ಬೆಂಗಳೂರಿನಲ್ಲಿ ಬೆಂಕಿಗಾಹುತಿಯಾದ ಕುರ್ಚಿ ಫ್ಯಾಕ್ಟರಿ: ಇಬ್ಬರು ಕಾರ್ಮಿಕರು ಸಜೀವ ದಹನ

ಬೆಂಗಳೂರು: ಗ್ಯಾಸ್ ಸಿಲಿಂಡರ್ ಸ್ಫೋಟಗೊಂಡು ಫ್ಯಾಕ್ಟರಿಯೊಂದು ಬೆಂಕಿಗಾಹುತಿಯಾಗಿದ್ದು ಇಬ್ಬರು ಕಾರ್ಮಿಕರು ಸಜೀವವಾಗಿ ದಹನಗೊಂಡಿದ್ದಾರೆ.

ಮೈಸೂರು ರಸ್ತೆಯ ವಿನಾಯಕ ನಗರದಲ್ಲಿರುವ 3 ಅಂತಸ್ತಿನ ಕುರ್ಚಿ ತಯಾರಿಕಾ ಫ್ಯಾಕ್ಟರಿಯಲ್ಲಿ ಮಧ್ಯಾಹ್ನ 3 ಗಂಟೆಯ ವೇಳೆಗೆ ಗ್ಯಾಸ್ ಸಿಲಿಂಡರ್ ಸ್ಫೋಟಗೊಂಡಿದೆ. ಸ್ಫೋಟಗೊಂಡ ಪರಿಣಾಮ ಬೆಂಕಿ ಹೊತ್ತಿಕೊಂಡಿದ್ದು ಅಲ್ಲಿ ಕೆಲಸ ಮಾಡುತ್ತಿದ್ದ ಇಬ್ಬರು ಕಾರ್ಮಿಕರು ಸಜೀವ ದಹನಗೊಂಡಿದ್ದಾರೆ.

ಘಟನೆಯಿಂದ ಲಕ್ಷಾಂತರ ರೂ. ಮೌಲ್ಯದ ವಸ್ತುಗಳು ಬೆಂಕಿಗಾಹುತಿಯಾಗಿದ್ದು, ಸ್ಥಳಕ್ಕೆ ಅಗ್ನಿಶಾಮಕ ದಳದ ವಾಹನಗಳು ಬಂದಿದ್ದು ಬೆಂಕಿ ನಂದಿಸುವ ಕಾರ್ಯ ನಡೆಯುತ್ತಿದೆ.

ಮಕ್ಕಳು ಪಾರು: ಈ ಕಟ್ಟಡದ  ಎರಡನೇ ಮಹಡಿಯಲ್ಲಿ  ಮದರಸಾಗಳನ್ನು ನಡೆಸಲಾಗುತ್ತಿದ್ದು, ಶುಕ್ರವಾರ ರಜೆ ಇದ್ದ ಕಾರಣ ವಿದ್ಯಾರ್ಥಿಗಳು ಇರಲಿಲ್ಲ. ಒಂದು ವೇಳೆ ರಜೆ ಇಲ್ಲದೇ ಇದ್ದರೆ ಭಾರೀ ದುರಂತ ಸಂಭವಿಸುವ ಸಾಧ್ಯತೆ ಇತ್ತು.

ಇದನ್ನೂ ಓದಿ:ನೀವೆಂದೂ ಕಂಡರಿಯದ ಲೈವ್ ಮರ್ಡರ್: ನೋಡ ನೋಡುತ್ತಲೇ ತಂದೆಯನ್ನ ಕೊಂದೇಬಿಟ್ರು

https://www.youtube.com/watch?v=Dh12Ua1kU1k

Comments

Leave a Reply

Your email address will not be published. Required fields are marked *