ಅಬ್ಬಾಸ್ ಟವರ್ಸ್‌ನಲ್ಲಿ ಅಗ್ನಿ ಅವಘಡ – 40 ಮಳಿಗೆಗಳಿಗೆ ಹಾನಿ

ಅಮರಾವತಿ: ಹೈದರಾಬಾದ್‌ನ (Hyderbad) ಮದೀನಾ ವೃತ್ತದಲ್ಲಿರುವ ಅಬ್ಬಾಸ್ ಟವರ್ಸ್‌ನಲ್ಲಿ ಅಗ್ನಿ ಅವಘಡ ಸಂಭವಿಸಿದ್ದು, 40 ಮಳಿಗೆಗಳು ಹಾನಿಗೊಳಗಾಗಿವೆ.

ಸೋಮವಾರ ಬೆಳಗಿನ ಜಾವ ಬೆಂಕಿ ಕಾಣಿಸಿಕೊಂಡಿದ್ದು, ಯಾವುದೇ ರೀತಿಯ ಪ್ರಾಣಾಪಾಯ ಸಂಭವಿಸಿಲ್ಲ.ಇದನ್ನೂ ಓದಿ: ಮಹಾ ಕುಂಭಮೇಳ | 300 ಕಿ.ಮೀ ಟ್ರಾಫಿಕ್ ಜಾಮ್ – 48 ಗಂಟೆಗಳ ಕಾಲ ಹೆದ್ದಾರಿಯಲ್ಲಿ ಸಿಲುಕಿದ ಯಾತ್ರಿಕರು!

ಅವಘಡ ಕುರಿತು ತೆಲಂಗಾಣ ಅಗ್ನಿಶಾಮಕ, ವಿಪತ್ತು ಪ್ರತಿಕ್ರಿಯೆ, ತುರ್ತು ಮತ್ತು ನಾಗರಿಕ ರಕ್ಷಣಾ ಇಲಾಖೆಯ ಹೆಚ್ಚುವರಿ ನಿರ್ದೇಶಕ ಜಿ.ವಿ. ನಾರಾಯಣ ರಾವ್ ಮಾತನಾಡಿ, ನಸುವಿನ ಜಾವ 2:15ರ ಸುಮಾರಿಗೆ ಈ ಕುರಿತು ಮಾಹಿತಿ ತಿಳಿದು ಬಂದಿದ್ದು, ಕೂಡಲೇ ಸ್ಥಳಕ್ಕೆ ಅಗ್ನಿಶಾಮಕ ವಾಹನಗಳನ್ನು ಕಳುಹಿಸಲಾಗಿದೆ ಎಂದರು.

ಟವರ್ಸ್ನಲ್ಲಿ ಒಟ್ಟು 300 ಜವಳಿ ಉದ್ಯಮ ಹಾಗೂ ಬಟ್ಟೆ ಅಂಗಡಿಗಳಿದ್ದು, ಅಗ್ನಿ ಅವಘಡದಿಂದಾಗಿ ಸುಮಾರು 40 ಅಂಗಡಿಗಳು ಹಾನಿಗೊಳಗಾಗಿವೆ. ಇನ್ನೂ ಕಟ್ಟಡದಲ್ಲಿ ವಾಸಿಸುತ್ತಿದ್ದ ಭದ್ರತಾ ಸಿಬ್ಬಂದಿಯ ಕುಟುಂಬಸ್ಥರು ಹಾಗೂ ಟವರ್ಸ್ ಸಮೀಪದಲ್ಲಿ ವಾಸಿಸುತ್ತಿದ್ದವ ಪೈಕಿ ಒಟ್ಟು 12 ಜನರನ್ನು ರಕ್ಷಿಸಲಾಗಿದೆ ಎಂದು ಮಾಹಿತಿ ನೀಡಿದರು.ಇದನ್ನೂ ಓದಿ: ಪೋಷಕರ ಲೈಂಗಿಕ ಕ್ರಿಯೆ ವೀಕ್ಷಿಸುತ್ತೀರಾ? – ಯೂಟ್ಯೂಬರ್‌ ರಣವೀರ್ ಅಲ್ಲಾಬಾದಿಯಾ ಕೀಳು ಹೇಳಿಕೆ, ನೆಟ್ಟಿಗರಿಂದ ಭಾರೀ ಆಕ್ರೋಶ