ಸರ್ಕಾರಿ ಶಾಲಾ ಶಿಕ್ಷಕನ ಕಾಮಚೇಷ್ಟೆ‌ ಪ್ರಕರಣ – ಕಾಮುಕನ ವಿರುದ್ಧ FIR ದಾಖಲು

ಕೊಪ್ಪಳ: ನೆರೆ ಮನೆಯ ಮಹಿಳೆಯರೊಂದಿಗೆ ಸರಸವಾಡಿ, ಕೊಲೆ ಬೆದರಿಕೆ ಹಾಕಿದ್ದ ಕಾಮುಕ ಶಿಕ್ಷಕನ ವಿರುದ್ಧ ಎಫ್‍ಐಆರ್ ದಾಖಲಾಗಿದೆ.

ಕೊಪ್ಪಳ ಜಿಲ್ಲೆಯ ಕಾರಟಗಿ ಪೊಲೀಸ್ ಠಾಣೆಯಲ್ಲಿ ಆರೋಪಿ ವಿರುದ್ಧ ಪ್ರಕರಣ ದಾಖಲಾಗಿದ್ದು, ಮಹಿಳೆಯರು ಮತ್ತು ಮಕ್ಕಳ ಜೊತೆಗೆ ಕಾಮದಾಟವಾಡಿದ್ದ ಶಿಕ್ಷಕ ಅಜರುದ್ದೀನ್ ತಲೆ ಮರೆಸಿಕೊಂಡಿದ್ದಾನೆ. ರಾಯಚೂರು ಜಿಲ್ಲೆಯ ಸಿಂಧನೂರು ತಾಲೂಕಿನ ಸಿಂಗಾಪೂರ ಗ್ರಾಮದ ಶಿಕ್ಷಕ ಅಜರುದ್ದೀನ್ ಮಹಿಳೆಯರು ಮತ್ತು ಮಕ್ಕಳನ್ನು ಕಾಮದಾಟಕ್ಕೆ ಬಳಸಿಕೊಂಡಿದ್ದ ವೀಡಿಯೋ ವೈರಲ್ ಆಗಿದ್ದವು. ಈ ವಿಡಿಯೋದಲ್ಲಿರುವ ಜಯಶ್ರೀ ಅವರು ಅಜರುದ್ದೀನ್ ವಿರುದ್ಧ ದೂರು ನೀಡಿದ್ದಾರೆ. ಇದನ್ನೂ ಓದಿ: ಸರ್ಕಾರಿ ದುಡ್ಡು, ಫ್ಯಾಮಿಲಿ ಟ್ರಿಪ್- ಅಧ್ಯಯನ ಹೆಸರಲ್ಲಿ ಶಾಸಕರ ಲಡಾಕ್ ಜಾಲಿ ರೈಡ್

ಮಕ್ಕಳಿಗೆ ವಿದ್ಯಾಭ್ಯಾಸ ಕೊಡಿಸುತ್ತೇನೆ ಎಂದು ಜಯಶ್ರೀಯನ್ನು ಪರಿಚಯ ಮಾಡಿಕೊಂಡಿದ್ದ ಅಜರುದ್ದೀನ್ ಲೈಂಗಿಕವಾಗಿ ಬಳಸಿ ಕೊಂಡಿದ್ದಾನೆ. ನಂತರ ನೀನು ಸಹಕರಿಸದಿದ್ದರೆ ವೀಡಿಯೋವನ್ನು ಸೋಶಿಯಲ್ ಮೀಡಿಯಾದಲ್ಲಿ ಅಪ್ಲೋಡ್ ಮಾಡುವುದಾಗಿ ಬೆದರಿಕೆ ಹಾಕಿದ್ದಾನೆ. ಅಲ್ಲದೇ ನನ್ನ ಜೊತೆ ಲೈಂಗಿಕ ಸಂಪರ್ಕ ಮಾಡದೇ ಹೋದರೆ ನಿನ್ನನ್ನು ಸಾಯಿಸುತ್ತೇನೆ ಎಂದು ಬೆದರಿಕೆ ಹಾಕಿದ್ದ ಎಂದು ದೂರಿನಲ್ಲಿ ತಿಳಿಸಿದ್ದಾರೆ. ಇದೀಗ ಶಿಕ್ಷಕ ಅಜರುದ್ದೀನ್ ವಿರುದ್ಧ ಐಪಿಸಿ ಸೆಕ್ಷನ್ 376, 354, 323, 504, 506ರ ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಫೇಮಸ್ ಆಗ್ಬೇಕು ಅಂತ ಸಿನಿಮೀಯ ರೀತಿಯಲ್ಲಿ ಕಥೆ ಕಟ್ಟಿ ಕೋಮುಗಲಭೆ ಸೃಷ್ಟಿಸಲು ಯತ್ನಿಸಿದ ಬಾಲಕ

Live Tv

Comments

Leave a Reply

Your email address will not be published. Required fields are marked *