ಶಾರ್ಟ್ ಸರ್ಕ್ಯೂಟ್‌ನಿಂದ ಮನೆಗೆ ಬೆಂಕಿ – ದಂಪತಿ ಸಜೀವದಹನ

– ಅಜ್ಜ, ಅಜ್ಜಿಯೊಂದಿಗೆ ಮಲಗಿದ್ದ ಮಕ್ಕಳು ಪ್ರಾಣಾಪಾಯದಿಂದ ಪಾರು

ಯಾದಗಿರಿ: ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದಾಗಿ (Short Circuit) ಮನೆಗೆ ಬೆಂಕಿ (Fire) ಹೊತ್ತಿಕೊಂಡು ದಂಪತಿ (Couple) ಸಜೀವದಹನವಾಗಿರುವ ದಾರುಣ ಘಟನೆ ಯಾದಗಿರಿ (Yadgiri) ಜಿಲ್ಲೆಯ ಸೈದಾಪುರ ಪಟ್ಟಣದಲ್ಲಿ ನಡೆದಿದೆ.

ರಾಗಯ್ಯ ಹಾಗೂ ಶಿಲ್ಪಾ ಬೆಂಕಿಯ ಕೆನ್ನಾಲಿಗೆಗೆ ಸಿಕ್ಕು ಮೃತಪಟ್ಟ ದುರ್ದೈವಿ. ದಂಪತಿ ಮನೆಯಲ್ಲಿಯೇ ಬಟ್ಟೆ ಅಂಗಡಿಯನ್ನೂ ಇಟ್ಟುಕೊಂಡಿದ್ದರು. ಸೋಮವಾರ ನಸುಕಿನ ಜಾವ ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದಾಗಿ ಮನೆಗೆ ಬೆಂಕಿ ತಗುಲಿತ್ತು. ಮನೆಯೊಳಗೆ ದಟ್ಟ ಹೊಗೆ ಅವರಿಸಿಕೊಂಡಿದ್ದರಿಂದ ದಂಪತಿ ಮನೆಯಿಂದ ಹೊರಬರಲಾರದೇ ಪರದಾಡಿ ಕೊನೆಗೆ ಬೆಂಕಿಗಾಹುತಿಯಾಗಿದ್ದಾರೆ. ಇದನ್ನೂ ಓದಿ: 10ರ ಬಾಲಕನ ನರಬಲಿ – ಕುಟುಂಬದವರೇ ಕತ್ತು ಸೀಳಿ ಕೊಂದ್ರು

ದಂಪತಿಗೆ ಇಬ್ಬರು ಮಕ್ಕಳಿದ್ದು, ಅವರು ಅಜ್ಜ ಹಾಗೂ ಅಜ್ಜಿಯೊಂದಿಗೆ ಮನೆಯ ಕೆಳಮಹಡಿಯಲ್ಲಿ ಮಲಗಿದ್ದರು. ಇದರಿಂದಾಗಿ ಸದ್ಯ ಅವರೆಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಘಟನಾ ಸ್ಥಳಕ್ಕೆ ಅಗ್ನಿಶಾಮಕ ದಳ ಸಿಬ್ಬಂದಿ ಆಗಮಿಸಿ ಬೆಂಕಿ ನಂದಿಸಲು ಹರಸಾಹಸ ಪಟ್ಟಿದ್ದಾರೆ. ಕೊನೆಗೆ ಮೃತದೇಹಗಳನ್ನು ಹೊರತೆಗೆದಿದ್ದಾರೆ. ಸೈದಾಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಇದನ್ನೂ ಓದಿ: ಅಮಿತ್ ಶಾ ಸಂಚಾರದ ವೇಳೆ ಭದ್ರತಾ ವೈಫಲ್ಯ – ವಾಹನಗಳನ್ನು ಬೆನ್ನಟ್ಟಿದ ಬೈಕರ್ಸ್

Comments

Leave a Reply

Your email address will not be published. Required fields are marked *