆ ಗಿಟ್ಟಿಸಿಕೊಂಡಿದ್ದೇನೆ. ಹೈದರಾಬಾದ್‍ನ ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದೇನೆ. ಕಾರನ್ನು ನಾನೇ ಚಲಾಯಿಸಿಕೊಂಡು ಹೋಗುತ್ತೇನೆ. ಲಿಮ್ಕಾ ಬುಕ್ ಆಫ್ ರೆಕಾರ್ಡ್‍ಗೆ ನಾಮಿ ನಿರ್ದೇಶನಗೊಂಡಿದ್ದೇನೆ. ಮುಂದಿನ ದಿನಗಳಲ್ಲಿ ಕುಬ್ಜರಿಗಾಗಿ ಡ್ರೈವಿಂಗ್ ಶಾಲೆಯನ್ನು ತೆರೆಯುವ ಯೋಚನೆ ಇದೆ ಎಂದು ಹೇಳಿದ್ದಾರೆ. ಇದನ್ನೂ ಓದಿ:  ಅಪ್ಪು ಕನಸು ನನಸು- ಗಂಧದ ಗುಡಿ ಸಾಕ್ಷ್ಯಚಿತ್ರದ ಟೈಟಲ್ ಟೀಸರ್ ಔಟ್

ನಮ್ಮ ಕುಟುಂಬದಲ್ಲಿ ನಾನು ಹಿರಿಯ ಮಗಬಾಗಿದ್ದು, ನಾನು ಮಾತ್ರ ಕುಬ್ಜನಾಗಿದ್ದೇನೆ. ನಾನು ಅಂಗವಿಕಲನಾಗಿದ್ದರಿಂದ ನನಗೆ ಯಾರೂ ಕೆಲಸ ನೀಡಲು ಜನರು ಸಿದ್ಧರಿರಲಿಲ್ಲ. ಸ್ನೇಹಿತರೊಬ್ಬರ ಮೂಲಕ ಖಾಸಗಿ ಕಂಪನಿಯಲ್ಲಿ ಕೆಲಸ ಗಿಟ್ಟಿಸಿಕೊಂಡು ಈಗ ಕಳೆದ 20 ವರ್ಷಗಳಿಂದ ಇಲ್ಲಿ ಕೆಲಸ ಮಾಡುತ್ತಿದ್ದೇನೆ ಎಂದಿದ್ದಾರೆ.

Comments

Leave a Reply

Your email address will not be published. Required fields are marked *